ಕರ್ನಾಟಕ

karnataka

ETV Bharat / bharat

ಮಹಾರಾಷ್ಟ್ರ: ಚಲಿಸುತ್ತಿದ್ದ ರೈಲಿನಿಂದ ಕೆಳಗೆ ಬಿದ್ದು ತಾಯಿ, ಮಗು ದುರ್ಮರಣ - ರೈಲಿನಿಂದ ಬಿದ್ದ ತಾಯಿ ಮಗು

ಶೌಚಾಲಯಕ್ಕೆ ತೆರಳಿದ್ದ ವೇಳೆ ಚಲಿಸುತ್ತಿದ್ದ ರೈಲಿನಿಂದ ಕೆಳಗೆ ಬಿದ್ದು ತಾಯಿ ಮತ್ತು ಮಗು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

Mother Son Fell from Train
Mother Son Fell from Train

By

Published : Jan 4, 2022, 4:37 PM IST

Updated : Jan 4, 2022, 4:42 PM IST

ನಾಗ್ಪುರ​(ಮಹಾರಾಷ್ಟ್ರ):ಚಲಿಸುತ್ತಿದ್ದ ರೈಲಿನಿಂದ ಕೆಳಗೆ ಬಿದ್ದು 27 ವರ್ಷದ ಮಹಿಳೆ ಹಾಗು 18 ತಿಂಗಳ ಮಗು ಸಾವನ್ನಪ್ಪಿದ್ದಾರೆ. ಈ ದುರ್ಘಟನೆ ಮಹಾರಾಷ್ಟ್ರದ ತುಮ್ಸಾರ್​​ ರೈಲು ನಿಲ್ದಾಣದ ಸಮೀಪ ನಡೆದಿದೆ.

ವೈನ್‌ಗಂಗಾ ನದಿಯ ಸೇತುವೆ ಮೇಲೆ ಮಹಿಳೆಯ ಶವ ಪತ್ತೆ

ವಿವರ:

ಪತಿ ಇಶಾಂತ್​​ ಜೊತೆ ಪೂಜಾ ಹಾಗೂ ಅವರ ಪುತ್ರ ಅಥರ್ವ್​​ ಮಧ್ಯಪ್ರದೇಶದ ರೇವಾದಿಂದ ನಾಗ್ಪುರಕ್ಕೆ ಪ್ರಯಾಣಿಸುತ್ತಿದ್ದರು. ತುಮ್ಸಾರ್​ ರೈಲು ನಿಲ್ದಾಣ ಸಮೀಪಿಸುತ್ತಿದ್ದಂತೆ ಪೂಜಾ ತನ್ನ ಮಗುವಿನೊಂದಿಗೆ ಶೌಚಾಲಯಕ್ಕೆ ತೆರಳಿದ್ದಾರೆ. ಆದರೆ, ಸಾಕಷ್ಟು ಹೊತ್ತಾದರೂ ವಾಪಸ್​ ಬಾರದ ಕಾರಣ ಪತಿ ಗೊಂಡಾ ರೈಲು ನಿಲ್ದಾಣದಲ್ಲಿ ಪತ್ನಿ ಹಾಗು ಮಗು ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದಾರೆ. ಇದರ ಬೆನ್ನಲ್ಲೇ ಗಸ್ತು ನಡೆಸುತ್ತಿದ್ದ ಪೊಲೀಸರು ವೈಗಂಗಾ ನದಿ ಸೇತುವೆ ಮೇಲೆ ಮಹಿಳೆಯ ಶವ ಪತ್ತೆ ಮಾಡಿದ್ದು, ಬಾಲಕನ ಮೃತದೇಹವನ್ನು ನದಿಯಿಂದ ಹೊರತೆಗೆದಿದ್ದಾರೆ.

ರೈಲಿನಿಂದ ಕೆಳಗೆ ಬಿದ್ದು ಮೃತಪಟ್ಟ ತಾಯಿ ಮತ್ತು ಮಗು

ಇದನ್ನೂ ಓದಿ:IND vs SA 2nd Test : ಶಾರ್ದೂಲ್​ ಮಾರಕ ಬೌಲಿಂಗ್ ​​; ಭೋಜನ ವಿರಾಮದ ವೇಳೆಗೆ ಆಫ್ರಿಕಾ 102/4

ಶೌಚಾಲಯಕ್ಕೆ ತೆರಳಿದ್ದ ವೇಳೆ ತಾಯಿಯ ಕೈಯಿಂದ ಮಗು ಜಾರಿ ಬಿದ್ದಿದ್ದು, ರಕ್ಷಣೆಗೋಸ್ಕರ ತಾಯಿ ಕೂಡ ಕೆಳಗೆ ಬಿದ್ದು ಸಾವನ್ನಪ್ಪಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಮಧ್ಯಪ್ರದೇಶದ ರೇವಾದಲ್ಲಿರುವ ಮಿಲಿಟರಿ ಕಾಲೇಜಿ​​ನಲ್ಲಿ ಇಶಾಂತ್​ ರಸಾಯನಶಾಸ್ತ್ರ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ನಿನ್ನ ಇವರು ರೇವಾದಿಂದ ನಾಗ್ಪುರಕ್ಕೆ ಪ್ರಯಾಣ ಕೈಗೊಂಡಿದ್ದರು.

Last Updated : Jan 4, 2022, 4:42 PM IST

ABOUT THE AUTHOR

...view details