ಕರ್ನಾಟಕ

karnataka

ETV Bharat / bharat

ಸ್ವಾತಂತ್ರ್ಯ ಹೋರಾಟಗಾರನ ಹೆಸರಲ್ಲಿ ದೇಶದ ಅತಿ ದೊಡ್ಡ ಹಾಕಿ ಮೈದಾನಕ್ಕೆ ಶಂಕುಸ್ಥಾಪನೆ.. ಎಲ್ಲಿ ಗೊತ್ತಾ? - ಬಿಜು ಪಟ್ನಾಯಕ್ ತಾಂತ್ರಿಕ ವಿಶ್ವವಿದ್ಯಾಲಯ

ಬಿಜು ಪಟ್ನಾಯಕ್ ತಾಂತ್ರಿಕ ವಿಶ್ವವಿದ್ಯಾಲಯದ ಕ್ಯಾಂಪಸ್​ನಲ್ಲಿರುವ ಸುಮಾರು 15 ಎಕರೆ ಪ್ರದೇಶದಲ್ಲಿ ಈ ಮೈದಾನವನ್ನು ನಿರ್ಮಿಸಲಾಗುತ್ತಿದ್ದು, ಅಂದಾಜು 20 ಸಾವಿರ ಮಂದಿ ಏಕಕಾಲಕ್ಕೆ ಪಂದ್ಯವನ್ನು ವೀಕ್ಷಿಸಬಹುದಾಗಿದೆ.

Odisha CM lays foundation of India's largest Hockey stadium
ಬಿರ್ಸಾ ಮುಂಡಾ ಇಂಟರ್​ನ್ಯಾಷನಲ್ ಹಾಕಿ ಸ್ಟೇಡಿಯಂ

By

Published : Feb 16, 2021, 4:02 PM IST

Updated : Feb 16, 2021, 10:39 PM IST

ರೂರ್ಕೆಲಾ (ಒಡಿಶಾ):ಭಾರತದ ಅತಿ ದೊಡ್ಡ ಹಾಕಿ ಮೈದಾನದ ಕಾಮಗಾರಿಗೆ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸುಂದರ್​ಗಢ ಜಿಲ್ಲೆಯ ರೂರ್ಕೆಲಾ ನಗರದಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ.

ಈ ಹಾಕಿ ಮೈದಾನಕ್ಕೆ ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಅವರ ಹೆಸರಿಡಲಾಗಿದ್ದು, 2023ರಲ್ಲಿ ಪುರುಷರ ಹಾಕಿ ವಿಶ್ವಕಪ್​ ಅನ್ನು ಭುವನೇಶ್ವರದಲ್ಲಿನ ಕಳಿಂಗಾ ಹಾಕಿ ಮೈದಾನದ ಜೊತೆಗೂಡಿ ಈ ಮೈದಾನದಲ್ಲಿ ಆಯೋಜನೆ ಮಾಡಲಾಗುತ್ತದೆ.

ಬಿರ್ಸಾ ಮುಂಡಾ ಇಂಟರ್​ನ್ಯಾಷನಲ್ ಹಾಕಿ ಸ್ಟೇಡಿಯಂ

ಬಿಜು ಪಟ್ನಾಯಕ್ ತಾಂತ್ರಿಕ ವಿಶ್ವವಿದ್ಯಾಲಯದ ಕ್ಯಾಂಪಸ್​ನಲ್ಲಿರುವ ಸುಮಾರು 15 ಎಕರೆ ಪ್ರದೇಶದಲ್ಲಿ ಈ ಮೈದಾನವನ್ನು ನಿರ್ಮಿಸಲಾಗುತ್ತಿದ್ದು, ಅಂದಾಜು 20 ಸಾವಿರ ಮಂದಿ ಏಕಕಾಲಕ್ಕೆ ಪಂದ್ಯವನ್ನು ವೀಕ್ಷಿಸಬಹುದಾಗಿದೆ.

ಇದನ್ನೂ ಓದಿ:ಹಿಂದಕ್ಕೆ ಸರಿದ ಭಾರತ,ಚೀನಾ ಸೇನಾಪಡೆಗಳು.. ಇನ್ಮುಂದೆ ಪ್ಯಾಂಗಾಂಗ್ ನಿರಾಳ.. ಚಿತ್ರಪಟಗಳು..

ನವೀನ್ ಪಟ್ನಾಯಕ್ ಸುಂದರ್​​ಗಢ ಜಿಲ್ಲೆಯಲ್ಲಿ 4,915 ಕೋಟಿ ರೂಪಾಯಿ ಮೌಲ್ಯದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡುವ ವೇಳೆ, ಈ ಹಾಕಿ ಮೈದಾನ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.

ಬಿರ್ಸಾ ಮುಂಡಾ ಇಂಟರ್​ನ್ಯಾಷನಲ್ ಹಾಕಿ ಸ್ಟೇಡಿಯಂ

ಕುಡಿಯುವ ನೀರಿನ ಪೂರೈಕೆಗೆ 1,611 ಕೋಟಿ, ನೀರಾವರಿಗೆ 320 ಕೋಟಿ, ಆರೋಗ್ಯ ಸೇವೆಗಳಿಗೆ 111 ಕೋಟಿ, ರಸ್ತೆ ಮತ್ತು ಸೇತುವೆಗಳಿಗೆ 1,060 ಕೋಟಿ, ಶೈಕ್ಷಣಿಕ ಯೋಜನೆಗಳ ಕಾಮಗಾರಿಗಳಿಗೆ 366 ಕೋಟಿ, ಚರಂಡಿ ವ್ಯವಸ್ಥೆಗೆ 250 ಕೋಟಿ, ಸ್ಮಾರ್ಟ್​ ಸಿಟಿ ಅಭಿವೃದ್ಧಿ ಕಾಮಗಾರಿಗಳಿಗೆ 471 ಕೋಟಿ ರೂಪಾಯಿ ಹಾಗೂ ಮತ್ತಿತರ ಯೋಜನೆಗಳಿಗೆ ಒಡಿಶಾ ಸಿಎಂ ಶಂಕುಸ್ಥಾಪನೆ ನೆರವೇರಿಸಿದ್ದಾರೆ.

Last Updated : Feb 16, 2021, 10:39 PM IST

ABOUT THE AUTHOR

...view details