ನವದೆಹಲಿ: ಉಗ್ರ ಚಟುವಟಿಕೆಗಳಿಗೆ ಹಣ ಪೂರೈಕೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಎನ್‌ಐಎ ಕೋರ್ಟ್ನಿಂದ ಮಹತ್ವದ ತೀರ್ಪು ಹೊರಬಿದ್ದಿದೆ. ಕಾಶ್ಮೀರದ ಪ್ರತ್ಯೇಕತಾವಾದಿ ಹೋರಾಟಗಾರ ಯಾಸೀನ್ ಮಲಿಕ್‌ಗೆ ಜೀವಾವಧಿ ಶಿಕ್ಷೆ ಹಾಗೂ 10 ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಲಾಗಿದೆ. ಕಣಿವೆ ನಾಡು ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನೆ ಹಾಗೂ ಪ್ರತ್ಯೇಕತಾವಾದಿ ಚಟುವಟಿಕೆಗಳಿಗೆ ಹಣಕಾಸಿನ ನೆರವು ನೀಡಿರುವ ಆರೋಪ ಯಾಸಿನ್ ಮಲಿಕ್ ಮೇಲಿದೆ. ಈ ಆರೋಪದಲ್ಲಿ ಈಗಾಗಲೇ ದೋಷಿ ಎಂದು ಸಾಬೀತಾಗಿರುವ ಉಗ್ರ ಯಾಸಿನ್ ಮಲಿಕ್‌ಗೆ ಎನ್‌ಐಎ ನ್ಯಾಯಾಲಯ ಜೀವಾವದಿ ಶಿಕ್ಷೆ ಪ್ರಕಟಿಸಿದೆ.
ಉಗ್ರ ಯಾಸಿನ್ ಮಲಿಕ್‌ಗೆ ಜೀವಾವಧಿ ಶಿಕ್ಷೆ ಇದನ್ನೂ ಓದಿ:ಒಂದೇ ಕಾಲಲ್ಲಿ ಕಿಲೋಮೀಟರ್ ನಡೆದು ಶಾಲೆಗೆ ಬರುವ ವಿದ್ಯಾರ್ಥಿನಿ.. ದಿವ್ಯಾಂಗ ಸೀಮಾ ಎಲ್ಲರಿಗೂ ಸ್ಫೂರ್ತಿ..
ದೆಹಲಿಯ ತಿಹಾರ್ ಜೈಲಿನಲ್ಲಿ 2019 ರಿಂದಲೂ ಜೈಲುಶಿಕ್ಷೆ ಅನುಭವಿಸುತ್ತಿರುವ ಮಲಿಕ್ ವಿರುದ್ಧ ಯುಎಪಿಎ ಕಾಯ್ದೆಯ ಸೆಕ್ಷನ್ 16 (ಭಯೋತ್ಪಾದನಾ ಕೃತ್ಯ), 17 (ಭಯೋತ್ಪಾದನಾ ಚಟುವಟಿಕೆಗೆ ಹಣಕಾಸು ಸಂಗ್ರಹ), 18 (ಭಯೋತ್ಪಾದನಾ ಕೃತ್ಯ ಎಸಗಲು ಸಂಚು) ಮತ್ತು 20 (ಭಯೋತ್ಪಾದನಾ ಗುಂಪು ಅಥವಾ ಸಂಘಟನೆಯ ಸದಸ್ಯನಾಗಿರುವುದು), ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120-B (ಅಪರಾಧ ಸಂಚು) ಮತ್ತು 124-A (ದೇಶದ್ರೋಹ) ಪ್ರಕರಣ ದಾಖಲಿಸಲಾಗಿದೆ. ಆತನ ವಿರುದ್ಧ ಹಾಕಲಾದ ಯಾವುದೇ ಆರೋಪಗಳಿಗೆ ಯಾಸಿನ್ ಮಲಿಕ್ ಒಂಚೂರು ಆಕ್ಷೇಪ ವ್ಯಕ್ತಪಡಿಸಿರಲಿಲ್ಲ.
ಯಾಸಿನ್ ಮಲಿಕ್‌ಗೆ ಮರಣದಂಡನೆ ವಿಧಿಸುವಂತೆ ಎನ್‌ಐಎ ವಿಶೇಷ ಕೋರ್ಟ್ನ ನ್ಯಾಯಾಧೀಶ ಪ್ರವೀಣ್ ಸಿಂಗ್ ಅವರಿಗೆ ಮನವಿ ಸಲ್ಲಿಕೆ ಮಾಡಲಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ದೆಹಲಿ ಎನ್‌ಐಎ ಕೋರ್ಟ್, ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಯಾಸಿನ್ ಮಲಿಕ್ ವಿರುದ್ಧ 2017ರಲ್ಲಿ ಕಾಶ್ಮೀರ ಕಣಿವೆಯಲ್ಲಿ ನಡೆದ ಭಯೋತ್ಪಾದನೆ ಹಾಗೂ ಪ್ರತ್ಯೇಕತಾವಾದ ಚಟುವಟಿಕೆಯ ಆರೋಪಕ್ಕೆ ಸಂಬಂಧಿಸಿದಂತೆ ಈ ಪ್ರಕರಣ ದಾಖಲಾಗಿದೆ. ಪೊಲೀಸ್ ಬಿಗಿ ಭದ್ರತೆಯಲ್ಲಿ ಅವರನ್ನ ಕೋರ್ಟ್ಗೆ ಕರೆತರಲಾಗಿತ್ತು. ಇದರ ಬೆನ್ನಲ್ಲೇ ಕೋರ್ಟ್ನಿಂದ ತೀರ್ಪು ಹೊರಬಿದ್ದಿದೆ.
ಪಿಎಜಿಡಿ ವಿರೋಧ: ಯಾಸಿನ್ ಮಲಿಕ್‌ಗೆ ಜೀವಾವಧಿ ಶಿಕ್ಷೆ ವಿಧಿಸಿರುವುದು ದುರದುಷ್ಟಕರ ಹಾಗೂ ಜಮ್ಮು- ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆ ಪ್ರಯತ್ನಗಳಿಗೆ ಆಗಿರುವ ಹಿನ್ನಡೆ ಎಂದು ಗುಪ್ಕಾರ್ ಕೂಟ ಹೇಳಿಕೊಂಡಿದೆ. ಪಿಎಜಿಡಿ ವಕ್ತಾರ ಮೊಹಮ್ಮದ್ ಯೂಸೂಫ್ ಮಾತನಾಡಿ, ಕೋರ್ಟ್ ತೀರ್ಪು ನೀಡಿದ್ದು, ನ್ಯಾಯ ನೀಡಿಲ್ಲ ಎಂದಿದ್ದಾರೆ.ಇದರಿಂದ ಆ ಪ್ರದೇಶದಲ್ಲಿ ಮತ್ತಷ್ಟು ಅನಿಶ್ಚಿತತೆ ಹೆಚ್ಚಾಗಲಿದೆ.
ಯಾವ ಸೆಕ್ಷನ್ ಅಡಿ ತೀರ್ಪು: ಯಾಸಿನ್ ಮಲಿಕ್‌ಗೆ ಭಾರತೀಯ ದಂಡ ಸಂಹಿತೆ (IPC) ಮತ್ತು ಸೆಕ್ಷನ್ 13 (ಕಾನೂನುಬಾಹಿರ ಚಟುವಟಿಕೆಗಳಿಗೆ ಶಿಕ್ಷೆ), 15 (ಭಯೋತ್ಪಾದಕ) ಸೆಕ್ಷನ್ 121 ಬಿ, 121 (ಯುದ್ಧ ಮಾಡುವುದು ಅಥವಾ ಯುದ್ಧ ಮಾಡಲು ಪ್ರಯತ್ನಿಸುವುದು) ಮತ್ತು 121 ಎ (ಅಪರಾಧಗಳನ್ನು ಮಾಡಲು ಪಿತೂರಿ) ಅಡಿಯಲ್ಲಿ ವಿವಿಧ ಅಪರಾಧಗಳನ್ನು ಆರೋಪಿಸಲಾಗಿದೆ. ಭಾರತದ ಏಕತೆ, ಸಮಗ್ರತೆ, ಭದ್ರತೆ ಅಥವಾ ಸಾರ್ವಭೌಮತೆಗೆ ಧಕ್ಕೆ ತರುವ ಉದ್ದೇಶದಿಂದ ವರ್ತಿಸಿ), 17 (ಭಯೋತ್ಪಾದಕ ಕೃತ್ಯಕ್ಕೆ ನಿಧಿ ಸಂಗ್ರಹಿಸುವುದಕ್ಕಾಗಿ ಶಿಕ್ಷೆ), 18 (ಭಯೋತ್ಪಾದಕ ಕೃತ್ಯಕ್ಕಾಗಿ ಯಾವುದೇ ವ್ಯಕ್ತಿ ಅಥವಾ ವ್ಯಕ್ತಿಗಳು ಪುನರಾವರ್ತಿತ ಶಿಕ್ಷೆಗೆ ಶಿಕ್ಷೆ), 20 ( ಭಯೋತ್ಪಾದಕ ಗುಂಪು ಅಥವಾ ಸಂಘಟನೆಯ ಸದಸ್ಯ) ಮತ್ತು 38 ಮತ್ತು 39 (ಭಯೋತ್ಪಾದಕ ಸಂಘಟನೆಯ ಸದಸ್ಯತ್ವಕ್ಕೆ ಸಂಬಂಧಿಸಿದ ಅಪರಾಧ ಮತ್ತು ಭಯೋತ್ಪಾದಕ ಸಂಘಟನೆಗೆ ನೀಡಿದ ಬೆಂಬಲಕ್ಕೆ ಸಂಬಂಧಿಸಿದ ಅಪರಾಧಗಳು) ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (UAPA). ಅಡಿಗಳಲ್ಲಿ ಆದೇಶ ಒದಗಿಸಲಾಗಿದೆ.