ಸತ್ನಾ (ಮಧ್ಯಪ್ರದೇಶ):ಕಳೆದ ಎಂಟು ದಿನಗಳಿಂದ ನಾಪತ್ತೆಯಾಗಿರುವ ತನ್ನ ಮಗಳು ಎಲ್ಲಿದ್ದಾಳೆಂದು ಸುಳಿವು ನೀಡಿದವರಿಗೆ 50 ಸಾವಿರ ರೂಪಾಯಿ ಬಹುಮಾನ ಕೊಡುವುದಾಗಿ ರೈತ ಕಲ್ಲು ಪಟೇಲ್ ಘೋಷಿಸಿದ್ದಾರೆ. ಮೈಹಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ನ್ಯೂ ಅರ್ಕಾಂಡಿ ಪ್ರದೇಶದ ಯುವತಿ ಕಾಣೆಯಾಗಿದ್ದಾಳೆ.
ವರದಿಗಳ ಪ್ರಕಾರ, ಕಲ್ಲು ಪಟೇಲ್ ಪುತ್ರಿ ಪೂಜಾ ಪಟೇಲ್ ಜೂನ್ 28ರಂದು ಮಧ್ಯಾಹ್ನ 2ಗಂಟೆಗೆ ತನ್ನ ಸಂಬಂಧಿ ಮನೆಯಿಂದ ಹೊರ ಹೋದರು. ಸಂಜೆಯಾದರೂ ಆಕೆ ಮನೆಗೆ ಬಂದಿಲ್ಲ. ಫೋನ್ ಮಾಡಿದಾಗ ಸ್ವಿಚ್ ಆಫ್ ಆಗಿತ್ತು. ಸಂಬಂಧಿಕರು ಎಲ್ಲೆಡೆ ಹುಡುಕಿದರೂ, ಯುವತಿ ಪತ್ತೆಯಾಗಲೇ ಇಲ್ಲ.