ಭೋಪಾಲ್: ಮಧ್ಯಪ್ರದೇಶದಲ್ಲಿ ಮತಾಂತರ ಪ್ರಕ್ರಿಯೆ ನಿಲ್ಲುತ್ತಿಲ್ಲ ಎಂಬ ಆರೋಪದ ಮಧ್ಯೆ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಭಾನುವಾರ ರಾಜಧಾನಿ ಭೋಪಾಲ್‌ನ ಟಿಟಿ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯ ಶಿವನಗರದಲ್ಲಿ ಚರ್ಚ್ವೊಂದರಲ್ಲಿ ರಹಸ್ಯವಾಗಿ ಮತಾಂತರ ನಡೆಸುತ್ತಿದೆ ಎಂದು ಆರೋಪಿಸಿ ಹಿಂದೂ ಸಂಘಟನೆ ಕಾರ್ಯಕರ್ತರು ದಾಳಿ ಮಾಡಿದ್ದಾರೆ.
ಈ ಮತಾಂತರಕ್ಕೆ ಸಂಬಂಧಿಸಿದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ. ಈ ಕುರಿತಾಗಿ ಹಿಂದೂ ಸಂಘಟನೆ ಪದಾಧಿಕಾರಿಗಳು ಟಿಟಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಅನ್ಯ ಧರ್ಮದ ಗುರುಗಳು ಹಿಂದೂಗಳನ್ನು ಮತಾಂತರಗೊಳಿಸಿ ಪರಿವರ್ತಿಸಿ ಬಲವಂತ ಮತಾಂತರ ಮಾಡುತ್ತಿದ್ದರು. ಎಚ್ಚೆತ್ತ ಹಿಂದೂ ಸಂಘಟನೆಗಳು, ಬಜರಂಗದಳ, ಸಂಸ್ಕೃತಿ ಬಚಾವೋ ಮಂಚ್ ಶಿವನಗರದ ಪ್ರಾರ್ಥನಾ ಕೇಂದ್ರವೊಂದರ ಮೇಲೆ ದಾಳಿ ನಡೆಸಿವೆ ಎಂದು ಸಂಘಟನೆಯ ವಕ್ತಾರರು ಆರೋಪಿಸಿದ್ದಾರೆ. ಆದರೆ ಮತ್ತೊಂದೆಡೆ ಹಿಂದೂಗಳು, ನಮ್ಮ ಸ್ವಇಚ್ಛೆಯ ಮೇಲೆ ಆ ಧರ್ಮದ ಸೃಷ್ಟಿಕರ್ತನನ್ನು ಪ್ರಾರ್ಥಿಸುತ್ತಿದ್ದೇವೆ, ಅದರಲ್ಲಿ ತಪ್ಪೇನಿದೆ" ಎಂದು ವಾದಿಸಿದ್ದಾರೆ.