ಮುಂಬೈ /ಮಹಾರಾಷ್ಟ್ರ:ಗಣೇಶ ಮೂರ್ತಿ ನಿಮಜ್ಜನ ವೇಳೆ ಸಮುದ್ರದಲ್ಲಿ ಮುಳುಗಿದ ಐವರು ಬಾಲಕರ ಪೈಕಿ ಇಬ್ಬರನ್ನು ರಕ್ಷಿಸಲಾಗಿದ್ದು, ಮೂವರು ನಾಪತ್ತೆಯಾಗಿದ್ದಾರೆ ಎಂದು ಬೃಹತ್ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ತಿಳಿಸಿದೆ.
ಗಣಪತಿ ನಿಮಜ್ಜನ ವೇಳೆ ಸಮುದ್ರದಲ್ಲಿ ಮುಳುಗಿದ ಐವರು ಬಾಲಕರು.. ಇಬ್ಬರ ರಕ್ಷಣೆ - ಗಣೇಶ ಮೂರ್ತಿ ನಿಮಜ್ಜನ
ಮುಂಬೈನ ವರ್ಸೋವಾ ಜೆಟ್ಟಿಯಲ್ಲಿ ಗಣೇಶ ಮೂರ್ತಿ ನಿಮಜ್ಜನ ವೇಳೆ ಸಮುದ್ರದಲ್ಲಿ ಮುಳುಗಿದ ಐವರು ಬಾಲಕರ ಪೈಕಿ ಇಬ್ಬರನ್ನು ರಕ್ಷಿಸಲಾಗಿದ್ದು, ಮೂವರಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ.
ಮುಂದುವರೆದ ಶೋಧ
ಮುಂಬೈನ ವರ್ಸೋವಾ ಜೆಟ್ಟಿಯಲ್ಲಿ ಈ ಘಟನೆ ನಡೆದಿದ್ದು, ಇಬ್ಬರು ಬಾಲಕರನ್ನು ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಉಳಿದ ಮೂವರಿಗಾಗಿ ಮುಂಬೈ ಅಗ್ನಿಶಾಮಕ ದಳದಿಂದ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಬಿಎಂಸಿ ಟ್ವೀಟ್ ಮೂಲಕ ತಿಳಿಸಿದೆ.
ಇದು ಗಣಪತಿ ಮೂರ್ತಿ ನಿಮಜ್ಜನಕ್ಕೆ ನಿಗದಿ ಪಡಿಸಿದ ಸ್ಥಳ ಆಗಿರಲಿಲ್ಲ, ಜನರು ಇಲ್ಲಿಗೆ ಬರದಂತೆ ನಿರ್ಬಂಧ ವಿಧಿಸಿದ್ದೆವು. ಆದರೂ ಅಕ್ರಮವಾಗಿ ಪ್ರವೇಶಿಸಿದ್ದಾರೆ ಎಂದು ವರ್ಸೋವಾ ಪೊಲೀಸ್ ಠಾಣೆಯ ಅಧಿಕಾರಿ ಮನೋಜ್ ವಾಮನ ಪೋಹಾನೇಕರ್ ತಿಳಿಸಿದ್ದಾರೆ.