ಕರ್ನಾಟಕ

karnataka

ETV Bharat / bharat

ಟಿಕೆಟ್​ ಇದ್ದರೂ ಚಿತ್ರಮಂದಿರದಲ್ಲಿ ನರಿಕ್ಕುವರ್ ಮಹಿಳೆಗೆ ಪ್ರವೇಶ ನಿರಾಕರಣೆ ಆರೋಪ: ಸಿಬ್ಬಂದಿ ವಿರುದ್ಧ ಕೇಸ್​ - ಅಸ್ಪೃಶ್ಯತೆ ಕಾರಣಕ್ಕೆ ಥಿಯೇಟರ್‌ ಪ್ರವೇಶಿಸಲು ನಿರಾಕರಣೆ

ತಮಿಳುನಾಡಿನ ಕೋಯಂಬೇಡು ಪ್ರದೇಶದ ಚಿತ್ರಮಂದಿರದಲ್ಲಿ ನರಿಕ್ಕುವರ್ ಸಮುದಾಯದ ಮಹಿಳೆಗೆ ಪ್ರವೇಶ ನಿರಾಕರಣೆ ಆರೋಪದ ಮೇಲೆ ಸಿಬ್ಬಂದಿ ವಿರುದ್ಧ ಪೊಲೀಸ್​ ಕೇಸ್​ ದಾಖಲಾಗಿದೆ.

narikkuvar-community-not-allowed-inside-theater-in-chennai-case-against-staff
ಟಿಕೆಟ್​ ಇದ್ದರೂ ಚಿತ್ರಮಂದಿರದಲ್ಲಿ ನರಿಕ್ಕುವರ್ ಮಹಿಳೆಗೆ ಪ್ರವೇಶ ನಿರಾಕರಣೆ ಆರೋಪ: ಸಿಬ್ಬಂದಿ ವಿರುದ್ಧ ಕೇಸ್​

By

Published : Mar 30, 2023, 11:08 PM IST

ಚೆನ್ನೈ (ತಮಿಳುನಾಡು): ಇಂದು ಬಿಡುಗಡೆಯಾದ 'ಪಾತು ತಾಳ' ಸಿನಿಮಾ ವೀಕ್ಷಿಸಲು ಬಂದ ನರಿಕ್ಕುವರ್ ಸಮುದಾಯದ ಕೆಲವರಿಗೆ ಥಿಯೇಟರ್‌ನಲ್ಲಿ ಪ್ರವೇಶ ನಿರಾಕರಿಸಿದ ಆರೋಪ ಕೇಳಿ ಬಂದಿದೆ. ತಮಿಳುನಾಡು ರಾಜಧಾನಿ ಚೆನ್ನೈ ಸಮೀಪದ ಕೋಯಂಬೇಡು ಪ್ರದೇಶದ ಪ್ರಸಿದ್ಧ ರೋಹಿಣಿ ಥಿಯೇಟರ್‌ನಲ್ಲಿ ಈ ಘಟನೆ ನಡೆದಿದ್ದು, ಈ ಸಂಬಂಧ ಚಿತ್ರಮಂದಿರದ ಸಿಬ್ಬಂದಿ ವಿರುದ್ಧ ಪೊಲೀಸರು ಕೇಸ್​ ದಾಖಲಿಸಿದ್ದಾರೆ.

ನಡೆದಿದ್ದೇನು?: ನರಿಕುರವರ್ ಸಮುದಾಯದ ಮಹಿಳೆಯೊಬ್ಬರು ಟಿಕೆಟ್‌ನೊಂದಿಗೆ ಚಲನಚಿತ್ರ ವೀಕ್ಷಿಸಲು ಸರತಿ ಸಾಲಿನಲ್ಲಿ ನಿಂತಿದ್ದರು. ಆದರೆ, ಅಸ್ಪೃಶ್ಯತೆ ಕಾರಣಕ್ಕೆ ಥಿಯೇಟರ್‌ ಒಳಗೆ ಪ್ರವೇಶಿಸಲು ನಿರಾಕರಿಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಸ್ಥಳದಲ್ಲಿದ್ದ ಕೆಲ ಸಾರ್ವಜನಿಕರು ಪ್ರಶ್ನೆ ಎತ್ತಿದ್ದರು. ಆದರೂ, ಸಿಬ್ಬಂದಿ ಒಳ ಹೋಗಲು ಅನುಮತಿ ನೀಡಲಿಲ್ಲ ಎಂದು ಹೇಳಲಾಗಿದೆ. ಈ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.

ಅಲ್ಲದೇ, ಧರ್ಮಪುರಿ ಸಂಸದ ಡಾ.ಸೆಂಥಿಲ್ ಕುಮಾರ್ ಕೂಡ ಥಿಯೇಟರ್​ನವರು ಕ್ರಮವನ್ನು ಖಂಡಿಸಿ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಇದೇ ವೇಳೆ ಕೋಯಂಬೇಡು ಪೊಲೀಸ್ ಠಾಣೆಯ ಇನ್ಸ್​ಪೆಕ್ಟರ್ ಹಾಗೂ ಸಿಬ್ಬಂದಿ ಚಿತ್ರಮಂದಿರಕ್ಕೆ ಖುದ್ದು ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ. ಜೊತೆಗೆ ಕಂದಾಯ ಅಧಿಕಾರಿಗಳು ಕೂಡ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ.

ಇಬ್ಬರ ವಿರುದ್ಧ ಕೇಸ್​: ನರಿಕ್ಕುವರ್ ಸಮುದಾಯದ ಜನರಿಗೆ ಪ್ರವೇಶಿಸಲು ಅವಕಾಶ ನೀಡದ ವಿಚಾರ ಕುರಿತ ಥಿಯೇಟರ್ ಆಡಳಿತದಿಂದ ಖುದ್ದಾಗಿ ವಿವರಣೆ ಪಡೆಯಲಾಗಿದೆ. ಸದ್ಯ ಇಡೀ ಘಟನೆಗೆ ಸಂಬಂಧಿಸಿದಂತೆ ಥಿಯೇಟರ್‌ನ ಕ್ಯಾಷಿಯರ್ ರಾಮಲಿಂಗಂ ಮತ್ತು ನೌಕರ ಕುಮರೇಶನ್ ವಿರುದ್ಧ ದೌರ್ಜನ್ಯ ತಡೆ ಕಾಯ್ದೆ ಮತ್ತು ಅಕ್ರಮ ತಡೆ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ.

ಥಿಯೇಟರ್ ಆಡಳಿತ ಮಂಡಳಿಯ ಸ್ವಷ್ಟನೆ: ಮತ್ತೊಂದೆಡೆ, ರೋಹಿಣಿ ಥಿಯೇಟರ್ ಆಡಳಿತ ಮಂಡಳಿ ಸಹ ಘಟನೆ ಬಗ್ಗೆ ತನ್ನ ಟ್ವಿಟರ್ ಪೇಜ್​ನಲ್ಲಿ ವಿವರಣೆ ನೀಡಿದೆ. ಚಿತ್ರವು ಯು/ಎ ಸೆನ್ಸಾರ್ ಆಗಿರುವ ಕಾರಣ 12 ವರ್ಷದೊಳಗಿನ ಮಕ್ಕಳಿಗೆ ಕಾನೂನಿನಡಿ ಅವಕಾಶವಿಲ್ಲ. ಹೀಗಾಗಿ ಚಿಕ್ಕ ಮಕ್ಕಳಿರುವ ಮಹಿಳೆಗೆ ಸಿಬ್ಬಂದಿ ಅವಕಾಶ ನೀಡಿಲ್ಲ. ಆದಾಗ್ಯೂ, ಸಮಸ್ಯೆ ಉಲ್ಬಣಗೊಳ್ಳಬಾರದು ಎಂಬ ಕಾರಣಕ್ಕೆ ಮಹಿಳೆಗೆ ಅವಕಾಶ ನೀಡಲಾಗಿದೆ ಎಂದು ಥಿಯೇಟರ್​ನವರು ವಿಡಿಯೋ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ:ರಾಮನವಮಿಯಂದು ಬಿಡುಗಡೆಯಾಯ್ತು 'ಲೀಡರ್​ ರಾಮಯ್ಯ' ಪೋಸ್ಟರ್​; ಇದು ಸಿದ್ದರಾಮಯ್ಯ ಬಯೋಪಿಕ್​

ABOUT THE AUTHOR

...view details