ಕರ್ನಾಟಕ

karnataka

ETV Bharat / bharat

ಹೊಸ ಬ್ಯುಸಿನೆಸ್​ ಟೂಲ್ಸ್​ ಪರಿಚಯಿಸಿದ ವಾಟ್ಸ್​ಆ್ಯಪ್​

ಬಳಕೆದಾರರು ವಾಟ್ಸ್​​ಆ್ಯಪ್​ನಲ್ಲಿ ಲಿಸ್ಟ್​ ಆಗಿರುವ 8 ಮಿಲಿಯನ್ ಬ್ಯುಸಿನೆಸ್​ ಕ್ಯಾಟಲಾಗ್​ಗಳನ್ನು ಬ್ರೌಸ್ ಮಾಡಬಹುದು ಹಾಗೂ ಇದರಲ್ಲಿ 1 ಮಿಲಿಯನ್​ ಬ್ಯುಸಿನೆಸ್​ ಕ್ಯಾಟಲಾಗ್​ಗಳು ಭಾರತದ್ದಾಗಿವೆ ಎಂದು ಕಂಪನಿ ಏಪ್ರಿಲ್​ನಲ್ಲಿ ಹೇಳಿತ್ತು. ಈಗ ಅದರ ಮುಂದುವರಿದ ಭಾಗವಾಗಿ ಬ್ಯುಸಿನೆಸ್​ ಅಕೌಂಟ್​ಗಳಿಗಾಗಿ ಮತ್ತಷ್ಟು ಫೀಚರ್​ಗಳನ್ನು ಸೇರಿಸಲಾಗುತ್ತಿದೆ.

new-whatsapp-tools-to-help-businesses-connect-with-people-at-ease
ಹೊಸ ಬ್ಯುಸಿನೆಸ್​ ಟೂಲ್ಸ್​ ಪರಿಚಯಿಸಿದ ವಾಟ್ಸ್​ಆ್ಯಪ್​

By

Published : Jun 3, 2021, 7:30 PM IST

ನವದೆಹಲಿ: ಫೇಸ್​ಬುಕ್​ ಒಡೆತನದ ಮೆಸೇಜಿಂಗ್​ ಕಂಪನಿ ವಾಟ್ಸ್​ಆ್ಯಪ್​ ತನ್ನ​ ಬಳಕೆದಾರರ ಅನುಕೂಲಕ್ಕಾಗಿ ಹೊಸ ಬ್ಯುಸಿನೆಸ್​ ಟೂಲ್​ಗಳನ್ನು ಅಪ್​ಡೇಟ್​ ಮಾಡುತ್ತಿರುವುದಾಗಿ ಹೇಳಿಕೊಂಡಿದೆ. ಹೊಸ ಲಿಸ್ಟ್​ ಮೆಸೇಜ್​ ಸೌಲಭ್ಯದ ಮೂಲಕ ಈಗ ಗ್ರಾಹಕರು ಏಕಕಾಲಕ್ಕೆ 10 ಆಪ್ಷನ್​ಗಳ ಮೆನು ಪಡೆಯಲಿದ್ದು, ಪ್ರತಿಕ್ರಿಯೆಯನ್ನು ಪದೇ ಪದೆ ಟೈಪ್ ಮಾಡುವ ಸಮಸ್ಯೆ ತಪ್ಪಲಿದೆ ಎಂದು ವಾಟ್ಸ್​ಆ್ಯಪ್ ತಿಳಿಸಿದೆ.

"ಹೊಸ ರಿಪ್ಲೈ ಬಟನ್ ಮೂಲಕ ಬಳಕೆದಾರರು, ಒಂದು ಟ್ಯಾಪ್​ನಿಂದ ಶೀಘ್ರವಾಗಿ ಟಾಪ್ 3 ಆಯ್ಕೆಗಳನ್ನು ಆಯ್ದುಕೊಳ್ಳಬಹುದಾಗಿದೆ. ಇದು ವಾಟ್ಸ್​ಆ್ಯಪ್​ ಬ್ಯುಸಿನೆಸ್​ ಅಕೌಂಟ್​ ಬಳಕೆದಾರರಿಗೆ ಲಭ್ಯವಾಗಲಿದೆ." ಎಂದು ಕಂಪನಿ F8 ವರ್ಚುಯಲ್ ಸಮಾವೇಶದಲ್ಲಿ ಘೋಷಿಸಿದೆ.

ಬಳಕೆದಾರರು ವಾಟ್ಸ್​​ಆ್ಯಪ್​ನಲ್ಲಿ ಲಿಸ್ಟ್​ ಆಗಿರುವ 8 ಮಿಲಿಯನ್ ಬ್ಯುಸಿನೆಸ್​ ಕ್ಯಾಟಲಾಗ್​ಗಳನ್ನು ಬ್ರೌಸ್ ಮಾಡಬಹುದು ಹಾಗೂ ಇದರಲ್ಲಿ 1 ಮಿಲಿಯನ್​ ಬ್ಯುಸಿನೆಸ್​ ಕ್ಯಾಟಲಾಗ್​ಗಳು ಭಾರತದ್ದಾಗಿವೆ ಎಂದು ಕಂಪನಿ ಏಪ್ರಿಲ್​ನಲ್ಲಿ ಹೇಳಿತ್ತು. ಈಗ ಅದರ ಮುಂದುವರಿದ ಭಾಗವಾಗಿ ಬ್ಯುಸಿನೆಸ್​ ಅಕೌಂಟ್​ಗಳಿಗಾಗಿ ಮತ್ತಷ್ಟು ಫೀಚರ್​ಗಳನ್ನು ಸೇರಿಸಲಾಗುತ್ತಿದೆ.

ವಿಶ್ವಾದ್ಯಂತ ನಿತ್ಯ 50 ಮಿಲಿಯನ್ ಬ್ಯುಸಿನೆಸ್​ ಹಾಗೂ 175 ಮಿಲಿಯನ್ ಜನ ವೈಯಕ್ತಿಕ ಸಂದೇಶ ಕಳುಹಿಸಲು ವಾಟ್ಸ್​ಆ್ಯಪ್​ ಬಳಸುತ್ತಿದ್ದಾರೆ.

"ಹೊಸ ಫೀಚರ್​ಗಳಿಂದ ವ್ಯಾಪಾರಸ್ಥರು ಸುಲಭವಾಗಿ ವಾಟ್ಸ್​ಆ್ಯಪ್​ ಮೇಲೆ ನೋಂದಾಯಿಸಿಕೊಳ್ಳಬಹುದು ಹಾಗೂ ತಮ್ಮ ಗ್ರಾಹಕರೊಂದಿಗೆ ಮತ್ತಷ್ಟು ಸುಲಭವಾಗಿ ವ್ಯವಹರಿಸಬಹುದು." ಎಂದು ಗುಪ್​ಶುಪ್​ ಮೆಸೇಜಿಂಗ್​ ಸಂಸ್ಥೆಯ ಸಿಒಒ ರವಿ ಸುಂದರಂ ಹೇಳಿದ್ದಾರೆ.

ABOUT THE AUTHOR

...view details