ಕರ್ನಾಟಕ

karnataka

ETV Bharat / bharat

ಹಿಂದೂ ಧರ್ಮ ಮೆಚ್ಚಿ ಇಬ್ಬರು ಯುವಕರನ್ನು ವರಿಸಿದ ಮುಸ್ಲಿಂ ಯುವತಿಯರು..! - ಅಗಸ್ಟ್ ಮುನಿ ಆಶ್ರಮ

ಉತ್ತರಪ್ರದೇಶದ ಬರೇಲಿಯಲ್ಲಿ ಇಬ್ಬರು ಮುಸ್ಲಿಂ ಹುಡುಗಿಯರು ಹಿಂದೂ ಧರ್ಮಕ್ಕೆ ಮತಾಂತರಗೊಂಡು, ಯುವಕರನ್ನು ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದಾರೆ. ಈ ವೇಳೆ, ಹುಡಗಿಯರು ಸ್ವಂತ ಇಚ್ಛೆಯ ಮೇರೆಗೆ ಒಪ್ಪಿ ಮದುವೆ ಆಗಿದ್ದೇವೆ. ಯಾರ ಒತ್ತಡವೂ ಇಲ್ಲ. ಇಬ್ಬರಿಗೂ ಹಿಂದೂ ಧರ್ಮದಲ್ಲಿ ನಂಬಿಕೆ ಇದೆ ಎಂದು ಹೇಳಿಕೊಂಡಿದ್ದಾರೆ.

Muslim young women married Hindu young men
ಹಿಂದೂ ಯುವಕರನ್ನು ವರಿಸಿದ ಮುಸ್ಲಿಂ ಯುವತಿಯರು

By

Published : Dec 1, 2022, 5:48 PM IST

Updated : Dec 1, 2022, 8:15 PM IST

ಬರೇಲಿ(ಉತ್ತರಪ್ರದೇಶ):ಇಬ್ಬರು ಮುಸ್ಲಿಂ ಹುಡುಗಿಯರು ಹಿಂದೂ ಧರ್ಮಕ್ಕೆ ಮತಾಂತರಗೊಂಡು ಹಿಂದೂ ಹುಡುಗರನ್ನು ಮದುವೆಯಾಗಿದ್ದಾರೆ. ಹುಡಗಿಯರು ತಮ್ಮ ಸ್ವಂತ ಇಚ್ಛೆಯ ಮೇರೆಗೆ ಒಪ್ಪಿ ಮದುವೆ ಮಾಡಿಕೊಂಡಿದ್ದೇವೆ. ಯಾರ ಒತ್ತಡವೂ ಇಲ್ಲ. ಇಬ್ಬರಿಗೂ ಹಿಂದೂ ಧರ್ಮದಲ್ಲಿ ನಂಬಿಕೆ ಇದೆ ಎಂದು ಹೇಳಿಕೊಂಡಿದ್ದಾರೆ.

ಉತ್ತರಪ್ರದೇಶದ ಬರೇಲಿಯ ಸುಭಾಷ್‌ನಗರ ಪೊಲೀಸ್ ಠಾಣೆ ವ್ಯಾಪ್ತಿ ಮದೀನತ್‌ನಲ್ಲಿ ಮುಸ್ಲಿಂ ಬಾಲಕಿಯರು ಹಿಂದೂ ಸಂಪ್ರದಾಯದ ಪ್ರಕಾರ ಸಿಂಧೂರ ಮತ್ತು ಮಂಗಳಸೂತ್ರ ಧರಿಸಿ 7 ಬಾರಿ ಆಗ್ನಿ ಪ್ರದರ್ಶನ ಮಾಡಿ ಸಪ್ತಪದಿ ತುಳಿದರು. ಇರಾಮ್ ಜೈದಿಗೆ ಮದುವೆಯ ನಂತರ ಸ್ವಾತಿ ಎಂಬ ಹೆಸರು ಮತ್ತು ಶಹನಾಜ್ ಗೆ ಸುಮನ್ ದೇವಿ ಎಂದು ನಾಮಕರಣ ಮಾಡಲಾಯಿತು.

ಶಹನಾಜ್ ಅವರು ಅಜಯ್ ಎಂಬ ಹಿಂದೂ ಯುವಕನನ್ನು ಪ್ರೀತಿಸುತ್ತಿದ್ದರು. ಆಕೆ ಹಿಂದೂ ಧರ್ಮಕ್ಕೆ ಮತಾಂತರಗೊಂಡು ಅಜಯ್ ನನ್ನು ವರಿಸಿದ್ದಾಳೆ. ಇದೇ ರೀತಿ ಬಹೇರಿಯ ಇರಾಮ್ ಜೈದಿ ಕೂಡ ಹಿಂದೂ ಧರ್ಮಕ್ಕೆ ಮತಾಂತರಗೊಂಡು ಆದೇಶ್ ಕುಮಾರ್ ಎಂಬ ಹಿಂದೂ ಯುವಕನನ್ನು ವಿವಾಹವಾಗಿದ್ದಾರೆ. ನಂತರ ಇರಾಮ್ ಜೈದಿಗೆ ಸ್ವಾತಿ ಎಂಬ ಹೆಸರು ಇಡಲಾಯಿತು.

ಅಗಸ್ತ್ಯ ಮುನಿ ಆಶ್ರಮದಲ್ಲಿ ಮದುವೆ:ಪಂಡಿತ್ ಕೆ.ಕೆ.ಶಂಖಧರ್ ಅವರು ಮದೀನದ ಅಗಸ್ಟ್ ಮುನಿ ಆಶ್ರಮದಲ್ಲಿ ಇಬ್ಬರು ಹೆಣ್ಣುಮಕ್ಕಳ ವಿವಾಹವನ್ನು ನೆರವೇರಿಸಿದರು. ಮೊದಲು ಇಬ್ಬರೂ ಹುಡುಗಿಯರನ್ನು ಹಿಂದೂ ಧರ್ಮದಂತೆ ವಿಧಿ ವಿಧಾನಗಳನ್ನು ಪಾಲಿಸಲು ಕಲಿಸಲಾಯಿತು. ಆ ಬಳಿಕ ಧರ್ಮಕ್ಕೆ ಮತಾಂತರಗೊಂಡು ಅವರ ಹೆಸರನ್ನು ಬದಲಾಯಿಸಲಾಗಿತ್ತು. ಇಬ್ಬರೂ ಹುಡಗಿಯರು ಹಿಂದೂ ಹುಡುಗರನ್ನು ಕಾನೂನಿನ ಪ್ರಕಾರವೇ ಮದುವೆಯಾದರು.

ಸ್ವ ಇಚ್ಚೆಯಿಂದ ಮದುವೆ:ಭೋಜಿಪುರದ ನಿವಾಸಿ ಶಹನಾಜ್ ಅವರು, ತನಗೆ ಪವಿತ್ರ ಹಿಂದೂ ಧರ್ಮದಲ್ಲಿ ಅಪಾರ ನಂಬಿಕೆ ಇದೆ. ಇದರಿಂದಾಗಿ ಯಾವುದೇ ಒತ್ತಡವಿಲ್ಲದೇ ಸ್ವ ಇಚ್ಛೆಯಿಂದ ಹಿಂದೂ ಧರ್ಮ ಅಳವಡಿಸಿಕೊಂಡಿರುವೆ. ತನ್ನ ಇಷ್ಟದ ಹುಡುಗನನ್ನು ಪ್ರೀತಿಸಿ, ಮದುವೆಯಾಗಿವೆ. ಈಗ ತನ್ನ ಇಡೀ ಜೀವನವನ್ನು ಅವನೊಂದಿಗೆ ಸಂತೋಷದಿಂದ ಕಳೆಯಬೇಕೆನ್ನುವುದು ನನ್ನ ಆಸೆಯಾಗಿದೆ ಎಂದಿದ್ದಾಳೆ.

ಮತ್ತೊಂದು ಕಡೆ ಬಹೇದಿಯ ಇರಾಮ್ ಜೈದಿ ಅವರು ಹಿಂದೂ ಧರ್ಮದ ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠ ಮತ್ತು ಪವಿತ್ರವಾಗಿದೆ. ಮೊದಲಿನಿಂದಲೂ ಹಿಂದೂ ಸಂಪ್ರದಾಯಗಳನ್ನು ಗೌರವಿಸಿ ಅನುಸರಿಸಲು ಪ್ರಯತ್ನಿಸುತ್ತಿದ್ದೆ. ಈ ಕಾರಣಕ್ಕಾಗಿಯೇ ನಾನು ಹಿಂದೂ ಧರ್ಮಕ್ಕೆ ಮತಾಂತರಗೊಂಡು ಹಿಂದೂ ಹುಡುಗನನ್ನೇ ಮದುವೆ ಆಗಿರುವೆ ಎಂದು ಹೇಳಿಕೊಂಡಿದ್ದಾರೆ.

ಇದನ್ನೂಓದಿ:15 ವರ್ಷದ ಮುಸ್ಲಿಂ ಯುವತಿ ತನ್ನ ಆಯ್ಕೆಯ ಹುಡುಗನನ್ನು ಮದುವೆ ಆಗಬಹುದು: ಜಾರ್ಖಂಡ್ ಹೈಕೋರ್ಟ್

Last Updated : Dec 1, 2022, 8:15 PM IST

ABOUT THE AUTHOR

...view details