ಡೆಹ್ರಾಡೂನ್ (ಉತ್ತರಾಖಂಡ) :ಶಾಲೆಗಳಲ್ಲಿ ಮಕ್ಕಳಿಗೆ ಕಿರುಕುಳ ನೀಡುತ್ತಿರುವ ಬಗ್ಗೆ ಉತ್ತರಾಖಂಡ್ ಮಕ್ಕಳ ರಕ್ಷಣಾ ಆಯೋಗವು ನಡೆಸಿದ ತನಿಖೆಯಲ್ಲಿ ಅಚ್ಚರಿಯ ಮಾಹಿತಿಯೊಂದು ಹೊರಬಿದ್ದಿದೆ. 30 ಮದರಸಾಗಳಲ್ಲಿ 749 ಮುಸ್ಲಿಮೇತರ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ಮುಸ್ಲಿಮೇತರ ಮಕ್ಕಳು ಮದರಸಾಗಳಲ್ಲಿ ಶಿಕ್ಷಣ ಪಡೆಯುತ್ತಿರುವುದರ ಹಿಂದಿನ ಉದ್ದೇಶ ಏನು ಮತ್ತು ಎಷ್ಟು ದಿನಗಳಿಂದ ಈ ಶಿಕ್ಷಣ ಸಾಗುತ್ತಿದೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ವರದಿ ಕಂಡು ಮಕ್ಕಳ ಆಯೋಗ ಅಚ್ಚರಿ:ಶಾಲೆಗಳಲ್ಲಿ ಮಕ್ಕಳ ಮೇಲೆ ಹಲ್ಲೆ, ಕಿರುಕುಳದ ಬಗ್ಗೆ ಸಾಕಷ್ಟು ದೂರುಗಳು ಬಂದಿದ್ದವು. ಅವುಗಳ ವಿಚಾರಣೆಗೆ ಪ್ರತಿ ಶಾಲೆಗಳಲ್ಲಿ ತನಿಖೆ ನಡೆಸಿದಾಗ ಹಿಂದು ಸಮುದಾಯದ ಮಕ್ಕಳು ಹರಿದ್ವಾರ, ಉಧಮ್ ಸಿಂಗ್ ನಗರ ಮತ್ತು ನೈನಿತಾಲ್ ಜಿಲ್ಲೆಗಳಲ್ಲಿನ ಮದರಸಾಗಳಲ್ಲಿ ಶಿಕ್ಷಣ ಪಡೆಯುತ್ತಿರುವುದು ಕಂಡುಬಂದಿತು. ಇದು ಅಚ್ಚರಿಗೂ ಕಾರಣವಾಗಿದೆ. ಶಾಲೆಗಳಿದ್ದರೂ ಮಕ್ಕಳು ಮದರಸಾಗಳಲ್ಲಿ ಶಿಕ್ಷಣ ಪಡೆಯುತ್ತಿರುವುದರ ಬಗ್ಗೆ ತನಿಖೆ ನಡೆಸಲು ಶಿಕ್ಷಣ ಇಲಾಖೆ ತನಿಖೆಗೆ ಸೂಚಿಸಿದೆ.
ಮದರಸಾಗಳಲ್ಲಿ ಹಿಂದೂ ಮಕ್ಕಳು:ಮಕ್ಕಳ ಆಯೋಗದ ಅಧ್ಯಕ್ಷೆ ಗೀತಾ ಖನ್ನಾ ಅವರನ್ನು ಈಟಿವಿ ಭಾರತ್ ಸಂಪರ್ಕಿಸಿದಾಗ, ಮೂರು ಜಿಲ್ಲೆಗಳ ಮದರಸಾಗಳಲ್ಲಿ ಅನೇಕ ಹಿಂದೂ ಮಕ್ಕಳು ಓದುತ್ತಿರುವುದು ಕಂಡು ಬಂದಿದೆ. ಈ ಬಗ್ಗೆ ಉತ್ತರಾಖಂಡ ಮದರಸಾ ಕೌನ್ಸಿಲ್ನಿಂದ ವರದಿ ಕೇಳಲಾಗಿದೆ. ಮೂರು ಜಿಲ್ಲೆಗಳ ಮದರಸಾಗಳಲ್ಲಿ ಓದುತ್ತಿರುವ ಮುಸ್ಲಿಮೇತರ ಮಕ್ಕಳ ಸಂಖ್ಯೆ 749 ಎಂದು ತಿಳಿಸಿದರು.