ನಾಗ್ಪುರ್ (ಮಹಾರಾಷ್ಟ್ರ): ಮಹಾರಾಷ್ಟ್ರ ವಿಧಾನಮಂಡಳದ ಚಳಿಗಾಲದ ಅಧಿವೇಶನ ಇಂದು ನಾಗ್ಪುರದಲ್ಲಿ ಆರಂಭವಾಗಿದ್ದು, ಎನ್ಸಿಪಿ ಶಾಸಕಿಯೊಬ್ಬರು ತಮ್ಮ ಪುಟ್ಟ ಶಿಶುವಿನೊಂದಿಗೆ ಕಲಾಪಕ್ಕೆ ಹಾಜರಾಗಿದ್ದಾರೆ. ಎನ್ಸಿಪಿ ಶಾಸಕಿ ಸರೋಜ್ ಬಾಬುಲಾಲ್ ಅಹಿರೆ ಇವರು ತಮ್ಮ 2 ತಿಂಗಳ ಕೂಸನ್ನು ಎತ್ತಿಕೊಂಡು ಕಲಾಪಕ್ಕೆ ಆಗಮಿಸಿದ್ದು ಗಮನಸೆಳೆಯಿತು.
ಕಲಾಪಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕಿ ಸರೋಜ್, ಕೋವಿಡ್ನಿಂದಾಗಿ ಕಳೆದ ಎರಡೂವರೆ ವರ್ಷಗಳಿಂದ ನಾಗ್ಪುರದಲ್ಲಿ ಅಧಿವೇಶನ ನಡೆದಿಲ್ಲ. ಆದರೆ ಈ ಬಾರಿ ನಡೆಯುತ್ತಿದೆ. ನಾನೀಗ ತಾಯಿಯಾಗಿದ್ದೇನೆ. ಆದರೆ ನನ್ನ ಮತದಾರರ ಪ್ರಶ್ನೆಗಳಿಗೆ ಉತ್ತರ ಪಡೆಯುವ ಸಲುವಾಗಿ ಕಲಾಪಕ್ಕೆ ಆಗಮಿಸಿದ್ದೇನೆ ಎಂದರು.