ಕರ್ನಾಟಕ

karnataka

ಬಿಜೆಪಿಯಲ್ಲಿ ಕುಟುಂಬ ರಾಜಕಾರಣಕ್ಕೆ ಅವಕಾಶವಿಲ್ಲ: ಪ್ರಧಾನಿ ಮೋದಿ ಕಠಿಣ ಸಂದೇಶ

By

Published : Mar 15, 2022, 1:47 PM IST

ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಅಭಿನಂದಿಸಲಾಯಿತು.

PM Modi
PM Modi

ನವದೆಹಲಿ:ಭಾರತೀಯ ಜನತಾ ಪಕ್ಷವು ಕುಟುಂಬ ರಾಜಕಾರಣದ ವಿರುದ್ಧವಿದೆ. ನಮ್ಮ ಪಕ್ಷದಲ್ಲಿ ಸ್ವಜನಪಕ್ಷಪಾತಕ್ಕೂ ಅವಕಾಶ ಇಲ್ಲ. ವಿಧಾನಸಭಾ ಚುನಾವಣೆಗಳಲ್ಲಿ ಸಂಸದರ ಮಕ್ಕಳು ಪಕ್ಷದ ಟಿಕೆಟ್​ ಪಡೆಯದಿರಲು ನಾನೇ ಕಾರಣ ಮತ್ತು ನಾವು ಕುಟುಂಬ ರಾಜಕಾರಣದ ವಿರುದ್ಧ ಇದ್ದೇವೆ.

ಇದು ಪ್ರಧಾನಿ ನರೇಂದ್ರ ಮೋದಿ ಅವರ ಸ್ಪಷ್ಟ ನುಡಿ ಮತ್ತು ಕಠಿಣ ಸಂದೇಶ. ಐದು ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಬಳಿಕ ಇದೇ ಮೊದಲ ಬಾರಿಗೆ ಮಂಗಳವಾರ ನಡೆದ ಸಂಸದೀಯ ಪಕ್ಷದ ಸಭೆಯಲ್ಲಿ ಪ್ರಧಾನಿ ಮೋದಿ ಮಾತನಾಡಿದರು.

ಸಂಸದರ ಕುಟುಂಬ ಸದಸ್ಯರಲ್ಲಿ ಯಾರಿಗಾದರೂ ಪಕ್ಷದ ಟಿಕೆಟ್​ ನಿರಾಕರಣೆ ಆಗಿದ್ದರೆ, ಅದಕ್ಕೆ ನಾನೇ ಹೊಣೆ. ಪಕ್ಷದಲ್ಲಿ ಸ್ವಜನ ಪಕ್ಷಪಾತಕ್ಕೆ ಅವಕಾಶವೇ ಇಲ್ಲ. ಬಿಜೆಪಿ ಇತರ ಪಕ್ಷಗಳಲ್ಲಿನ ಕುಟುಂಬ ರಾಜಕಾರಣ ಮತ್ತು ಸ್ವಜನಪಕ್ಷಪಾತ ವಿರುದ್ಧ ಹೋರಾಟ ಮಾಡುತ್ತಿದೆ. ಇತ್ತೀಚಿನ ವಿಧಾನಸಭೆಗಳನ್ನು ಉಲ್ಲೇಖಿಸಿದ ಪ್ರಧಾನಿ, ಜಾತಿ ರಾಜಕಾರಣವು ಕೊನೆಗಾಣುವ ಹಂತಕ್ಕೆ ಬಂದಿದೆ ಎಂದು ಹೇಳಿದರು ಅಂತ ಮೂಲಗಳು ತಿಳಿಸಿವೆ.

ಉಕ್ರೇನ್​ನಲ್ಲಿ ಸಿಲುಕಿರುವ ಭಾರತೀಯ ಸ್ಥಳಾಂತರ ವಿಷಯದ ಬಗ್ಗೆಯೂ ಮಾತನಾಡಿದ ಮೋದಿ, ವಿರೋಧ ಪಕ್ಷಗಳ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳ ವರ್ತನೆ ಬಗ್ಗೆ ಟೀಕಿಸಿದರು. ಜನರನ್ನು ಸಮಾಧಾನ ಪಡಿಸುವ ಬದಲು ವಿರೋಧ ಪಕ್ಷಗಳ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಉಕ್ರೇನ್​ನಿಂದ ಮೊದಲ ತಮ್ಮ ರಾಜ್ಯದ ವಿದ್ಯಾರ್ಥಿಗಳನ್ನು ಕರೆತರುವಂತೆ ಕೇಂದ್ರಕ್ಕೆ ಪತ್ರ ಬರೆದಿದ್ದರು ಎಂದು ಪ್ರಧಾನಿ ಕಿಡಿಕಾರಿದರು. ಅಲ್ಲದೇ, ಉಕ್ರೇನ್​ನಲ್ಲಿ ಸಿಲುಕಿದ್ದ ಭಾರತೀಯರ ಕುಟುಂಬ ಸದಸ್ಯರನ್ನು ಭೇಟಿ ಮಾಡಿದ್ದು, ಬಿಜೆಪಿ ಮಾತ್ರ ಎಂದು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು ಎಂದು ಸಂಸದರೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ:ಪಾಕ್​ ನೆಲದಲ್ಲಿ ಭಾರತದ ಕ್ಷಿಪಣಿ: ರಾಜ್ಯಸಭೆಗೆ ಸಚಿವ ರಾಜನಾಥ್​ ಸಿಂಗ್ ನೀಡಿದ ವಿವರಣೆ ಏನು? ​

ABOUT THE AUTHOR

...view details