ನವದೆಹಲಿ: ಕೊರೊನಾದ ರೂಪಾಂತರಿ ಒಮಿಕ್ರಾನ್ ಇಡೀ ಜಗತ್ತನಲ್ಲೇ ತನ್ನ ಹಿಡಿತ ಸಾಧಿಸಿದ ಬೆನ್ನಲ್ಲೇ ಈಗ ವಿಜ್ಞಾನಿಗಳು ದಕ್ಷಿಣ ಫ್ರಾನ್ಸ್‌ನಲ್ಲಿ ಕೊರೊನಾದ ಹೊಸ ತಳಿಯನ್ನು ಗುರುತಿಸಲಾಗಿದೆ. ಕೊರೊನಾದ ರೂಪಾಂತರಿಗಳು ಸಹ ಮಾನವ ಕುಲಕ್ಕೆ ಕೆಡಕುಂಟು ಮಾಡಲು ಹಾತೊರೆಯುತ್ತಿವೆ. ಹೊಸ ರೂಪಾಂತರವಾದ IHU ಫ್ರಾನ್ಸ್‌ನಲ್ಲಿ ಕಂಡುಬಂದಿದ್ದು, ಇದು ಬರೋಬ್ಬರಿ 46 ಉಪ ರೂಪಾಂತರಗಳನ್ನು ಹೊಂದಿದೆ ಎಂದು ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಕಂದು ಬಂದಿದ್ದು ಎಲ್ಲಿ?
B.1.640.2 ಎಂಬ ಈ ರೂಪಾಂತರಕ್ಕೆ 'IHU' ಎಂದು ಕರೆಯಲಾಗಿದೆ. ಇದನ್ನು ಫ್ರಾನ್ಸ್‌ನ IHU ಮೆಡಿಟರೇನ್ ಸೋಂಕು ತಜ್ಞರು ಕಂಡುಹಿಡಿದಿದ್ದಾರೆ. ಕನಿಷ್ಠ 12 ಮಂದಿಯಲ್ಲಿ ಈ ಪ್ರಕರಣ ವರದಿಯಾಗಿದೆ. ಆಫ್ರಿಕನ್ ದೇಶದ ಕ್ಯಾಮರೂನ್‌ಗೆ ಸಂಚಾರ ಬೆಳೆಸಿದ್ದವರಲ್ಲಿ ಇದು ವರದಿಯಾಗಿದೆ. ಈ ಸೋಂಕಿನ ಬಗ್ಗೆ ಸಂಶೋಧಕರು ಎಲ್ಲಾ ರೀತಿಯ ಮಾಹಿತಿ ಕಲೆ ಹಾಕಿದ್ದು, ಅದರ ಹರಡುವಿಕೆ ಹಾಗೂ ನಿಯಂತ್ರಣದ ಬಗ್ಗೆ ಮಾಹಿತಿ ನೀಡಿದ್ದಾರೆ.
46 ಉಪ ರೂಪಾಂತರ:
IHU ನಲ್ಲಿ 46 ರೂಪಾಂತರಗಳಿವೆ. ಹಾಗೆಯೇ ಈ ರೂಪಾಂತರದಲ್ಲಿ 14 ಅಮಿನೋ ಆ್ಯಸಿಡ್ ಸಬ್ಸಿಟ್ಯೂಷನ್ಸ್, N501Y, E484K ಗಳು ಸ್ಪೈಕ್ ಪ್ರೋಟಿನ್‌ನಲ್ಲಿದೆ ಎಂದು ಹೇಳಲಾಗುತ್ತಿದ್ದು, ಈ ರೂಪಾಂತರ ಹೆಚ್ಚು ಅಪಾಯಕಾರಿ ಎಂದು ಕೂಡಾ ವರದಿ ಆಗಿದೆ ಎನ್ನುವುದು ಆತಂಕಕ್ಕೆ ಕಾರಣವಾಗಿದೆ.