ಕರ್ನಾಟಕ

karnataka

ETV Bharat / bharat

ಭಯೋತ್ಪಾದನಗೆ ಸಂಚು ರೂಪಿಸುತ್ತಿರುವ ABT, AQIS.. ಅಸ್ಸೋಂನ 11 ಕಡೆಗಳಲ್ಲಿ ಎನ್​ಐಎ ಶೋಧ

ಭಾರತೀಯ ಉಪಖಂಡದಲ್ಲಿ ಅಲ್​ ಖೈದಾ (ಎಕ್ಯೂಐಎಸ್) ಘಟಕ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಭಾನುವಾರ ಅಸ್ಸೋಂನಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ.

National Investigation Agency  Search operations at 11 locations in Assam  ABT affiliated with AQIS  ಭಯೋತ್ಪಾದನಗೆ ಸಂಚು ರೂಪಿಸುತ್ತಿರುವ ABT ಮತ್ತು AQIS  ಅಸ್ಸೋಂನ 11 ಕಡೆಗಳಲ್ಲಿ ಎನ್​ಐಎ ಶೋಧ  ಅನ್ಸರುಲ್ಲಾ ಬಾಂಗ್ಲಾ ತಂಡ  ಭಾರತೀಯ ಉಪಖಂಡದ ಅಲ್​​ ಖೈದಾ ಭಯೋತ್ಪಾದನೆ ಗುಂಪು
ಅಸ್ಸೋಂನ 11 ಕಡೆಗಳಲ್ಲಿ ಎನ್​ಐಎ ಶೋಧ

By

Published : Apr 11, 2022, 9:16 AM IST

ನವದೆಹಲಿ: ಭಾರತ ಉಪಖಂಡದಲ್ಲಿ ಅಲ್ ಖೈದಾ ಘಟಕದ (AL Qaeda in the Indian Subcontinent) ಜೊತೆ ಅನ್ಸರುಲ್ಲಾ ಬಾಂಗ್ಲಾ ತಂಡ (ಎಬಿಟಿ) ಸಕ್ರಿಯವಾದ ಹಿನ್ನೆಲೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಭಾನುವಾರ ಅಸ್ಸೋಂ ಬಾರ್ಪೇಟಾ ಮತ್ತು ಬೊಂಗೈಗಾಂವ್ ಜಿಲ್ಲೆಗಳ 11 ಸ್ಥಳಗಳಲ್ಲಿ ದಾಳಿ ನಡೆಸಿತು. ಅಲ್​​ ಖೈದಾ ಘಟಕದ ಜೊತೆ ಅನ್ಸರುಲ್ಲಾ ಬಾಂಗ್ಲಾ ತಂಡ ಸಕ್ರಿಯವಾಗಿದ್ದು, ಭಯೋತ್ಪಾದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ಭಾನುವಾರ ಅಸ್ಸೋಂನ ಬಾರ್ಪೇಟಾ ಮತ್ತು ಬೊಂಗೈಗಾಂವ್ ಜಿಲ್ಲೆಗಳಲ್ಲಿ ಶೋಧ ಕಾರ್ಯಾಚರಣೆ ಕೈಗೊಂಡಿತು.

ಈ ಪ್ರಕರಣ ಅಸ್ಸೋಂನ ಬಾರ್ಪೇಟಾ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ AQIS ನೊಂದಿಗೆ ಸಂಯೋಜಿತವಾಗಿರುವ ABT ಯ ಸಕ್ರಿಯ ಘಟಕಕ್ಕೆ ಸಂಬಂಧಿಸಿದೆ. ಈ ಘಟಕದ ಮುನ್ನಡೆಸುವ ನೇತೃತ್ವವನ್ನು ಬಾಂಗ್ಲಾದೇಶಿ ಪ್ರಜೆ ಸೈಫುಲ್ ಇಸ್ಲಾಂ ಅಲಿಯಾಸ್ ಹರೂನ್ ರಶೀದ್ ನೇತೃತ್ವ ವಹಿಸಿದ್ದಾರೆ. ಭಾರತವನ್ನು ಅಕ್ರಮವಾಗಿ ಪ್ರವೇಶಿಸಿದ್ದ ರಶೀದ್ ಢಕಾಲಿಯಾಪಾರ ಮಸೀದಿಯಲ್ಲಿ ಅರೇಬಿಕ್ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದನು. ಜಿಹಾದಿ ಸಂಘಟನೆಗಳಿಗೆ ಸೇರಲು, ಅನ್ಸಾರ್ಸ್ (ಸ್ಲೀಪರ್ ಸೆಲ್‌ಗಳು) ನಲ್ಲಿ ವಿಧ್ವಂಸಕ ಚಟುವಟಿಕೆಗಳನ್ನು ನಡೆಸಲು ಮತ್ತು ಎಕ್ಯೂಐಎಸ್ ನೆಲೆಯನ್ನು ಸ್ಥಾಪಿಸಲು ಆತ ಯುವಕರನ್ನು ಪ್ರಚೋದಿಸುತ್ತಿದ್ದರು ಎಂದು ಎನ್‌ಐಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಓದಿ:ಉಗ್ರಗಾಮಿ ಚಟುವಟಿಕೆ ಹಿನ್ನೆಲೆ: ಕಾಶ್ಮೀರದ ಹಲವೆಡೆ ಎನ್​ಐಎ ದಾಳಿ

ಈ ಸಂಬಂಧ ಮಾರ್ಚ್‌ನಲ್ಲಿ ಸ್ಥಳೀಯ ಪೊಲೀಸ್​ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿತ್ತು. ಒಂದು ವಾರದ ನಂತರ ಆ ಪ್ರಕರಣದ ತನಿಖೆಯ ಹೊಣೆಯನ್ನು ಎನ್​ಐಎ ವಹಿಸಿಕೊಂಡಿತು. ಭಾನುವಾರ ನಡೆಸಿದ ಶೋಧದ ಸಮಯದಲ್ಲಿ ಆರೋಪಿಗಳ ಸ್ಥಳದಲ್ಲಿ ಕೆಲ ದಾಖಲೆಗಳು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ಹೇಳಿದರು.

ABOUT THE AUTHOR

...view details