ನವದೆಹಲಿ :ಬ್ರಿಟನ್‌ಗೆ ಪ್ರಯಾಣಿಸುವ ಭಾರತೀಯರಿಗೆ ಕೋವಿಶೀಲ್ಡ್‌ನ ಎರಡು ಡೋಸ್ ಲಸಿಕೆ ಪಡೆದಿದ್ದರೂ "ಲಸಿಕೆ ಹಾಕಿಸಿಕೊಂಡಿಲ್ಲ'' ಎಂದು ಪರಿಗಣಿಸಲಾಗುತ್ತಿರುವ ಸಮಸ್ಯೆಯನ್ನು ಪರಿಹರಿಸುವ ಬಗ್ಗೆ ಯುಕೆ ಭರವಸೆ ನೀಡಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷ ಶೃಂಗ್ಲಾ ಮಂಗಳವಾರ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನಾಳೆ (ಸೆ.22) ಅಮೆರಿಕ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಈ ಕುರಿತು ಮಂಗಳವಾರ ಇಲ್ಲಿ ಪಿಎಂ ಮೋದಿಯವರ ಯುಎಸ್ ಭೇಟಿಯ ಕುರಿತು ವಿಶೇಷ ಮಾಧ್ಯಮ ಬ್ರೀಫಿಂಗ್ ಅನ್ನು ಉದ್ದೇಶಿಸಿ ಮಾತನಾಡಿದ ಶೃಂಗ್ಲಾ, ಕೋವಿಶೀಲ್ಡ್ ಅನ್ನು ಗುರುತಿಸದಿರುವುದನ್ನು "ತಾರತಮ್ಯ ನೀತಿ" ಎಂದು ಕರೆದರು. ಇದು ಯುಕೆಗೆ ಪ್ರಯಾಣಿಸುವ ಭಾರತೀಯ ನಾಗರಿಕರ ಮೇಲೆ ಪರಿಣಾಮ ಬೀರುತ್ತದೆ ಎಂದರು.
ಕೇಂದ್ರದ ವಿದೇಶಾಂಗ ವ್ಯವಹಾರಗಳ ಸಚಿವರು ನೂತನ ಯುಕೆ ವಿದೇಶಾಂಗ ಕಾರ್ಯದರ್ಶಿಯೊಂದಿಗೆ ಸಮಸ್ಯೆಯನ್ನು ಬಲವಾಗಿ ಪ್ರಸ್ತಾಪಿಸಿದ್ದಾರೆ. ಈ ಸಮಸ್ಯೆಯನ್ನು ಪರಿಹರಿಸಲಾಗುವುದು ಎಂದು ಕೆಲವು ಭರವಸೆಗಳನ್ನು ಅವರು ನೀಡಿದ್ದಾರೆ ಎಂದು ಶೃಂಗ್ಲಾ ತಿಳಿಸಿದರು.