ಶಿವಗಂಗಾ(ತಮಿಳುನಾಡು):ರಾಜ್ಯಸಭೆ ಚುನಾಚಣೆಯಲ್ಲಿ ತಮಿಳುನಾಡಿನ ಪರವಾಗಿ ಆಯ್ಕೆಯಾಗಿರುವುದರಿಂದ ತಮಿಳುನಾಡು ರಾಜಕೀಯದತ್ತ ಹೆಚ್ಚು ಗಮನ ಹರಿಸಲು ಅವಕಾಶ ಸಿಕ್ಕಿದೆ ಎಂದು ಕಾರೈಕುಡಿಯಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಹಣಕಾಸು ಸಚಿವ, ನೂತನ ರಾಜ್ಯಸಭಾ ಸದಸ್ಯ ಪಿ. ಚಿದಂಬರಂ ಹೇಳಿದರು.
ಕಾರೈಕುಡಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನೆಡೆ ಇಲ್ಲ. ಒಂದು ವೇಳೆ ಪಕ್ಷದಲ್ಲಿ ಕುಟುಂಬದ ಸದಸ್ಯರಿದ್ದರೆ, ಸ್ವಜನಪಕ್ಷಪಾತವಾದರೆ ರಾಜೀನಾಮೆ ನೀಡಲು ಸಿದ್ಧ ಎಂದು ಹೇಳಿದರು. ಒಂದೇ ಕುಟುಂಬದವರಿಗೆ ರಾಜಕೀಯ ಸ್ಥಾನಮಾನಗಳು ಸಿಗುತ್ತವೆ ಎಂಬುದು ಕೇವಲ ಕಾಗ್ರೆಸ್ನಲ್ಲಿ ಮಾತ್ರವಲ್ಲ, ಬಿಜೆಪಿ ಸೇರಿದಂತೆ ಇತರ ಪಕ್ಷಗಳಲ್ಲೂ ಇದೆ. ಆ ಪ್ರಕ್ರಿಯೆ ಬದಲಾಗಬೇಕಿದೆ, ಬದಲಾಗುತ್ತದೆ ಕೂಡ. ಪರಿವರ್ತನೆಗಾಗಿ ಕಾಂಗ್ರೆಸ್ ಪಕ್ಷ ಕ್ರಮ ಕೈಗೊಳ್ಳಬೇಕು ಎಂದು ಆಶಿಸುತ್ತೇನೆ ಎಂದರು.