ಕರ್ನಾಟಕ

karnataka

ETV Bharat / bharat

ಯುವತಿಯರ ಡ್ಯಾನ್ಸ್ ನೋಡಿ ನಾಚಿ ನೀರಾದ ಚಿನ್ನದ ಹುಡುಗ ನೀರಜ್​.. - ಎಫ್​ಎಂನಿಂದ ನೀರಜ್ ಸಂದರ್ಶನ

ಎಫ್​ಎಂ ಸಂದರ್ಶನವೊಂದರಲ್ಲಿ ಚಿನ್ನದ ಪದಕ ವಿಜೇತ ನೀರಜ್​ ಚೋಪ್ರಾ ಮುಂದೆ ಯುವತಿಯರು ಡ್ಯಾನ್ಸ್ ಮಾಡಿರುವ ವಿಡಿಯೋ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ..

ನೀರಜ್​ ಚೋಪ್ರಾ
ನೀರಜ್​ ಚೋಪ್ರಾ

By

Published : Aug 20, 2021, 7:25 PM IST

ಹೈದರಾಬಾದ್ :ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ನಿರಂತರವಾಗಿ ಸುದ್ದಿಯಾಗುತ್ತಲೇ ಇದ್ದಾರೆ. ಇದೀಗ ಎಫ್​ಎಂವೊಂದರ ಸಂದರ್ಶನದ ವೇಳೆ ನೀರಜ್​ ಮುಂದೆ ಹುಡುಗಿಯರು ನೃತ್ಯ ಮಾಡಿರುವ ವಿಡಿಯೋ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

‘ನಾಚಿ ನೀರಾದ ನೀರಜ್’

ಒಲಿಂಪಿಕ್ಸ್​ನಲ್ಲಿ ಭಾಗವಹಿಸಿ ಜಾವೆಲಿನ್​ ಥ್ರೋನಲ್ಲಿ ಚಿನ್ನದ ಪದಕ ಗೆದ್ದಿದ್ದ ನೀರಜ್​ ಚೋಪ್ರಾರನ್ನು ಲಖನೌನ ಎಫ್​ಎಂವೊಂದು ಆನ್​ಲೈನ್​ ಸಂದರ್ಶನ ನಡೆಸಿದೆ. ಈ ಸಮಯದಲ್ಲಿ ಹಾಜರಿದ್ದ ಹುಡುಗಿಯರು ನೀರಜ್​ ಮುಂದೆ ಹಿಂದಿ ಹಾಡೊಂದಕ್ಕೆ (ಉಡೆ ಜಬ್-ಜಬ್ ಜುಲ್ಫೆನ್ ತೇರಿ) ಸಖತ್ ಸ್ಟೆಪ್ಸ್ ಹಾಕಿದ್ದಾರೆ. ನೃತ್ಯ ನೋಡಿ ನಾಚಿದ ನೀರಜ್​, ಅಭಿಮಾನಿಗಳಿಗೆ ಥ್ಯಾಂಕ್ಸ್ ಹೇಳಿದ್ದಾರೆ.

‘ನನ್ನ ಸಂಪೂರ್ಣ ಗಮನ ಕ್ರೀಡೆಯತ್ತ ಮಾತ್ರ’

ಇಷ್ಟೊಂದು ಅಭಿಮಾನಿಗಳ ಪ್ರೀತಿ ಪಡೆದಿರುವುದಕ್ಕೆ ಸಂತೋಷವಿದೆ ಎಂದಿರುವ ಅವರು, ನಾನು ಯಾರನ್ನೂ ಲವ್ ಮಾಡಿಲ್ಲ. ಸದ್ಯ ನನ್ನ ಗಮನವೆಲ್ಲವೂ, ನನ್ನ ಆಟದ ಮೇಲೆ ಮಾತ್ರ ಎಂದಿದ್ದಾರೆ.

‘ಕುಟುಂಬಸ್ಥರ ಅನುಮತಿ ಪಡೆದು ಮದುವೆ’

ನನ್ನ ಕುಟುಂಬಸ್ಥರ ಇಚ್ಛೆಯಂತೆ ಮದುವೆಯಾಗಲು ನನಗೆ ಯಾವುದೇ ಅಡ್ಡಿ, ಆತಂಕಗಳಿಲ್ಲ. ಒಂದು ವೇಳೆ ನಾನು ಪ್ರೇಮವಿವಾಹ ಆಗಲು ಬಯಸಿದರೂ ಸಮಸ್ಯೆಗಳಾಗುವುದಿಲ್ಲ. ಕುಟುಂಬಸ್ಥರೊಂದಿಗೆ ಮಾತನಾಡಿ, ಅವರ ಅನುಮತಿ ಪಡೆದೇ ಮದುವೆಯಾಗುತ್ತೇನೆ ಎಂದರು.

ಪ್ರಧಾನಿ ಪ್ರಶ್ನೆಗೆ ‘ಆತ್ಮವಿಶ್ವಾಸ’ದಿಂದ ಉತ್ತರಿಸಿದ ನೀರಜ್

ಪ್ರಧಾನಿ ಮೋದಿ ತಮ್ಮ ನಿವಾಸದಲ್ಲಿ ಒಲಿಂಪಿಕ್ಸ್​ ಕ್ರೀಡಾಪಟುಗಳ ಜತೆ ಸಂವಾದ ನಡೆಸಿದರು. ಈ ವೇಳೆ ನೀರಜ್​ ಚೋಪ್ರಾಗೆ ತಮ್ಮ ಗೆಲುವಿನ ಗುಟ್ಟು ಏನು ಎಂದು ಕೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ನೀರಜ್​, ಆತ್ಮವಿಶ್ವಾಸವಿದ್ದರೆ ಏನು ಬೇಕಾದರೂ ಸಾಧಿಸಬಹುದು. ಆ ಆತ್ಮವಿಶ್ವಾಸವು ನಮ್ಮ ತರಬೇತಿಯಿಂದ ಬರುತ್ತದೆ. ನಿರಂತರ ಅಭ್ಯಾಸ ಮಾಡಿದರೆ ಯಾವುದೂ ಕಷ್ಟವಲ್ಲ ಎಂದರು.

ಇದನ್ನೂ ಓದಿ: ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ 15 ಪದಕ ಗೆಲ್ಲುವ ನಿರೀಕ್ಷೆಯಲ್ಲಿ ಭಾರತ ತಂಡ

ABOUT THE AUTHOR

...view details