ತಿರುವಣ್ಣಾಮಲೈ(ತಮಿಳುನಾಡು):ತಿರುವಣ್ಣಾಮಲೈನ ಕನ್ನಮಂಗಲಂನಲ್ಲಿ ಏಳು ವರ್ಷದ ಬಾಲಕನನ್ನು ಹಿಂಸಿಸಿ ಕೊಲೆ ಮಾಡಿದ ಆರೋಪದ ಮೇಲೆ ಪೊಲೀಸ್ ಅಧೀಕ್ಷಕರು ಮೂವರು ಮಹಿಳೆಯರನ್ನು ಬಂಧಿಸಿದ್ದಾರೆ.
ಚಿಕಿತ್ಸೆ ನೆಪದಲ್ಲಿ ಬಾಲಕನಿಗೆ ಥಳಿಸಿದ ಮಂತ್ರವಾದಿ: ಮಗನ ಸಾವಿಗೆ ಕಾರಣಳಾದಳೇ ತಾಯಿ! - ತಮಿಳುನಾಡು ಸುದ್ದಿ
ಮಗನ ಮೈ ಮೇಲೆ ದೆವ್ವ ಬಂದಿದೆ ಎಂದು ಭಾವಿಸಿದ ತಾಯಿ ಇಬ್ಬರು ಸಹೋದರಿಯರ ಜೊತೆ ಸೇರಿ ಮಂತ್ರವಾದಿ ಬಳಿ ಕರೆದೊಯ್ದಿದ್ದಾರೆ. ಅಲ್ಲಿ ಆತ ಚಿಕಿತ್ಸೆ ನೀಡುವ ಸಲುವಾಗಿ ಬಾಲಕನಿಗೆ ಥಳಿಸಲು ಮುಂದಾಗಿದ್ದಾನೆ. ಆದರೆ ನೋವಿನಿಂದ ಬಾಲಕ ಶಬರಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
"ಮೃತ ಬಾಲಕ ಮೂವರು ಆರೋಪಿಗಳಲ್ಲಿ ಓರ್ವ ಮಹಿಳೆಯ ಮಗ. ಆರೋಪಿ ತಿಲಕಾವತಿ ಮಗ ಶಬರಿ ಜೊತೆ ವೆಲ್ಲೂರಿನಲ್ಲಿ ವಾಸಿಸುತ್ತಿದ್ದಳು. ಇನ್ನು ಮಗನ ಮೈ ಮೇಲೆ ದೆವ್ವ ಬಂದಿದೆ ಎಂದು ಭಾವಿಸಿದ ತಾಯಿ ತಿಲಕಾವತಿ ತನ್ನ ಇಬ್ಬರು ಸಹೋದರಿಯರ ಜೊತೆ ಸೇರಿ ಮಂತ್ರವಾದಿ ಬಳಿ ಕರೆದೊಯ್ದಿದ್ದಾರೆ. ಅಲ್ಲಿ ಆತ ಚಿಕಿತ್ಸೆ ನೀಡುವ ಸಲುವಾಗಿ ಬಾಲಕನಿಗೆ ಥಳಿಸಲು ಮುಂದಾಗಿದ್ದಾನೆ. ಆದರೆ ನೋವಿನಿಂದ ಬಾಲಕ ಶಬರಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ"ಎಂದು ತನಿಖೆ ವೇಳೆ ತಿಳಿದುಬಂದಿದೆ
ಇನ್ನು ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮೂವರು ಮಹಿಳೆಯರನ್ನು ಬಂಧಿಸಿದ್ದಾರೆ. ಸದ್ಯ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ವೆಲ್ಲೂರು ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ.