ಹಮೀರ್ಪುರ:ಹಿಮಾಚಲ ಪ್ರದೇಶದ ಹಮೀರ್ಪುರ ಜಿಲ್ಲೆಯ ಜ್ಯಾಣಾ ಎಂಬ ಗ್ರಾಮದ ತಾಯಿ ಹಾಗೂ ಮಗಳಿಗೆ ಏಕಕಾಲದಲ್ಲಿ ಸರ್ಕಾರಿ ಕೆಲಸ ದೊರೆತಿದೆ.
ತಾಯಿ ರೀಟಾರಿಗೆ ಶಿಕ್ಷಣ ಇಲಾಖೆಯ ಟಿಜಿಟಿ ಆರ್ಟ್ಸ್ ವಿಭಾಗದಲ್ಲಿ ಕೆಲಸ ಸಿಕ್ಕಿದ್ದು, ಮಗಳು ಶಿವಾನಿ ಚೌಹಾಣ್ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ)ಗೆ ಆಯ್ಕೆಯಾಗಿದ್ದಾರೆ. ಇದೀಗ ರೀಟಾರ ಕುಟುಂಬದಲ್ಲಿ ಸಂಭ್ರಮ ಮನೆಮಾಡಿದೆ.