ಲಂಡನ್ :ಹಣದುಬ್ಬರದಿಂದ ಜಾಗತಿಕವಾಗಿ ಜೀವನ ವೆಚ್ಚ ಹೆಚ್ಚಿರುವುದರಿಂದ ಟೆಲ್ ಅವಿವ್ ವಾಸಿಸಲು ವಿಶ್ವದ ಅತ್ಯಂತ ದುಬಾರಿ ನಗರವಾಗಿದೆ ಎಂದು ಬುಧವಾರ ಪ್ರಕಟವಾದ ಸಮೀಕ್ಷೆಯೊಂದು ತಿಳಿಸಿದೆ.
ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್ (EIU) ಸಂಗ್ರಹಿಸಿದ ಅಧಿಕೃತ ಶ್ರೇಯಾಂಕದಲ್ಲಿ ಮೊದಲ ಬಾರಿಗೆ ಈ ನಗರವು ಐದನೇ ಸ್ಥಾನದಿಂದ ಮೊದಲ ಸ್ಥಾನಕ್ಕೆ ತಲುಪಿದೆ. 173 ನಗರಗಳಲ್ಲಿನ ಸರಕು ಮತ್ತು ಸೇವೆಗಳಿಗೆ ಯುಎಸ್ ಡಾಲರ್‌ಗಳಲ್ಲಿ ಬೆಲೆಗಳನ್ನು ಹೋಲಿಸಿ ವಿಶ್ವಾದ್ಯಂತ ಜೀವನ ವೆಚ್ಚ ಸೂಚ್ಯಂಕವನ್ನು ಸಂಕಲಿಸಲಾಗಿದೆ.
ಪ್ಯಾರಿಸ್ ಮತ್ತು ಸಿಂಗಾಪುರ ಜಂಟಿಯಾಗಿ ಎರಡನೇ ಸ್ಥಾನ ಗಳಿಸಿವೆ. ಈ ಪಟ್ಟಿಯಲ್ಲಿ ಜ್ಯೂರಿಚ್ 3ನೇ ಸ್ಥಾನದಲ್ಲಿದೆ ಮತ್ತು ಹಾಂಗ್‌ಕಾಂಗ್ 5ನೇ ಸ್ಥಾನದಲ್ಲಿದೆ. ಮತ್ತೊಂದೆಡೆ, ನ್ಯೂಯಾರ್ಕ್ 6ನೇ ಸ್ಥಾನದಲ್ಲಿದ್ದರೆ, ಜಿನೀವಾ 7ನೇ ಸ್ಥಾನದಲ್ಲಿದೆ. 8ನೇ ಸ್ಥಾನದಲ್ಲಿ ಕೋಪನ್ ಹ್ಯಾಗನ್, 9ನೇ ಸ್ಥಾನದಲ್ಲಿ ಲಾಸ್ ಏಂಜಲೀಸ್ ಮತ್ತು 10ನೇ ಸ್ಥಾನದಲ್ಲಿ ಜಪಾನ್‌ನ ಒಸಾಕಾ ನಗರವಿದೆ.
ವಿಶ್ವದ 10 ಅತ್ಯಂತ ದುಬಾರಿ ನಗರಗಳು 2021
1. ಟೆಲ್ ಅವಿವ್
2. ಪ್ಯಾರಿಸ್
3. ಸಿಂಗಾಪುರ