ಕರ್ನಾಟಕ

karnataka

ETV Bharat / bharat

ಹಳಿ ತಪ್ಪಿದ ರೈಲು.. ತಪ್ಪಿದ ಭಾರಿ ಅನಾಹುತ - ಲಖ್ನೋದ ನೌಚಂಡಿ ಎಕ್ಸ್‌ಪ್ರೆಸ್‌

ನೌಚಂಡಿ ಎಕ್ಸ್​ಪ್ರೆಸ್​ನ ಎರಡು ಚಕ್ರಗಳು ಹಳಿ ತಪ್ಪಿದ್ದು, ಕೆಲಕಾಲ ಪ್ರಯಾಣಿಕರಲ್ಲಿ ಆತಂಕವನ್ನುಂಟು ಮಾಡಿತ್ತು. ಕೂಡಲೇ ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಸರಿಪಡಿಸಿದ್ಧಾರೆ.

nauchandi express
ಹಳಿ ತಪ್ಪಿದ ರೈಲು

By

Published : Jun 17, 2021, 5:56 PM IST

ಲಖನೌ: ಪ್ರಯಾಗ್​​ರಾಜ್‌ನಿಂದ ಲಖನೌಗೆ ಬರುತ್ತಿದ್ದ ನೌಚಂಡಿ ಎಕ್ಸ್‌ಪ್ರೆಸ್‌ ಎಂಜಿನ್‌ನ ಎರಡು ಚಕ್ರಗಳು ಕೆಕೆಸಿ ಸೇತುವೆ ಬಳಿ ಹಳಿ ತಪ್ಪಿವೆ. ಇದರಿಂದಾಗಿ ಪ್ರಯಾಣಿಕರಲ್ಲಿ ಕೆಲಕಾಲ ಗೊಂದಲವುಂಟಾಗಿ ಆತಂಕಕ್ಕೀಡಾದರು. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ರೈಲ್ವೆ ಇಲಾಖೆ ಸಿಬ್ಬಂದಿ ಕ್ರೇನ್ ಸಹಾಯದಿಂದ ಚಕ್ರಗಳನ್ನು ಹಳಿ ಮೇಲೆ ಇರಿಸಿತು. ಇದರಿಂದಾಗಿ ಅಂದಾಜು ಎರಡೂವರೆ ಗಂಟೆಗಳ ತಡವಾಗಿ ಚಾರ್ಬಾಗ್​ ರೈಲ್ವೆ ನಿಲ್ದಾಣಕ್ಕೆ ಟ್ರೈನ್ ತಲುಪಿತು.

ದಿಲ್​​ಖುಷ್​ ಮೂಲಕ ಚಾರ್ಬಾಗ್​ನತ್ತ ಬರುತ್ತಿದ್ದ ರೈಲು ಕೆಕೆಸಿ ಬ್ರಿಡ್ಜ್ ಬಳಿ ಹಳಿ ತಪ್ಪಿದೆ. ಮಾಹಿತಿ ದೊರೆತ ಕೂಡಲೇ ಚಾರ್ಬಾಗ್​ ರೈಲ್ವೆ ನಿಲ್ದಾಣದ ಡೈರೆಕ್ಟರ್​​​​ ಸುದೀಪ್​ ಸಿಂಗ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂತರ ಎಂಜಿನ್​ಅನ್ನು ಮತ್ತೆ ಟ್ರ್ಯಾಕ್​ಗೆ ಕೂರಿಸುವ ಕೆಲಸ ಮಾಡಿದರು. ಸುಮಾರು ಎರಡೂವರೆಗಂಟೆಗಳ ಬಳಿಕ ಕಾರ್ಯ ಯಶಸ್ವಿಯಾಗಿದ್ದು, ಪ್ರಯಾಣಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆಗೆ ಕಾರಣ ಏನೆಂದು ಪತ್ತೆ ಹಚ್ಚಲು ತಂಡ ರಚಿಸಲಾಗಿದೆ ಎಂದು ಎಡಿಆರ್​​ಎಂ ಅಶ್ವಿನಿ ಶ್ರೀ ವಾಸ್ತವ ತಿಳಿಸಿದ್ದಾರೆ.

ಇದನ್ನೂ ಓದಿ:ಆಂಧ್ರಪ್ರದೇಶದಲ್ಲಿ ಇಬ್ಬರು ಟಿಡಿಪಿ ನಾಯಕರ ಕೊಲೆ... ಮುಗಿಲು ಮುಟ್ಟಿದ ಸಂಬಂಧಿಕರ ಆಕ್ರಂದನ

ABOUT THE AUTHOR

...view details