ಕರ್ನಾಟಕ

karnataka

ETV Bharat / bharat

4 ರಾಜ್ಯಗಳಲ್ಲಿ ಚುನಾವಣೆ ನಡೆದಿದ್ದು, ಬಂಗಾಳದಲ್ಲೇಕೆ ಹಿಂಸಾಚಾರ: ಕಾಂಗ್ರೆಸ್ ಪ್ರಶ್ನೆ - ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಚುನಾವಣಾ ಕಾವು ಹೆಚ್ಚಾಗುತ್ತಿದ್ದು, ಬಿಜೆಪಿ ಹಾಗೂ ಟಿಎಂಸಿ ಕಾರ್ಯಕರ್ತರ ನಡುವೆ ಮತ್ತೆ ಗಲಾಟೆ ನಡೆದಿದೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಬಿಜೆಪಿ ವಿರುದ್ಧ ಸಿಎಂ ಮಮತಾ ಬ್ಯಾನರ್ಜಿ ಕಿಡಿಕಾರಿದ್ದಾರೆ.

of-states-having-polls-only-bengal-reported-violence-adhir
4 ರಾಜ್ಯಗಳಲ್ಲಿ ಚುನಾವಣೆ ನಡೆದಿದೆ..ಆದರೆ ಬಂಗಾಳದಲ್ಲೇಕೆ ಹಿಂಸಾಚಾರ

By

Published : Apr 8, 2021, 3:54 PM IST

ಕೋಲ್ಕತ್ತಾ (ಪ.ಬಂ): ನಾಲ್ಕು ರಾಜ್ಯ ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಚುನಾವಣೆ ನಡೆದಿದೆ. ಆದರೆ ಪಶ್ಚಿಮ ಬಂಗಾಳದಲ್ಲಿ ಮಾತ್ರ ಹಿಂಸಾಚಾರ ಮುಂದುವರೆದಿದೆ.

ಈ ನಾಲ್ಕು ಕಡೆ ನಡೆಯದ ಹಿಂಸಾಚಾರ ಪಶ್ಚಿಮ ಬಂಗಾಳದಲ್ಲೇ ಏಕೆ ನಡೆಯುತ್ತಿದೆ ಎಂದು ಕಾಂಗ್ರೆಸ್​ ನಾಯಕ ಅಧೀರ್ ರಂಜನ್​ ಚೌಧರಿ ಪ್ರಶ್ನಿಸಿದ್ದಾರೆ. ಟಿಎಂಸಿ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಎಲ್ಲೆಡೆ ಹಿಂಸಾಚಾರ ನಡೆಯುತ್ತಿದೆ.

ವಿವಿಧ ಘಟನೆಗಳಲ್ಲಿ ಐವರು ಅಭ್ಯರ್ಥಿಗಳು ಗಾಯಗೊಂಡಿದ್ದಾರೆ. ಇದರಲ್ಲಿ ಇಬ್ಬರು ಮಹಿಳೆಯರು ಸೇರಿದ್ದಾರೆ. ಕೇಂದ್ರ ಪಡೆಗಳ ಮೂಲಕ ಕೇಂದ್ರ ಸರ್ಕಾರ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಸಿಎಂ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಲೋಕಸಭೆ ಪ್ರತಿಪಕ್ಷ ನಾಯಕ ಅಧೀರ್​, ಕೇವಲ ಕೇಂದ್ರ ಮೀಸಲು ಪಡೆಗಳಷ್ಟೇ ಅಲ್ಲ, ರಾಜ್ಯ ಪೊಲೀಸರು ಇದಕ್ಕೆ ಹೊಣೆ ಆಗಿದ್ದಾರೆ ಎಂದು ಆರೋಪಿಸಿದ್ದಾರೆ. ಟಿಎಂಸಿ ಮತ್ತು ಬಿಜೆಪಿ ನಡುವೆ ಅಷ್ಟೇ ಬಂಗಾಳದಲ್ಲಿ ಚುನಾವಣೆ ಪೈಪೋಟಿ ಏರ್ಪಟ್ಟಿಲ್ಲ, ಇಲ್ಲಿ ಮೂರನೇ ರಂಗವೂ ಇವರೆಡೂ ಪಕ್ಷಗಳಿಗೆ ಸಖತ್​ ಫೈಟ್​ ನೀಡುತ್ತಿದೆ. ಆದರೆ ಮಾಧ್ಯಮಗಳು ಈ ಬಗ್ಗೆ ಸರಿಯಾಗಿ ವರದಿ ಮಾಡುತ್ತಿಲ್ಲ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ:ಲಸಿಕೆ ತಯಾರಿಕೆ ವಿಳಂಬ: ಸೆರಮ್​ ಇನ್ಸಿಟ್ಯೂಟ್​ ಆಫ್​​ ಇಂಡಿಯಾಕ್ಕೆ ಆಸ್ಟ್ರಾಜೆನಿಕಾ ನೋಟಿಸ್​

ABOUT THE AUTHOR

...view details