ಹಲ್ದ್ವಾನಿ(ಉತ್ತರಾಖಂಡ):ವಿಶ್ವದ ಅತಿ ಎತ್ತರದ ಪರ್ವತ ಶಿಖರ ಮೌಂಟ್ ಎವರೆಸ್ಟ್(Treacherous mountains mount Everest) ಅನ್ನು ಏರಿದ ಅತ್ಯಂತ ಕಿರಿಯ ಪರ್ವತಾರೋಹಿ ಶೀತಲ್ ರಾಜ್ (Sheetal Raj) ಅವರಿಗೆ ತೇನ್ಸಿಂಗ್ ನಾರ್ಗೆ ರಾಷ್ಟ್ರೀಯ ಸಾಹಸ ಪ್ರಶಸ್ತಿಯನ್ನು (Tenzing Norgay Award)ರಾಷ್ಟ್ರಪತಿ ರಾಮನಾಥ್ ಕೋವಿಂದ್ (President Ramnath Kovind) ಅವರು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಶುಕ್ರವಾರ ಪ್ರದಾನ ಮಾಡಿದರು.
ಪಿಥೋರಗಢ್ ಜಿಲ್ಲೆಯ ಸಲ್ಲೋಡಾ ಗ್ರಾಮದ ನಿವಾಸಿ ಟ್ಯಾಕ್ಸಿ ಚಾಲಕನ ಮಗಳಾದ ಶೀತಲ್ ರಾಜ್(25) ತೇನ್ಸಿಂಗ್ ಪ್ರಶಸ್ತಿ ಪಡೆದ ಅತಿ ಕಿರಿಯ ಪರ್ವತಾರೋಹಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.