ಲಂಡನ್: ವಿಭಿನ್ನ ಶ್ರೇಣಿಗಳಲ್ಲಿ ಉಷ್ಣಾಂಶ ನಿಯಂತ್ರಿಸುವ ಮೂಲಕ ಮೆನೊಪಾಸ್ ಅವಧಿಯಲ್ಲಿ ಎದುರಾಗುವ ನೋವು ಕಡಿಮೆ ಮಾಡುವಂಥ ಉಡುಪೊಂದನ್ನು ಲಂಡನ್ ಮೂಲದ ಫಿಫ್ಟಿ ಒನ್ ಅಪಾರೆಲ್ ಎಂಬ ಕಂಪನಿಯು ತಯಾರಿಸಿದೆ. ಇದಕ್ಕಾಗಿ ತಾನು ತಯಾರಿಸಿದ ತಂತ್ರಜ್ಞಾನವನ್ನು ಬಳಸಲಾಗಿದೆ ಎಂದು ನಾಸಾ ತಿಳಿಸಿದೆ. ಸಾಮಾನ್ಯವಾಗಿ 51 ವರ್ಷ ವಯಸ್ಸಿನ ನಂತರ ಮಹಿಳೆಯರಿಗೆ ಮೆನೊಪಾಸ್ ಆರಂಭವಾಗುವುದರಿಂದ ಕಂಪನಿ ಫಿಫ್ಟಿ ಒನ್ ಅಪಾರೆಲ್ ಎಂದು ಹೆಸರಿಟ್ಟುಕೊಂಡಿದೆ.
ಈ ಹಿಂದೆ ನಾಸಾದಿಂದ ಫಂಡಿಂಗ್ ಮಾಡಲಾದ ಔಟ್ ಲಾಸ್ಟ್ ಟೆಕ್ನಾಲಜಿ (Outlast technology) ಎಂಬ ತಂತ್ರಜ್ಞಾನ ಬಳಸಿ ತಯಾರಿಸಲಾದ ಈ ಉಡುಪು, ಉಷ್ಣಾಂಶ ನಿಯಂತ್ರಕ ಗುಣಗಳನ್ನು ಕಾಪಾಡಿಕೊಳ್ಳುತ್ತದೆ ಮತ್ತು ನೊಡಲು ದುಬಾರಿ ಬಟ್ಟೆಯಂತೆ ಇದು ಕಾಣಿಸುತ್ತದೆ.
ಔಟ್ ಲಾಸ್ಟ್ ಎಂಬ ತಂತ್ರಜ್ಞಾನ:ಮೆನೊಪಾಸ್ ಸಮಯದಲ್ಲಿ ಸಹಾಯಕವಾಗುವ ಬಟ್ಟೆಗಳು ಈ ಮುನ್ನ ಕೇವಲ ಒಂದು ರಾತ್ರಿ ಉಡುಪಿನ ಸಮಾನವಾಗಿದ್ದು, ಅವು ಕೇವಲ ತಂಪು ಉಂಟು ಮಾಡುವಂಥವಾಗಿದ್ದವು. ಆದರೆ ಮೆನೊಪಾಸ್ ಅವಧಿಯಲ್ಲಿ ಆಗಾಗ ಕಾಣಿಸಿಕೊಳ್ಳುವ ಶೀತ ಹೊಡೆತಗಳ ವಿಷಯದಲ್ಲಿ ಈ ಬಟ್ಟೆಗಳು ಅಂಥ ಉಪಯುಕ್ತವಾಗಿರಲಿಲ್ಲ ಎಂದು ಫಿಫ್ಟಿ ಒನ್ ಕಂಪನಿಯ ಒಡತಿ ಲೂಯಿಸ್ ನಿಕೊಲ್ಸನ್ ಹೇಳಿದ್ದಾರೆ. ಹೀಗಾಗಿಯೇ ಅವರು ಔಟ್ ಲಾಸ್ಟ್ ಎಂಬ ತಂತ್ರಜ್ಞಾನವನ್ನು ಕಂಡು ಹಿಡಿದಿದ್ದಾರೆ. ಫಿಫ್ಟಿ ಒನ್ ಅಪಾರೆಲ್ ಇದು ಅಮೆರಿಕ ಮೂಲದ ಬಾಹ್ಯಾಕಾಶ ಸಂಸ್ಥೆಯಾಗಿದೆ.
1980 ರ ದಶಕದಲ್ಲಿ, ಹೂಸ್ಟನ್‌ನಲ್ಲಿರುವ NASAದ ಜಾನ್ಸನ್ ಬಾಹ್ಯಾಕಾಶ ಕೇಂದ್ರವು ಬಾಹ್ಯಾಕಾಶ ಸೂಟ್ ನ ಹ್ಯಾಂಡ್ ಗ್ಲೌಸ್ಗಳಲ್ಲಿ ಇನ್ಸುಲೇಶನ್ ಹೆಚ್ಚಿಸುವ ಮಾರ್ಗಗಳನ್ನು ಹುಡುಕುತ್ತಿತ್ತು. ಈ ಸಂದರ್ಭದಲ್ಲಿ ಅದು ಟ್ರಯಾಂಗಲ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಕಾರ್ಪೊರೇಶನ್ ಸಂಸ್ಥೆಯ ಜೊತೆಗೆ ಸಣ್ಣ ವ್ಯವಹಾರ ಅಭಿವೃದ್ಧಿ ಸಂಶೋಧನೆಯ ಒಂದು ಒಪ್ಪಂದ ಮಾಡಿಕೊಂಡಿತು.