ಕರ್ನಾಟಕ

karnataka

ETV Bharat / bharat

ನವಜಾತ ಶಿಶುವನ್ನು ಭಾಗಶಃ ಸಮಾಧಿ ಮಾಡಿ ಕಲ್ಲು ಮುಚ್ಚಿದ ಪಾಪಿಗಳು - ಮುಂದೇನಾಯ್ತು? - ನವಜಾತ ಶಿಶುವಿನ ಜೀವಂತ ಸಮಾಧಿ

ಮಧ್ಯಪ್ರದೇಶದ ಚಿಂದ್ವಾರ ಜಿಲ್ಲೆಯಲ್ಲಿ ಭಾಗಶಃ ಸಮಾಧಿಯಾಗಿದ್ದ ನವಜಾತ ಶಿಶುವನ್ನು ರಕ್ಷಿಸಿ ಚಿಕಿತ್ಸೆ ಕೊಡಲಾಗುತ್ತಿದೆ.

Newborn buried alive with a heavy boulder placed atop
ಭಾಗಶಃ ಸಮಾಧಿಯಾಗಿದ್ದ ನವಜಾತ ಶಿಶುವಿನ ರಕ್ಷಣೆ

By

Published : Jun 24, 2021, 3:37 PM IST

ಚಿಂದ್ವಾರ (ಮಧ್ಯಪ್ರದೇಶ):ನವಜಾತ ಶಿಶುವನ್ನು ಭಾಗಶಃ ಸಮಾಧಿ ಮಾಡಿ, ದೊಡ್ಡ ಕಲ್ಲಿನಿಂದ ಆ ಸ್ಥಳವನ್ನು ಮರೆಮಾಡಿದ್ದ ಹೇಯ ಕೃತ್ಯ ಮಧ್ಯಪ್ರದೇಶದ ಚಿಂದ್ವಾರ ಜಿಲ್ಲೆಯಲ್ಲಿ ನಡೆದಿದೆ.

ಚಿಂದ್ವಾರ ಜಿಲ್ಲೆಯಲ್ಲಿ, ನವಜಾತ ಶಿಶು ಭಾಗಶಃ ಸಮಾಧಿಯಾದ ಸ್ಥಳದ ಹತ್ತಿರ ಆಡುತ್ತಿದ್ದ ಮಕ್ಕಳು ಹಿರಿಯರಿಗೆ ವಿಷಯ ಮುಟ್ಟಿಸಿದ್ದು, ಗ್ರಾಮಸ್ಥರು ಆ ನವಜಾತ ಶಿಶುವನ್ನು ರಕ್ಷಿಸಿದ್ದಾರೆ. ಇಂತಹ ಹೀನ ಕೃತ್ಯದಿಂದ ಆಘಾತಕ್ಕೊಳಗಾದ ಗ್ರಾಮಸ್ಥರು ಮಗುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದು, ಅಲ್ಲಿ ಆಮ್ಲಜನಕದ ಬೆಂಬಲದೊಂದಿಗೆ ಮಗುವಿಗೆ ಚಿಕಿತ್ಸೆ ನೀಡಲಾಯಿತು.

ಮಾಹಿತಿ ಪ್ರಕಾರ, ಇರುವೆಗಳು ಮಗುವನ್ನು ಕಚ್ಚಿವೆ ಮತ್ತು ಮಗುವನ್ನು ಮುಚ್ಚಿದ್ದ ಆ ದೊಡ್ಡ ಕಲ್ಲಿನ ತೂಕಕ್ಕೆ ಮಗುವಿನ ಕೈ ಜೆಜ್ಜಿಹೋಗಿದೆ. ಇನ್ನೂ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಸಿಬ್ಬಂದಿ ಮಗುವಿನ ಬಾಯಿ ಮತ್ತು ಮೂಗಿಗೆ ಹೊಕ್ಕಿದ್ದ ಮಣ್ಣನ್ನು ತೆಗೆದು ಚಿಕಿತ್ಸೆ ನೀಡಿದ್ದಾರೆ.

ಇದನ್ನೂ ಓದಿ:ಪವಾರ್ ಜೊತೆ ಕೈಜೋಡಿಸಿ ರಾಹುಲ್ ವಿಪಕ್ಷಗಳನ್ನು ಒಗ್ಗೂಡಿಸಬೇಕು: ಶಿವಸೇನೆ ಸಲಹೆ

ಯಾರೋ ಅಕ್ರಮ ಸಂಬಂಧವನ್ನಿಟ್ಟುಕೊಂಡವರಿಗೆ ಮಗು ಜನಿಸಿದ್ದು, ಅವರು ಈ ರೀತಿ ನವಜಾತ ಶಿಶುವನ್ನು ಕೈಬಿಟ್ಟಿರಬಹುದು ಎಂದು ಈ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಶಂಕಿಸಿದ್ದಾರೆ.

ABOUT THE AUTHOR

...view details