ನರಸಿಂಗ್ಪುರ(ಮಧ್ಯಪ್ರದೇಶ): ದೇಶಾದ್ಯಂತ ಕೊರೊನಾ ವ್ಯಾಕ್ಸಿನ್ ಅಭಿಯಾನ ಜೋರಾಗಿ ನಡೆಯುತ್ತಿದ್ದು, ಇಂದಿನಿಂದ ಮೂರನೇ ಹಂತದ ವ್ಯಾಕ್ಸಿನೇಷನ್ಗೆ ಚಾಲನೆ ನೀಡಲಾಗಿದೆ. ಇದರ ಮಧ್ಯೆ ಕೋವಿಡ್ ಲಸಿಕೆ ತುಂಬಿದ್ದ ಟ್ರಕ್ ರಸ್ತೆ ಮಧ್ಯೆ ಬಿಟ್ಟು ಪರಾರಿಯಾಗಿರುವ ಘಟನೆ ನಡೆದಿದೆ.
ಮಧ್ಯಪ್ರದೇಶದ ನರಸಿಂಗಪುರ ಜಿಲ್ಲೆ ಕರೇಲಿ ಬಸ್ ನಿಲ್ದಾಣದ ಬಳಿ ಈ ಟ್ರಕ್ ಕಂಡು ಬಂದಿದೆ. ಬಹಳ ಸಮಯಗಳ ಕಾಲ ಟ್ರಕ್ ಇಲ್ಲಿ ನಿಂತಿದ್ದರಿಂದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ ಇದರಲ್ಲಿ ಕೋವ್ಯಾಕ್ಸಿನ್ನ 2,40,000 ಡೋಸ್ ಕಂಡು ಬಂದಿವೆ.