ವಿಶ್ವದ ಜನಸಂಖ್ಯೆ ಸುಮಾರು 7.85 ಬಿಲಿಯನ್ ದಾಟಿದ್ದು, ಇದರಲ್ಲಿ 5.27 ನಷ್ಟು ಜನರು ಇಂಟರ್ನೆಟ್ ಸಂಪರ್ಕ ಹೊಂದಿದ್ದಾರೆ. ಅಂದರೆ ಜಗತ್ತಿನ ಒಟ್ಟು ಜನಸಂಖ್ಯೆಯ ಮೂರನೇ 2ರಷ್ಟು ಜನ ಮೊಬೈಲ್ ಫೋನ್ ಬಳಸುತ್ತಿದ್ದಾರೆ.
ಕಳೆದ ವರ್ಷ ಜಾಗತಿಕವಾಗಿ ಇಂಟರ್ನೆಟ್ ಬಳಕೆದಾರರ ಸಂಖ್ಯೆ 330 ಮಿಲಿಯನ್ ಇತ್ತು. ಇದೀಗ 2021 ಏಪ್ರಿಲ್ ವೇಳೆಗೆ 4.7 ಬಿಲಿಯನ್ ಜನ ಅಂತರ್ಜಾಲ ಬಳಸುತ್ತಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.
ವಿಶ್ವದ ಜನಸಂಖ್ಯೆ ಸುಮಾರು 7.85 ಬಿಲಿಯನ್ ದಾಟಿದ್ದು, ಇದರಲ್ಲಿ 5.27 ನಷ್ಟು ಜನರು ಇಂಟರ್ನೆಟ್ ಸಂಪರ್ಕ ಹೊಂದಿದ್ದಾರೆ. ಅಂದರೆ ಜಗತ್ತಿನ ಒಟ್ಟು ಜನಸಂಖ್ಯೆಯ 2/3 ಕ್ಕಿಂತ ಹೆಚ್ಚು ಜನ ಮೊಬೈಲ್ ಫೋನ್ ಬಳಸುತ್ತಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಇಂಟರ್ನೆಟ್ ಬಳಕೆದಾರರ ಪ್ರಮಾಣ ಶೇ.7.6 ರಷ್ಟು ಹೆಚ್ಚಾಗಿದೆ. ಒಟ್ಟು ಇಂಟರ್ನೆಟ್ ಬಳಕೆದಾರರಲ್ಲಿ ಅರ್ಧದಷ್ಟು ಜನ ಕಳೆದ 12 ತಿಂಗಳ ಅವಧಿಯಲ್ಲಿ ಸೋಷಿಯಲ್ ಮೀಡಿಯಾ ಫ್ಲಾಟ್ಫಾರ್ಮ್ಗೆ ಬಂದಿದ್ದಾರೆ. ಕಿಪೊಸಿಸ್ ವಿಶ್ಲೇಷಣೆ ಪ್ರಕಾರ ಪ್ರಪಂಚದ ಪ್ರತಿ 10 ಜನರಲ್ಲಿ 6 ಮಂದಿ ಆನ್ಲೈನ್ ಸಂಪರ್ಕ ಪಡೆದಿದ್ದಾರೆ.
ಇನ್ನು ಅತೀ ಹೆಚ್ಚು ಇಂಟರ್ನೆಟ್ ಬಳಕೆದಾರರ ಪೈಕಿ ಹೆಚ್ಚಿನವರು ಯುಎಸ್ಎ ನಲ್ಲಿದ್ದರೆ ಭಾರತದಲ್ಲಿ ಇಂಟರ್ನೆಟ್ ಬಳಕೆದಾರರ ಪ್ರಮಾಣ ಶೇ. 13 ರಷ್ಟಿದೆ. ಇದೇ ವೇಳೆ, ಚೀನಾದಲ್ಲಿ ಶೇ. 21ರಷ್ಟು ಜನ ಇಂಟರ್ನೆಟ್ ಬಳಸುತ್ತಾರೆ. ಚೀನಾದಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ 85 ಮಿಲಿಯನ್ ಜನ ಸಾಮಾಜಿಕ ಜಾಲತಾಣಕ್ಕೆ ಹೊಸದಾಗಿ ಎಂಟ್ರಿ ಕೊಟ್ಟಿದ್ದಾರೆ. ಇನ್ನು ವಾಟ್ಸ್ಆ್ಯಪ್ ಪ್ರಪಂಚದ ನೆಚ್ಚಿನ ಸೋಷಿಯಲ್ ಫ್ಲಾಟ್ಫಾರ್ಮ್ ಆಗಿದೆ. ಆದಾಗ್ಯೂ ಇಂದಿಗೂ ಫೇಸ್ಬುಕ್ ಪ್ರಪಂಚಾದ್ಯಂತ ಹೆಚ್ಚಿನ ಗ್ರಾಹಕರನ್ನು ಹೊಂದಿದೆ. ಲಭ್ಯವಿರುವ ಡೇಟಾ ಪ್ರಕಾರ ಪ್ರತೀ ತಿಂಗಳು 2.8 ಬಿಲಿಯನ್ ಜನರನ್ನು ಫೇಸ್ಬುಕ್ ಆಕರ್ಷಿಸುತ್ತಿದೆ.