ಉಜ್ಜಯಿನಿ(ಮಧ್ಯಪ್ರದೇಶ) : ನಗರದಿಂದ 50 ಕಿ.ಮೀ ದೂರದಲ್ಲಿರುವ ಬಾದ್ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅತ್ಯಾಚಾರ ಸಂತ್ರಸ್ತೆಯೋರ್ವಳು ತನ್ನ ಒಂದೂವರೆ ವರ್ಷದ ಮುಗ್ಧ ಮಗುವನ್ನು ಕ್ರೂರವಾಗಿ ಥಳಿಸಿ ಮನೆಯ ಹೊರಗೆ ಎಸೆದಿದ್ದಾಳೆ. ಘಟನೆಯ ವಿಡಿಯೋ ಬೆಳಕಿಗೆ ಬಂದ ಹಿನ್ನೆಲೆ ಬಾದ್ನಗರ ಠಾಣೆ ಪೊಲೀಸರು ತಾಯಿಯ ವಿರುದ್ಧ ಕ್ರಮ ಕೈಗೊಂಡಿದ್ದು, ಚೈಲ್ಡ್ ಲೈನ್ ಮಗುವಿನ ಆರೈಕೆ ಮಾಡುತ್ತಿದೆ.
ಹೆಚ್ಚಿನ ವಿವರ:ಉಜ್ಜಯಿನಿಯ ಬಾದ್ನಗರದ ತಹಶಿಲ್ ವ್ಯಾಪ್ತಿಯಲ್ಲಿರುವ ಜುನಾ ಪಟ್ಟಣದಲ್ಲಿ ನಿರ್ದಯಿ ಮಹಿಳೆ ಕ್ರೂರತನ ಪ್ರದರ್ಶಿಸಿದ್ದಾಳೆ. ತನ್ನ ಪುಟ್ಟ ಮಗುವನ್ನು ಈಕೆ ಪ್ರತಿದಿನ ಅಮಾನುಷವಾಗಿ ಥಳಿಸುತ್ತಿರುವುದು ತನಿಖೆಯಿಂದ ತಿಳಿದುಬಂದಿದೆ.