ಚಂಡೀಗಢ(ಪಂಜಾಬ್): ಹೊಸದಾಗಿ ಅಧಿಕಾರಕ್ಕೆ ಬಂದಿರುವ ಆಮ್ ಆದ್ಮಿ ಪಕ್ಷದ ಭಗವಂತ್ ಮಾನ್ ನೇತೃತ್ವದ ಪಂಜಾಬ್ ಸರ್ಕಾರಕ್ಕೆ ನಾಳೆ ನೂತನ ಸಚಿವರು ಸೇರ್ಪಡೆಯಾಗಲಿದ್ದು, 10 ಮಂದಿ ಎಎಪಿ ಶಾಸಕರು ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷ ಅಧಿಕೃತವಾಗಿ ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡಿದೆ.
ಕಳೆದ ಎರಡು ದಿನಗಳ ಹಿಂದೆ ಪಂಜಾಬ್ ಸಿಎಂ ಆಗಿ ಭಗವಂತ್ ಮಾನ್ ಪ್ರಮಾಣ ವಚನ ಸ್ವೀಕಾರ ಮಾಡಿದ್ದು, ನಾಳೆ ಬೆಳಗ್ಗೆ 11ಗಂಟೆಗೆ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಪಂಜಾಬ್ನ ರಾಜ ಭವನದಲ್ಲಿ ಕಾರ್ಯಕ್ರಮ ನಡೆಯಲಿದೆ. ಇದರ ಬೆನ್ನಲ್ಲೇ 12:30ಕ್ಕೆ ಮೊದಲ ಸಚಿವ ಸಂಪುಟ ಸಭೆ ನಡೆಯಲಿದೆ.
ಇದನ್ನೂ ಓದಿ:ಪಂಜಾಬ್‌ನಲ್ಲಿ ಭ್ರಷ್ಟರಿಗೆ ಹೊಸ ಸಿಎಂ ಶಾಕ್: ಜನರಿಗೆ ತನ್ನದೇ ವಾಟ್ಸಾಪ್ ನಂಬರ್ ನೀಡಿ ದೂರು ಸಲ್ಲಿಸಲು ಅವಕಾಶ
ಯಾರಿಗೆಲ್ಲ ಸಚಿವ ಸ್ಥಾನ?:ಹರ್ಪಲ್ ಸಿಂಗ್ ಚೀಮಾ, ಡಾ. ಬಲ್ಜಿತ್ ಕೌರ್, ಹರ್ಭಜನ್ ಸಿಂಗ್ ಇಟಿಒ, ಡಾ, ವಿಯಜ್ ಸಿಂಗ್ಲಾ, ಗರ್ಮಿರ್ ಸಿಂಗ್, ಹರ್ಜೋತ್ ಸಿಂಗ್, ಲಾಲ್ ಚಂದ್, ಕುಲ್ದೀಪ್ ಸಿಂಗ್ ಧಲಿವಾಲ್, ಲಾಲ್ಜಿತ್ ಸಿಂಗ್ ಭುಲ್ಲಾರ್, ಭ್ರಮ್ ಶಂಕರ್
ಪಂಜಾಬ್ ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿ ಸೇರಿದಂತೆ 18 ಸಚಿವ ಸ್ಥಾನಗಳಿಗೆ ಇದೀಗ 10 ಶಾಸಕರು ಭಗವಂತ್ ಮಾನ್ ಸಂಪುಟ ಸೇರ್ಪಡೆಯಾಗ್ತಿದ್ದು, ಇನ್ನು 7 ಜನರು ಸಚಿವರಾಗುವ ಅವಕಾಶವಿದೆ. 117 ವಿಧಾನಸಭೆ ಕ್ಷೇತ್ರಗಳ ಪೈಕಿ ಆಮ್ ಆದ್ಮಿ ಪಕ್ಷ 92 ಸ್ಥಾನಗಳಲ್ಲಿ ಗೆಲುವು ದಾಖಲು ಮಾಡುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದಿದೆ.