ನವದೆಹಲಿ: ಬ್ಯಾಟರಿ ಸೇರಿದಂತೆ ರಫ್ ಆ್ಯಂಡ್ ಟಫ್ ಯೂಸ್ಗೆ ಹೆಸರುವಾಸಿಯಾಗಿರುವ ಖ್ಯಾತ ಕಂಪನಿ ನೋಕಿಯಾ ಇದೀಗ ಮತ್ತೊಂದು ಹೊಸ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆಗೊಳಿಸುವ ಮೂಲಕ ಮತ್ತೆ ಕಮ್ಬ್ಯಾಕ್ಗೆ ಸಿದ್ದವಾಗಿದೆ. ನೋಕಿಯಾದ ಹೆಚ್ಎಮ್ಡಿ ಗ್ಲೋಬಲ್ ಇಂದು ಭಾರತದಲ್ಲಿ G42 ಹೆಸರಿನ ನೋಕಿಯಾ 5G ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. G ಸರಣಿಯ ಈ ಸ್ಮಾರ್ಟ್‌ಫೋನ್ 6.56 ಇಂಚಿನ ಹೆಚ್ಡಿ ಡಿಸ್ಪ್ಲೇ, 90Hz ರಿಫ್ರೆಶ್ ರೇಟ್ ಜತೆಗೆ ಸ್ನ್ಯಾಪ್ಡ್ರಾಗನ್480+5G ಪ್ರೊಸೆಸರ್, ಹೈಬ್ರಿಡ್ಸಿಮ್ ಸ್ಲಾಟ್ ಹೊಂದಿರಲಿದೆ.
ಕ್ಯಾಮೆರಾ: Nokia G42, 5G ಸೆಟ್ ಹೆಚ್ಚುವರಿ RAM ಹೊಂದಿದ್ದು, ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಇರಲಿದೆ. 50MP ಪ್ರೈಮರಿ ಕ್ಯಾಮೆರಾ, ಜೊತೆಗೆ ಹೆಚ್ಚುವರಿ 2MP ಮ್ಯಾಕ್ರೋ ಮತ್ತು 2MP ಡೆಪ್ತ್ ಕ್ಯಾಮೆರಾಗಳನ್ನು ಒಳಗೊಂಡಿದ್ದು, 8MP ಸೆಲ್ಫಿ ಕ್ಯಾಮೆರಾ ಹಾಗೂ ಎಲ್ಇಡಿ ಫ್ಲ್ಯಾಷ್ ಇರಲಿದೆ. ಹಾಗೆ ಆಂಡ್ರಾಯ್ಡ್13 ಜತೆಗೆ ಎರಡು ವರ್ಷಗಳ ಕಾಲ ಆಪರೇಟಿಂಗ್ ಸಿಸ್ಟಮ್ನ ಅಪ್ಡೇಟ್ ಮತ್ತು 3 ವರ್ಷಗಳ ಕಾಲ ಸೆಕ್ಯೂರಿಟಿ ಅಪ್ಡೇಟ್ ಅನ್ನು ನೋಕಿಯಾ ಖಚಿತ ಪಡಿಸಿದೆ.
ಲಾಕಿಂಗ್ ಫೀಚರ್ಸ್:ಸೇಡ್ ಫಿಂಗರ್ಪ್ರಿಂಟ್, ಫೇಸ್ಅನ್ಲಾಕ್ ಫೀಚರ್ ಅನ್ನು ಒಳಗೊಂಡಿದೆ.
ಬ್ಯಾಟರಿ:ಈ ಮೊಬೈಲ್ 5000mAh ಬ್ಯಾಟರಿ ಹೊಂದಿದ್ದು ಟೈಪ್ ಸಿ ಪೋರ್ಟ್ ಕೇಬಲ್ನೊಂದಿಗೆ 20W ಫಾಸ್ಟ್ ಚಾರ್ಜರ್ ಸಪೋರ್ಟ್ ಮಾಡಲಿದೆ.