ಮುಂಬೈ:ಆನ್ಲೈನ್ ವಂಚಕರಿಂದ ವ್ಯಕ್ತಿಯೊಬ್ಬರು ಕಳೆದುಕೊಂಡ ಒಟ್ಟು 4.56 ಕೋಟಿ ರೂ.ಗಳಲ್ಲಿ ಸುಮಾರು 3.70 ಕೋಟಿ ರೂಪಾಯಿಯನ್ನು ಮುಂಬೈ ಪೊಲೀಸರು ಯಶಸ್ವಿಯಾಗಿ ರಿಕವರಿ ಮಾಡಿದ್ದಾರೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ. ಸೈಬರ್ ಸಹಾಯವಾಣಿಗೆ ಬಂದ ದೂರಿನ ಮೇರೆಗೆ ತ್ವರಿತ ಕ್ರಮ ಕೈಗೊಂಡ ಮುಂಬೈ ಪೊಲೀಸರು ಖಾತೆಗಳನ್ನು ಫ್ರೀಜ್ ಮಾಡುವ ಮೂಲಕ ಹಣವನ್ನು ರಿಕವರಿ ಮಾಡಿದ್ದಾರೆ.
ಖಾತೆ ಫ್ರೀಜ್ ಮಾಡಿ ಸೈಬರ್ ವಂಚಕರಿಂದ 3.70 ಕೋಟಿ ಹಣ ಹಿಂಪಡೆದ ಮುಂಬೈ ಪೊಲೀಸರು
Cyber fraud case: ವಂಚಿಸುತ್ತಿರುವುದು ತಿಳಿಯುತ್ತಿದ್ದಂತೆ ಮಹಿಳೆಯ ಸೈಬರ್ ಸಹಾಯವಾಣಿಗೆ ಕರೆ ಮಾಡಿ ತಿಳಿಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಮುಂಬೈ ಪೊಲೀಸರು ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿ, 3.70 ಕೋಟಿ ರೂ.ಗಳನ್ನು ಹಿಂಪಡೆದಿದ್ದಾರೆ.
By PTI
Published : Jan 9, 2024, 10:31 AM IST
"ಜ. 4ರಂದು ಮುಂಬೈ ನಗರದ ನಿವಾಸಿ ಸಂತ್ರಸ್ತ ಮಹಿಳೆ ಸೈಬರ್ ವಂಚಕರಿಂದ 4.56 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ. ಆನ್ಲೈನ್ ವಂಚಕರು ಸಂತ್ರಸ್ತ ಮಹಿಳೆಗೆ ಸ್ಟಾಕ್ ಹೂಡಿಕೆಯಲ್ಲಿ ಆಕರ್ಷಕ ಆದಾಯ ಬರುವ ಭರವಸೆ ನೀಡಿ, ವಂಚಿಸಿದ್ದಾರೆ. ಮಹಿಳೆ ತಕ್ಷಣವೇ 1930 ಸಹಾಯವಾಣಿ ಮೂಲಕ ಮುಂಬೈ ಕ್ರೈಂ ಬ್ರಾಂಚ್ನ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸೈಬರ್ ಅಧಿಕಾರಿಗಳು ತ್ವರಿತವಾಗಿ ಕಾರ್ಯಪ್ರವೃತ್ತರಾಗಿದ್ದು, ಬ್ಯಾಂಕ್ನ ನೋಡಲ್ ಅಧಿಕಾರಿಯೊಂದಿಗೆ ಸಮನ್ವಯ ಸಾಧಿಸಿ, ಹಣವನ್ನು ವರ್ಗಾಯಿಸಲು ಬಳಸಿದ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡುವ ಮೂಲಕ 3.67 ಕೋಟಿ ರೂ.ವನ್ನು ಹಿಂಪಡೆದಿದ್ದಾರೆ" ಎಂದು ಅಧಿಕಾರಿ ಮಾಹಿತಿ ನೀಡಿದರು.
ಇದನ್ನೂ ಓದಿ:ಬೆಂಗಳೂರು: 2023ರಲ್ಲಿ 12,627 ಕೇಸ್; ಸೈಬರ್, ಕೊಲೆ, ರಾಬರಿ, ವಾಹನ ಕಳ್ಳತನ ಪ್ರಕರಣಗಳಲ್ಲಿ ಹೆಚ್ಚಳ