ಕರ್ನಾಟಕ

karnataka

By

Published : Jun 5, 2023, 10:37 PM IST

ETV Bharat / bharat

ನವ ವಿವಾಹಿತನ ಬಲಿ ಪಡೆದ ಒಡಿಶಾ ರೈಲು ದುರಂತ: ಕುಟುಂಬಸ್ಥರ ಆಕ್ರಂದನ

ಒಡಿಶಾದ ಬಾಲಸೋರ್​ನಲ್ಲಿ ನಡೆದ ರೈಲು ದುರಂತದಲ್ಲಿ ನವ ವಿವಾಹಿತನೋರ್ವ ಮೃತಪಟ್ಟಿದ್ದಾನೆ.

odisha-train-tragedy-husband-of-newly-married-woman-died-in-darbhanga
ನವ ವಿವಾಹಿತನನ್ನು ಬಲಿ ಪಡೆದ ಒಡಿಶಾ ರೈಲು ದುರಂತ : ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

ದರ್ಭಂಗಾ (ಬಿಹಾರ) : ಒಡಿಶಾದ ಬಾಲಸೋರ್​ನಲ್ಲಿ ನಡೆದ ಭೀಕರ ರೈಲು ದುರಂತದಲ್ಲಿ ಸುಮಾರು 270ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದು, ಸಾವಿರಾರು ಮಂದಿ ಗಾಯಗೊಂಡಿದ್ದಾರೆ. ಭೀಕರ ರೈಲು ದುರಂತದಲ್ಲಿ ನವ ವಿವಾಹಿತನೋರ್ವ ಸಾವನ್ನಪ್ಪಿದ್ದು, ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಸ್ಮಶಾನ ಮೌನ ಆವರಿಸಿದೆ.

ಬಾಲಸೋರ್​ನಲ್ಲಿ ನಡೆದ ತ್ರಿವಳಿ ರೈಲು ಅಪಘಾತದಲ್ಲಿ ಹಲವರು ಮೃತಪಟ್ಟರೆ ಕೆಲವರು ಅದೃಷ್ಟವಶಾತ್​ ಬದುಕುಳಿದಿದ್ದಾರೆ. ಕಳೆದ ಒಂದು ತಿಂಗಳ ಹಿಂದೆ ಮದುವೆಯಾಗಿದ್ದ ಬಿಹಾರದ ದರ್ಭಂಗಾ ಜಿಲ್ಲೆಯ ಮನಿಯಾರಿ ಗ್ರಾಮದ ನರೇಶ್​ ಯಾದವ್​ ಎಂಬವರ ಪುತ್ರ ಅಖಿಲೇಶ್​ ಕುಮಾರ್​ ಯಾದವ್​​ ಅವಘಡದಲ್ಲಿ ಸಾವನ್ನಪ್ಪಿದ್ದಾನೆ. ಚೆನ್ನೈನಲ್ಲಿ ಜ್ಯೂಸ್​ ಮಾರಾಟ ಮಾಡುತ್ತಿದ್ದ ಅಖಿಲೇಶ್​ ಯಾದವ್​ಗೆ ಕಳೆದ ಮೇ 7 ರಂದು ವಿವಾಹವಾಗಿತ್ತು. ವಿವಾಹದ ಬಳಿಕ ಅಖಿಲೇಶ್​ ತನ್ನ ಕುಟುಂಬಸ್ಥರಲ್ಲಿ ಮತ್ತು ಮಡದಿಯಲ್ಲಿ ಕೆಲಸದ ನಿಮಿತ್ತ ಚೆನ್ನೈಗೆ ತೆರಳುವುದಾಗಿ ಹೇಳಿ ಹೊರಟಿದ್ದ. ಈ ವೇಳೆ ನಡೆದ ರೈಲು ಅಪಘಾತದಲ್ಲಿ ಅಖಿಲೇಶ್ ಸ್ಥಳದಲ್ಲೇ​ ಮೃತಪಟ್ಟಿದ್ದು, ಅಖಿಲೇಶ್​ ಮಡದಿ ರೂಪಾದೇವಿ ತನ್ನ ಗಂಡನನ್ನು ನೆನೆದು ಕಣ್ಣೀರು ಹಾಕುತ್ತಿದ್ದಾಳೆ.

ನಮ್ಮಿಬ್ಬರ ಮದುವೆ ಮೇ 27ರಂದು ನಡೆದಿತ್ತು. ನನ್ನ ಗಂಡ ಮೊದಲಿನಿಂದಲೂ ಜ್ಯೂಸ್​​ ಮಾರಾಟ ಮಾಡುತ್ತಿದ್ದ. ಜೂನ್​ 1 ರಂದು ಚೆನ್ನೈಗೆ ತೆರಳುವುದಾಗಿ ಹೇಳಿ ಹೊರಟಿದ್ದ ಎಂದು ಮೃತ ಅಖಿಲೇಶ್​​ ಮಡದಿ ರೂಪಾದೇವಿ ಕಣ್ಣೀರಾದರು.

ಒಟ್ಟಿಗೆ ತೆರಳಿದ್ಧ ಇಬ್ಬರೂ ಸಾವು: ಅಖಿಲೇಶ್​ ಕುಮಾರ್​ ಯಾದವ್​ ಜೊತೆಗೆ ಇದೇ ಗ್ರಾಮದ ಭಾವು ಸಾಹೇಬ್​ ಸನ್ಹಿ ಕೂಡ ಚೆನ್ನೈಗೆ ತೆರಳಿದ್ದರು. ರೈಲು ಅಪಘಾತದಲ್ಲಿ ಇಬ್ಬರೂ ಸಾವನ್ನಪ್ಪಿದ್ದಾರೆ. ಇವರ ಬಳಿಯಿದ್ದ ಆಧಾರ್​ ಕಾರ್ಡ್​ ಮೂಲಕ ಇವರ ಗುರುತು ಪತ್ತೆಯಾಗಿದೆ. ಬಳಿಕ ಇವರ ಕುಟುಂಬಸ್ಥರಿಗೆ ದುರಂತ ನಡೆಸದಿರುವುದು ಗೊತ್ತಾಗಿದ್ದು, ಮೃತದೇಹವನ್ನು ಗ್ರಾಮಕ್ಕೆ ತರಲು ಸ್ಥಳಕ್ಕೆ ದೌಡಾಯಿಸಿದ್ದಾರೆ.

ಒಡಿಶಾ ಸರ್ಕಾರ ನಿರ್ಲಕ್ಷ್ಯ ಆರೋಪ: ಮೃತದೇಹವನ್ನು ಒಯ್ಯಲು ಬಂದ ಮೃತರ ಸಂಬಂಧಿಕರಿಗೆ ಮೃತದೇಹವನ್ನು ಹಸ್ತಾಂತರಿಸುವಲ್ಲಿ ಒಡಿಶಾ ಸರ್ಕಾರ ಸರಿಯಾದ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಈ ಒಡಿಶಾ ಸರ್ಕಾರವು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡರೆ ಮೃತರ ಸಂಬಂಧಿಕರು ಅಂತ್ಯಕ್ರಿಯೆಗಳನ್ನು ನಡೆಸಲು ಅನುಕೂಲವಾಗುತ್ತದೆ ಎಂದು ಮುಖ್ಯ ಪ್ರತಿನಿಧಿ ಜನಕ್​ ಪಸ್ವಾನ್​ ಹೇಳಿದ್ದಾರೆ.

ಸಿಬಿಐ ತನಿಖೆಗೆ ಶಿಫಾರಸ್ :ಒಡಿಶಾ ರೈಲು ದುರಂತದ ಬಗ್ಗೆ ಸಿಬಿಐ (ಕೇಂದ್ರೀಯ ತನಿಖಾ ಸಂಸ್ಥೆ) ತನಿಖೆಗೆ ರೈಲ್ವೆ ಮಂಡಳಿ ಶಿಫಾರಸು ಮಾಡಿದೆ. ರೈಲ್ವೆ ಮಂಡಳಿಯು ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಶಿಫಾರಸು ಮಾಡಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದರು. ಸದ್ಯ ಅಪಘಾತದಿಂದ ಹಾಳಾಗಿದ್ದ ಹಳಿಗಳನ್ನು ದುರಸ್ಥಿಗೊಳಿಸಲಾಗಿದೆ.

ಇದನ್ನೂ ಓದಿ :51 ಗಂಟೆಯಲ್ಲಿ ಎರಡೂ ರೈಲು ಹಳಿಗಳ ದುರಸ್ತಿ.. ಕೈ ಮುಗಿದ ರೈಲ್ವೆ ಸಚಿವ.. ವಿಡಿಯೋ!

ABOUT THE AUTHOR

...view details