ಕರ್ನಾಟಕ

karnataka

ETV Bharat / bharat

ಸೈಕಲ್‌ನಲ್ಲಿ 9 ಮಕ್ಕಳೊಂದಿಗೆ ಸವಾರಿ..: ರಸ್ತೆಯಲ್ಲಿ ಸಿಕ್ಕ ಒಬ್ಬ ಬಹದ್ದೂರು ಗಂಡು!-ವಿಡಿಯೋ - ವ್ಯಕ್ತಿಯೊಬ್ಬ ಸೈಕಲ್​ ಸವಾರಿ ಮಾಡುವ ವೀಡಿಯೊ ವೈರಲ್

ವ್ಯಕ್ತಿಯೊಬ್ಬ ಒಂಬತ್ತು ಮಕ್ಕಳನ್ನು ಒಂದೇ ಸೈಕಲ್‌ನಲ್ಲಿ ಕರೆದುಕೊಂಡು ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​​ ಆಗಿದೆ.

video of a man riding a bicycle with nine children has gone viral
ಒಂಬತ್ತು ಮಕ್ಕಳೊಂದಿಗೆ ವ್ಯಕ್ತಿಯೊಬ್ಬ ಸೈಕಲ್​ ಸವಾರಿ ಮಾಡುವ ವೀಡಿಯೊ ವೈರಲ್

By

Published : Nov 20, 2022, 11:07 AM IST

ಒಂದು ಸೈಕಲ್​ನಲ್ಲಿ ಅಬ್ಬಬ್ಬಾ ಅಂದರೆ ಇಬ್ಬರು ಕುಳಿತುಕೊಳ್ಳಬಹುದು. ಇದಕ್ಕೂ ಹೆಚ್ಚಂದ್ರೆ ಮೂರು ಮಂದಿ ಎನ್ನೋಣವೇ?. ಆದರೆ ಇಲ್ಲೊಬ್ಬ ಒಂಬತ್ತು ಮಕ್ಕಳನ್ನು ಒಂದೇ ಸೈಕಲ್‌ನಲ್ಲಿ ಕರೆದುಕೊಂಡು ಜಾಲಿ ರೈಡ್‌ ಹೊರಟಿದ್ದಾನೆ.

ಇಲ್ಲಿ ಸವಾರ ನಾಲ್ಕು ಮಕ್ಕಳನ್ನು ಸೈಕಲ್‌ನ ಹಿಂದೆ ಕೂರಿಸಿದ್ದಾನೆ. ಅವರಲ್ಲಿ ಕೆಲವರು ಇತರರ ಮೇಲೆ ನಿಂತುಕೊಂಡಿದ್ದು ಸವಾರನ ಹೆಗಲನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಇಬ್ಬರು ಮಕ್ಕಳನ್ನು ಸೈಕಲ್​ನ ಮುಂಭಾಗದ ಸರಳಿನ ಮೇಲೆ ಕೂರಿಸಿದ್ದಾನೆ. ಮುಂಭಾಗದ ಚಕ್ರದ ಮೇಲೂ ತನಗೆ ಎದುರಾಗಿ ಒಂದು ಮಗು ಕುಳಿತುಕೊಂಡಿದೆ. ಉಳಿದ ಇಬ್ಬರು ಮಕ್ಕಳನ್ನು ತೋಳುಗಳ ಮೇಲೆ ಕೂರಿಸಿಕೊಂಡು ಹೀಗೆ ಸವಾರಿ ಹೊರಟು ಅಚ್ಚರಿ ಮೂಡಿಸಿದ್ದಾನೆ. ಈ ವಿಡಿಯೋ ನೋಡಿ ಕೆಲವರು ಹುಬ್ಬೇರಿಸಿದರೆ, ಇನ್ನೂ ಕೆಲವರು ಮಕ್ಕಳ ಪ್ರಾಣ ಪಣಕ್ಕಿಟ್ಟು ಸವಾರನ ಈ ರೀತಿಯ ಬೇಜವಾಬ್ದಾರಿ ಸರಿಯಲ್ಲ ಎಂದು ತಿಳಿಸಿದ್ದಾರೆ.

ಜೈಕಿ ಯಾದವ್ ಎಂಬ ಟ್ವಿಟರ್‌ ಬಳಕೆದಾರರು ತಮ್ಮ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡು, ವಿಶ್ವದ ಜನಸಂಖ್ಯೆ 8 ಬಿಲಿಯನ್ ತಲುಪಿದೆ. ಇಂತಹ ಜನರು ಈ ಗುರಿ ಸಾಧಿಸಲು ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂಬ ತಮಾಷೆಯ ಶೀರ್ಷಿಕೆ ಬರೆದಿದ್ದಾರೆ.

ಇದನ್ನೂ ಓದಿ :ಎಣ್ಣೆ ನಶೆಯಲ್ಲಿ ನಟಿ ಆಶಿಕಾ ರಂಗನಾಥ್ ರಂಪಾಟ ಮಾಡಿದ್ರಾ?!: ವಿಡಿಯೋ ವೈರಲ್

ABOUT THE AUTHOR

...view details