ಹೈದರಾಬಾದ್:ಮುಂಬೈ ನಗರದಲ್ಲಿ ಇಂದು ಭಾರಿ ಮಳೆಯಾಗಿದ್ದು, ಬಾಲಿವುಡ್ ನಟಿ ಕಂಗನಾ ರಣಾವತ್ ವರುಣನನ್ನು ಕುರಿತು ರೊಮ್ಯಾಂಟಿಕ್ ಪೋಸ್ಟ್ ಮೂಲಕ ಸ್ವಾಗತಿಸಿದ್ದಾರೆ. ಮುಂಬೈನಲ್ಲಿ ಸುರಿಯುವ ಮುಂಗಾರು ತುಂಬಾ ರೊಮ್ಯಾಂಟಿಕ್ ಎಂದು ಅವರು ಬಣ್ಣಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, "ಮುಂಬೈ ಮಳೆಗಿಂತ ರೋಮ್ಯಾಂಟಿಕ್ ಸನ್ನಿವೇಶ ಮತ್ತೊಂದಿಲ್ಲ. ಆದರೆ ಸಿಂಗಲ್ ಆಗಿರೋರು ಕೇವಲ ಹಗಲುಗನಸು ಕಾಣಬಹುದು ಎಂದು ಕಂಗನಾ ಇನ್ಸ್ಟಾಗ್ರಾಮ್ನಲ್ಲಿ ಬರೆದಿದ್ದಾರೆ.