ಗರ್ಹ್ವಾ (ಜಾರ್ಖಂಡ್):ಮೇವು ಹಾಗೂ ನೀರು ಹುಡುಕಿಕೊಂಡು ಬಂದ ನೀಲಗಾಯಿ ಒಂದುಡುಮಾರ್ಸೋಟ ಗ್ರಾಮದ ತೆರೆದ ಬಾವಿಗೆ ಬಿದ್ದಿತ್ತು.
ಇದನ್ನು ಗಮನಿಸಿದ ಗ್ರಾಮಸ್ಥರು ಪ್ರಾಣಿಯನ್ನು ಬಾವಿಯಿಂದ ಹೊರ ತೆಗೆದು ರಕ್ಷಿಸಿದ್ದಾರೆ. ನಿನ್ನೆ ರಾತ್ರಿ ನೀಲ್ಗಾಯ್ ಬಾವಿಗೆ ಬಿದ್ದಿದ್ದು, ಮುಂಜಾನೆ ಗಮನಿಸಿದ ಗ್ರಾಮಸ್ಥರು ರಕ್ಷಣಾ ಕಾರ್ಯ ನಡೆಸಿದ್ದಾರೆ.
ಅರಣ್ಯ ಇಲಾಖೆಯ ನಿರ್ಲಕ್ಷ್ಯ :ಡುಮಾರ್ಸೋಟ ಗ್ರಾಮದ ಗ್ರಾಮಸ್ಥರು ನೀಲಗಾಯಿಯನ್ನು ಬಾವಿಯಲ್ಲಿ ನೋಡಿದ ತಕ್ಷಣ ಅರಣ್ಯ ಇಲಾಖೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದರು.
ಆದರೆ, ಅರಣ್ಯ ಇಲಾಖೆಯ ಬಳಿ ರಕ್ಷಣಾ ಕಾರ್ಯ ನಡೆಸಲು ಸೂಕ್ತ ಪರಿಕರವೇ ಇರಲಿಲ್ಲ. ಹೀಗಾಗಿ, ಸ್ವತಃ ಗ್ರಾಮಸ್ಥರೇ ನೀಲಗಾಯಿಯನ್ನು ರಕ್ಷಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.
ನೀಲಗಾಯಿಗೆ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗಿದೆ. ಆದರೆ, ನೀಲಗಾಯಿಯನ್ನು ರಕ್ಷಿಸಿದ ಸಂಪೂರ್ಣ ಮನ್ನಣೆ ಗ್ರಾಮಸ್ಥರಿಗೇ ಸೇರುತ್ತದೆ.