ಮೀರತ್(ಉತ್ತರ ಪ್ರದೇಶ):ದಕ್ಷಿಣ ಆಫ್ರಿಕಾದ ರೂಪಾಂತರ ಕೋವಿಡ್ ವೈರಸ್ ಒಮಿಕ್ರಾನ್ ಇದೀಗ ಭಾರತಕ್ಕೂ ಲಗ್ಗೆ ಹಾಕಿದ್ದು, ಬೆಂಗಳೂರಿನ ಎರಡು ಪ್ರಕರಣ ಸೇರಿದಂತೆ ದೇಶದಲ್ಲಿ 4 ಕೇಸ್ ದಾಖಲಾಗಿವೆ. ಇದರ ಬೆನ್ನಲ್ಲೇ ವಿದೇಶದಿಂದ ಉತ್ತರ ಪ್ರದೇಶಕ್ಕೆ ಆಗಮಿಸಿದ್ದ 10 ಮಂದಿ ನಾಪತ್ತೆಯಾಗಿದ್ದಾರೆಂದು ಮೀರತ್ ಜಿಲ್ಲಾಡಳಿತ ಮಾಹಿತಿ ನೀಡಿದೆ.
ಕಳೆದ 15 ದಿನದಲ್ಲಿ ಉತ್ತರ ಪ್ರದೇಶಕ್ಕೆ ವಿದೇಶದಿಂದ ಒಟ್ಟು 250 ಜನರು ಆಗಮಿಸಿದ್ದು, ಇದರಲ್ಲಿ 10 ಮಂದಿ ನಾಪತ್ತೆಯಾಗಿದ್ದಾರೆಂದು ಮೀರತ್ ಜಿಲ್ಲಾಡಳಿತ ತಿಳಿಸಿದೆ.
ಇದಕ್ಕೆ ಸಂಬಂಧಿಸಿದಂತೆ ಮಾಧ್ಯಮಗೋಷ್ಠಿ ನಡೆಸಿ ಮಾಹಿತಿ ನೀಡಿರುವ ಮೀರತ್ ಸಿಎಂಒ ಅಖಿಲೇಶ್ ಮೋಹನ್, ಒಮಿಕ್ರಾನ್ ತಡೆಗಟ್ಟಲು ಮೀರತ್ನಲ್ಲೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ಕಳೆದ 15 ದಿನಗಳಲ್ಲಿ 250 ವಿದೇಶಿಗರು ವಾಪಸ್ ಆಗಿದ್ದಾರೆ. ಆದರೆ ಇದರಲ್ಲಿ 10 ಮಂದಿ ನಾಪತ್ತೆಯಾಗಿದ್ದಾರೆಂಬ ಮಾಹಿತಿ ಹಂಚಿಕೊಂಡಿದ್ದಾರೆ.