ರಾಮ್‌ಪುರಹತ್,(ಪಶ್ಚಿಮಬಂಗಾಳ) :ಅಪರಿಚಿತ ವ್ಯಕ್ತಿಗಳು ಬಾಂಬ್ ದಾಳಿ ನಡೆಸಿದ್ದರಿಂದಾಗಿ ತೃಣಮೂಲ ಕಾಂಗ್ರೆಸ್‌ನ ಮುಖಂಡನೋರ್ವ ಸಾವನ್ನಪ್ಪಿರುವ ಘಟನೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯ ರಾಮ್‌ಪುರಹತ್‌ನಲ್ಲಿರುವ ಬರ್ಶಾಲ್ ಗ್ರಾಮ ಪಂಚಾಯತ್ ಬೊಗ್ಟುಯಿ ಗ್ರಾಮದಲ್ಲಿ ಹಿಂಸಾಚಾರದ ವಾತಾವರಣ ನಿರ್ಮಾಣವಾಗಿದ್ದು, ಸುಮಾರು 12 ಮಂದಿ ಸಾವನ್ನಪ್ಪಿದ್ದಾರೆ.
ಸೋಮವಾರ ನಡೆದ ಬಾಂಬ್ ದಾಳಿಯಲ್ಲಿ ಬರ್ಶಾಲ್ ಗ್ರಾಮ ಪಂಚಾಯತ್‌ನ ತೃಣಮೂಲ ಕಾಂಗ್ರೆಸ್‌ನ ಉಪಮುಖ್ಯಸ್ಥ ಭದು ಶೇಕ್ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಭದು ಶೇಕ್ ಬೆಂಬಲಿಗರು ಐದಕ್ಕೂ ಹೆಚ್ಚು ಮನೆಗಳಿಗೆ ಬೆಂಕಿ ಹಚ್ಚಿದ್ದು, 12ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಸುಮಾರು 12 ಮೃತದೇಹಗಳನ್ನು ಹಾನಿಗೊಳಗಾದ ಮನೆಗಳಿಂದ ಹೊರ ತೆಗೆದಿದ್ದಾರೆ. ರಕ್ಷಣಾ ಕಾರ್ಯ ವೇಗವಾಗಿ ನಡೆಯುತ್ತಿದ್ದು, ಇನ್ನಷ್ಟು ಮೃತದೇಹಗಳು ಪತ್ತೆಯಾಗುವ ಸಾಧ್ಯತೆ ಇದೆ. ಬೊಗ್ಟುಯಿ ಗ್ರಾಮದಲ್ಲಿ ಉದ್ವಿಗ್ನತೆ ಉಂಟಾಗಿದೆ. ಪೊಲೀಸ್ ಪಡೆ, ಯುದ್ಧ ಪಡೆ ನಿಯೋಜಿಸಲಾಗಿದೆ.
ಈಗಿನ ವರದಿಗಳ ಪ್ರಕಾರ ತೃಣಮೂಲ ಕಾಂಗ್ರೆಸ್‌ನ ಎರಡು ಬಣಗಳ ನಡುವಿನ ವೈಮನಸ್ಯವೇ ಹಿಂಸಾಚಾರಕ್ಕೆ ಕಾರಣ ಎನ್ನಲಾಗಿದೆ. ಭದು ಶೇಕ್ನನ್ನು ಕೊಂದವರೂ ತೃಣಮೂಲ ಕಾಂಗ್ರೆಸ್‌ನ ಮತ್ತೊಂದು ಬಣದವರು ಎನ್ನಲಾಗಿದೆ.
ಇದನ್ನೂ ಓದಿ:ಚುನಾವಣೆಯಲ್ಲಿ ಸೋತರೂ ಪುಷ್ಕರ್ಗೆ ಸಿಎಂ ಸ್ಥಾನ.. ಹಾಗಾದರೆ ಯುಪಿ ಡಿಸಿಎಂ ಆಗ್ತಾರಾ ಮೌರ್ಯ?