ಕರ್ನಾಟಕ

karnataka

ETV Bharat / bharat

G20 Summit: ಜಿ20 ಶೃಂಗಸಭೆಗೆ ದೆಹಲಿ ಹೇಗೆ ಸಜ್ಜಾಗಿದೆ ಗೊತ್ತೇ? ಫೋಟೋಗಳು

G20 Summit 2023: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಜಿ20 ಶೃಂಗಸಭೆಗೆ ನವದೆಹಲಿ ಸಕಲ ರೀತಿಯಲ್ಲೂ ಸಜ್ಜಾಗಿದೆ. ಕ್ಯಾಮರಾ ಕಣ್ಣಿನಲ್ಲಿ ಸೆರೆಯಾದ ಫೋಟೋಗಳು ಇಲ್ಲಿವೆ.

G20 Summit
ಜಿ20 ಶೃಂಗಸಭೆಗೆ ಸಜ್ಜಾದ ರಾಷ್ಟ್ರ ರಾಜಧಾನಿ ನವದೆಹಲಿ: ಇಲ್ಲಿವೆ ಗಮನಸೆಳೆಯುವ ಚಿತ್ರಗಳು...

By ETV Bharat Karnataka Team

Published : Sep 8, 2023, 12:01 PM IST

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನಾಳೆಯಿಂದ ಎರಡು ದಿನ 18ನೇ ಜಿ20 ಶೃಂಗಸಭೆ ನಡೆಯಲಿದೆ. ಭಾರತ ಐತಿಹಾಸಿಕ ಶೃಂಗದ ಅಧ್ಯಕ್ಷ ಸ್ಥಾನ ಅಲಂಕರಿಸಿದೆ. ಜಿ20 ಪ್ರಕ್ರಿಯೆಗಳು ಮತ್ತು ಮಹತ್ವದ ಸಭೆಗಳು ಜರುಗಲಿವೆ. ಸಂಪ್ರದಾಯಗಳ ಪ್ರಕಾರ, ಶೃಂಗಸಭೆಯ ಕೊನೆಯಲ್ಲಿ ಜಿ20 ನಾಯಕರ ಘೋಷಣೆಯನ್ನು ಅಂಗೀಕರಿಸಲಾಗುತ್ತದೆ. ಆಯಾ ನಾಯಕರು ಮತ್ತು ಕಾರ್ಯನಿರತ ಗುಂಪಿನ ಸಭೆಗಳಲ್ಲಿ ಚರ್ಚಿಸಿದ ಮತ್ತು ಒಪ್ಪಿದ ಆದ್ಯತೆಗಳ ಕಡೆಗೆ ನಾಯಕರ ಬದ್ಧತೆಯನ್ನು ಇದು ವಿವರಿಸುತ್ತದೆ.

ಗ್ರೂಪ್ ಆಫ್ ಟ್ವೆಂಟಿ (ಜಿ20) 19 ದೇಶಗಳನ್ನು ಹೊಂದಿದೆ. ಅರ್ಜೆಂಟಿನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಭಾರತ, ಇಂಡೋನೇಷ್ಯಾ, ಇಟಲಿ, ಜಪಾನ್, ರಿಪಬ್ಲಿಕ್ ಆಫ್ ಕೊರಿಯಾ, ಮೆಕ್ಸಿಕೋ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಟರ್ಕಿಯೆ, ಯುನೈಟೆಡ್ ಕಿಂಗ್ಡಮ್, ಯುನೈಟೆಡ್ ಸ್ಟೇಟ್ಸ್ ಹಾಗೂ ಯುರೋಪಿಯನ್ ಯೂನಿಯನ್. ಗುಂಪಿನ ಸದಸ್ಯರು ಜಾಗತಿಕ ಜಿಡಿಪಿಯ ಸುಮಾರು ಶೇ.85, ಜಾಗತಿಕ ವ್ಯಾಪಾರದ ಶೇ.75ಕ್ಕಿಂತ ಹೆಚ್ಚು ಮತ್ತು ವಿಶ್ವದ ಜನಸಂಖ್ಯೆಯ ಸುಮಾರು ಮೂರನೇ ಎರಡರಷ್ಟು ಭಾಗ ಹೊಂದಿದ್ದಾರೆ.

ನಟರಾಜನ ಆಕರ್ಷಕ ಪ್ರತಿಮೆಯನ್ನು ಶೃಂಗಸಭೆಯ ಮುಖ್ಯಸ್ಥಳದ ಪ್ರವೇಶದ್ವಾರದಲ್ಲಿ ನಿಲ್ಲಿಸಲಾಗಿದೆ. (ಎಪಿ ಚಿತ್ರ)

ನಟರಾಜನ ಆಕರ್ಷಕ ಪ್ರತಿಮೆ

ನವದೆಹಲಿಯಲ್ಲಿ ಜಿ20 ಶೃಂಗಸಭೆಯ ಮುಖ್ಯಸ್ಥಳದ ಪ್ರವೇಶದ್ವಾರದಲ್ಲಿ ಸ್ಥಾಪಿಸಲಾದ ನಟರಾಜನ ಪ್ರತಿಮೆ ಗಮನ ಸೆಳೆಯುತ್ತಿದೆ. (ಎಪಿ ಚಿತ್ರ)

ಶೃಂಗಸಭೆಗೆ ಮುನ್ನ ಹೋಟೆಲ್ ಶಾಂಗ್ರಿ-ಲಾ ಸಮೀಪದಲ್ಲಿ ವಾಹನ ಸಂಚಾರ

ದೆಹಲಿಯ ಹೋಟೆಲ್ ಶಾಂಗ್ರಿ-ಲಾದಿಂದ ವಾಹನ ಸಂಚಾರ. (ಎಪಿ ಚಿತ್ರ)

ಶೃಂಗಸಭೆ ನಡೆಯುವ ಹೊರಗಿನ ಆವರಣದಲ್ಲಿ ಭಾರತೀಯ ಅರೆ-ಮಿಲಿಟರಿ ಪಡೆಯ ಸೈನಿಕ ಕಾವಲು ಕಾಯುತ್ತಿರುವುದು. (ಎಪಿ ಚಿತ್ರ)

ಕಾವಲು ಕಾಯುತ್ತಿರುವ ಭದ್ರತಾ ಅಧಿಕಾರಿ

ಬೌದ್ಧ ಸನ್ಯಾಸಿಯೊಬ್ಬರು ಧರ್ಮಶಾಲಾದಲ್ಲಿ ಟಿಬೆಟಿಯನ್ ಸರ್ಕಾರಿ ಕಟ್ಟಡದ ಗೋಡೆಯ ಮೇಲೆ ಅಂಟಿಸಲಾದ ಪೋಸ್ಟರ್‌ಗಳನ್ನು ವೀಕ್ಷಿಸಿದರು. (ಎಪಿ ಚಿತ್ರ)

ಪೋಸ್ಟರ್‌ ವೀಕ್ಷಿಸುತ್ತಿರುವ ಬೌದ್ಧ ಸನ್ಯಾಸಿ

ಶೃಂಗಸಭೆಯ ಪೂರ್ವಭಾವಿಯಾಗಿ ಭದ್ರತಾ ಕ್ರಮಗಳ ಭಾಗವಾಗಿ ರಾಷ್ಟ್ರಪತಿ ಭವನದ ಬಳಿ ಭದ್ರತಾ ಸಿಬ್ಬಂದಿಯಿಂದ ಗಸ್ತು. (ಎಪಿ ಚಿತ್ರ)

ಭದ್ರತಾ ಅಧಿಕಾರಿಯಿಂದ ಕಾವಲು

ಭದ್ರತಾ ಕ್ರಮಗಳ ಭಾಗವಾಗಿ ಸಂಸತ್ ಭವನದ ಹೊರಗೆ ಭಾರತೀಯ ಭದ್ರತಾ ಸಿಬ್ಬಂದಿ ವಾಹನ ಪರಿಶೀಲಿಸಿದರು. (ಎಪಿ ಚಿತ್ರ)

ಹೋಟೆಲ್ ಶಾಂಗ್ರಿ-ಲಾ ಹೊರಗಿನ ಕಾರಂಜಿಗಳ ನೋಟ

ಹೋಟೆಲ್ ಶಾಂಗ್ರಿ-ಲಾ ಹೊರಗಿನ ಕಾರಂಜಿಗಳ ನೋಟ. (ಎಪಿ ಚಿತ್ರ)

ಇದನ್ನೂ ಓದಿ:G20 Summit: ಜಿ20 ಶೃಂಗದಲ್ಲಿ ಭಾಗಿಯಾಗಲು ಭಾರತಕ್ಕೆ ಪ್ರಯಾಣಿಸಿದ ಅಮೆರಿಕ ಅಧ್ಯಕ್ಷ ಬೈಡನ್

ABOUT THE AUTHOR

...view details