ಅಮರಾವತಿ/ಆಂಧ್ರಪ್ರದೇಶ :ಮಿಜೋರಾಂ-ಮ್ಯಾನ್ಮಾರ್ ಗಡಿಯಲ್ಲಿ ಅಸ್ಸೋಂ ರೈಫಲ್ಸ್ ವಶಪಡಿಸಿಕೊಂಡ ಮಾನವ ಕೂದಲಿಗೆ ಹಾಗೂ ತಮಗೆ ಯಾವುದೇ ಸಂಬಂಧವಿಲ್ಲ ಎಂದು ತಿರುಮಲ ತಿರುಪತಿ ದೇವಸ್ತಾನಂ (ಟಿಟಿಡಿ) ಮಂಗಳವಾರ ಸ್ಪಷ್ಟಪಡಿಸಿದೆ.
ಇತ್ತೀಚೆಗೆ ಅಸ್ಸೋಂ ರೈಫಲ್ಸ್ 120 ಚೀಲಗಳ ಮಾನವ ಕೂದಲನ್ನು ವಶಪಡಿಸಿಕೊಂಡಿದೆ. ಯಾವುದೇ ಅಧಿಕೃತ ದಾಖಲೆಗಳಿಲ್ಲದಿರುವುದರಿಂದ ತಿರುಪತಿ ದೇವಸ್ಥಾನದಿಂದ ಬಂದಿರಬಹುದೆಂದು ಶಂಕಿಸಲಾಗಿತ್ತು. ಅಲ್ಲದೇ ಹೆಚ್ಚಿನ ಸಂಸ್ಕರಣೆಗಾಗಿ ಕೂದಲನ್ನು ಮ್ಯಾನ್ಮಾರ್ ಮತ್ತು ಇತರ ದೇಶಗಳಿಗೆ ಕಳ್ಳಸಾಗಣೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಶಂಕಿಸಿದ್ದರು.