ಮುಂಬೈ:ದಾವೂದ್ ಇಬ್ರಾಹಿಂ ಜೊತೆ ವ್ಯವಹಾರ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ರ ನ್ಯಾಯಾಂಗ ಬಂಧನವನ್ನು ಪಿಎಂಎಲ್‌ಎ ವಿಶೇಷ ಕೋರ್ಟ್ ಏಪ್ರಿಲ್ 18 ರವರೆಗೆ ವಿಸ್ತರಿಸಿದೆ.
ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜೊತೆಗೆ ವ್ಯವಹಾರ ನಡೆಸಿದ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಸಚಿವ ನವಾಬ್ ಮಲಿಕ್ರನ್ನು ಫೆಬ್ರವರಿ 23 ರಂದು ಬಂಧಿಸಲಾಗಿತ್ತು. ಬಳಿಕ ನ್ಯಾಯಾಂಗ ಬಂಧನಕ್ಕೆ ಒಳಪಟ್ಟಿದ್ದ ಮಲಿಕ್ರ ಅವಧಿ ಇಂದು ಮುಕ್ತಾಯಗೊಂಡಿತ್ತು. ಇಂದು ಬೆಳಗ್ಗೆ ಮಲಿಕ್ರನ್ನು ಪಿಎಂಎಲ್‌ಎ ವಿಶೇಷ ಕೋರ್ಟ್ ಹಾಜರುಪಡಿಸಲಾಯಿತು. ಅಲ್ಲದೆ, ಇನ್ನಷ್ಟು ವಿಚಾರಣೆ ನಡೆಸುವ ಅಗತ್ಯವಿರುವ ಕಾರಣ ಬಂಧನದ ಅವಧಿ ವಿಸ್ತರಣೆಗೆ ಪೊಲೀಸ್ ಅಧಿಕಾರಿಗಳು ಮನವಿ ಮಾಡಿದ ಹಿನ್ನೆಲೆ ಏ.18 ರ ವರೆಗೆ ಬಂಧನವನ್ನು ವಿಸ್ತರಿಸಲಾಗಿದೆ.