ನವದೆಹಲಿ :ರಾಜ್ಯಸಭೆಯಲ್ಲಿ ಕೇಂದ್ರ ಬಜೆಟ್ ಕುರಿತ ಚರ್ಚೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಉತ್ತರಿಸಲಿದ್ದಾರೆ.
2021-22ರ ಹಣಕಾಸು ವರ್ಷದ ಕೇಂದ್ರ ಬಜೆಟ್ನ ಹಣಕಾಸು ಸಚಿವೆ ಫೆಬ್ರವರಿ 1ರಂದು ಲೋಕಸಭೆಯಲ್ಲಿ ಮಂಡಿಸಿದ್ದರು. ಮೊಟ್ಟಮೊದಲ ಡಿಜಿಟಲ್ ಯೂನಿಯನ್ ಬಜೆಟ್ ಮಂಡಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಆರಂಭದಲ್ಲಿ ಕೋವಿಡ್ -19 ವಿರುದ್ಧ ಭಾರತದ ಹೋರಾಟವು 2021ರವರೆಗೆ ಮುಂದುವರೆದಿದೆ ಎಂದು ಹೇಳಿದ್ದರು.