ಕರ್ನಾಟಕ

karnataka

ETV Bharat / bharat

ಮೋರ್ಬಿ ದುರಂತ.. ಮೃತರ ಕುಟುಂಬಕ್ಕೆ 10 ಲಕ್ಷ ಪರಿಹಾರ: ಗುಜರಾತ್ ಹೈಕೋರ್ಟ್ ಆದೇಶ - ಗುಜರಾತ್

ಮೋರ್ಬಿ ಸೇತುವೆ ಕುಸಿತ ಪ್ರಕರಣ-ಮೃತರ ಕುಟುಂಬಕ್ಕೆ 10 ಲಕ್ಷ ಹಾಗೂ ಗಾಯಗೊಂಡವರಿಗೆ 2 ಲಕ್ಷ ರೂ ಪರಿಹಾರ - ಗುಜರಾತ್ ಹೈಕೋರ್ಟ್ ಮಹತ್ವದ ಆದೇಶ.

Morbi Bridge Collapse case
Morbi Bridge Collapse case

By

Published : Feb 22, 2023, 2:31 PM IST

Updated : Feb 22, 2023, 2:43 PM IST

ಗಾಂಧಿನಗರ( ಗುಜರಾತ್)​​:ಮೊರ್ಬಿ ಸೇತುವೆ ಪ್ರಕರಣದಲ್ಲಿ ಗುಜರಾತ್ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂ ಹಾಗೂ ಗಾಯಾಳುಗಳಿಗೆ 2 ಲಕ್ಷ ರೂ. ಪರಿಹಾರ ನೀಡುವಂತೆ ಔರೆವಾ ಕಂಪನಿಗೆ ಆದೇಶಿದೆ. ಕಳೆದೊಂದು ದಶಕದಲ್ಲಿಯೇ ಅತ್ಯಂತ ಭೀಕರ ದುರಂತ ಎನ್ನಲಾಗಿರುವ ಗುಜರಾತ್‌ನ ಮೊರ್ಬಿಯಲ್ಲಿ ನಡೆದ ಕೇಬಲ್ ಸೇತುವೆ ಕುಸಿತ ಪ್ರಕರಣದಲ್ಲಿ 130ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದರು.

ಇದನ್ನೂ ಓದಿ:ಮೋರ್ಬಿ ದುರಂತದಲ್ಲಿ 141ಕ್ಕೂ ಹೆಚ್ಚು ಜನರ ಸಾವು: ಸರ್ಕಾರಿ ಆಸ್ಪತ್ರೆಗಳ ರಜೆ ರದ್ದು, ಘಟನಾ ಸ್ಥಳಕ್ಕೆ ಮೋದಿ ಭೇಟಿ ಸಾಧ್ಯತೆ

ದುರಂತಕ್ಕೆ ಕಾರಣವೇನು?:ಸೇತುವೆ ನವೀಕರಣದ ಬಳಿಕ ಅದರ ಗುಣಮಟ್ಟವನ್ನು ಪರಿಶೀಲನೆ ಮಾಡಿಲ್ಲ ಎನ್ನಲಾಗಿದೆ. ಮೂಲಗಳ ಪ್ರಕಾರ, ದುರಂತ ಸಂಭವಿಸಿದ ಸೇತುವೆಯ ಮೇಲೆ 150 ಜನರು ಒಟ್ಟಿಗೆ ಓಡಾಡಬಹುದು ಅಥವಾ ನಿಲ್ಲಬಹುದು. ಆದರೆ, ಪೂಜೆ ಎಂದು ಸಾಮರ್ಥ್ಯಕ್ಕಿಂತ 3 ಪಟ್ಟು ಅಂದ್ರೆ ಸುಮಾರು 500 ಜನರು ನಿಂತಿದ್ದು ಸೇತುವೆ ಕುಸಿದು ಬೀಳಲು ಪ್ರಮುಖ ಕಾರಣ ಎನ್ನಲಾಗಿದೆ.

ಕೇಬಲ್‌ನಲ್ಲಿ ತುಕ್ಕಿನ ಸಮಸ್ಯೆ: ಇನ್ನು ತೂಗು ಸೇತುವೆಯ ಕೆಲವು ತಂತಿಗಳು ಮೊದಲೇ ಮುರಿದಿದ್ದು, ಹಲವು ತುಕ್ಕು ಹಿಡಿದಿದ್ದವು ಎಂದು ತನಿಖಾ ವರದಿ ತಿಳಿಸಿದೆ. ಮೋರ್ಬಿ ಸೇತುವೆ ದುರಂತದ ತನಿಖೆಯನ್ನು ಗುಜರಾತ್ ಸರ್ಕಾರ ವಿಶೇಷ ತನಿಖಾ ತಂಡಕ್ಕೆ ವಹಿಸಿತ್ತು. ಎಸ್‌ಐಟಿ ಸೇತುವೆ ದುರಸ್ತಿ, ನಿರ್ವಹಣೆ ಹಾಗೂ ಕಾರ್ಯಾಚರಣೆಯಲ್ಲಿ ಹಲವು ಲೋಪಗಳನ್ನು ಪತ್ತೆ ಮಾಡಿ ವರದಿ ನೀಡಿದೆ.

ಇದನ್ನೂ ಓದಿ:ಮೋರ್ಬಿ ಸೇತುವೆ ಕುಸಿತ ಪ್ರಕರಣ.. ಭಾಷಣದ ವೇಳೆ ಭಾವುಕರಾದ ಪ್ರಧಾನಿ ಮೋದಿ

ಮಚ್ಚು ನದಿಯ ಮೇಲೆ 1887ರಲ್ಲಿ ಆಗಿನ ಆಡಳಿತಗಾರರು ನಿರ್ಮಿಸಿದ್ದ ಸೇತುವೆ 2 ಮುಖ್ಯ ಕೇಬಲ್‌ಗಳಲ್ಲಿ ಒಂದು ಕೇಬಲ್‌ನಲ್ಲಿ ತುಕ್ಕಿನ ಸಮಸ್ಯೆಯಿತ್ತು. ಅದರ ಅರ್ಧದಷ್ಟು ತಂತಿಗೆ ತುಕ್ಕು ಹಿಡಿದಿತ್ತು. ಇದು ಕಳೆದ ವರ್ಷ ಅಕ್ಟೋಬರ್ 30 ರಂದು ದುರಂತ ಸಂಭವಿಸಲು ಕಾರಣವಾಗಿರುವ ಸಾಧ್ಯತೆಯಿದೆ ಎನ್ನಲಾಗಿದೆ. ನದಿಯ ಮೇಲ್ಭಾಗದ ಮುಖ್ಯ ಕೇಬಲ್ ತುಂಡಾಗಿರುವುದು ದುರಂತಕ್ಕೆ ಕಾರಣ ಎಂದು ಎಸ್‌ಐಟಿ ತಿಳಿಸಿದೆ.

ಅಲ್ಲದೇ ಸೇತುವೆ ನವೀಕರಣದ ಸಂದರ್ಭದಲ್ಲಿ ಹಳೆಯ ಸ್ಟೀಲ್ ರಾಡ್‌ಗಳನ್ನು ಹೊಸ ಸಸ್ಪೆಂಡರ್‌ಗಳೊಂದಿಗೆ ಬೆಸುಗೆ ಹಾಕಲಾಗಿದೆ ಎಂಬುದನ್ನು ಎಸ್‌ಐಟಿ ಕಂಡು ಹಿಡಿದಿದೆ. ಆದ್ದರಿಂದ ಸಸ್ಪೆಂಡರ್‌ಗಳ ನಡವಳಿಕೆ ಬದಲಾಗಿದ್ದು, ದುರಂತ ಸಂಭವಿಸಲು ಕಾರಣವಾಗಿದೆ ಎಂದು ತಿಳಿಸಲಾಗಿದೆ. ದುರಂತ ಸಂಭವಿಸುವ ಸಂದರ್ಭ ಸೇತುವೆ ಮೇಲೆ 300 ಜನರಿದ್ದರು. ಇದು ಸೇತುವೆ ಭಾರವನ್ನು ಹೊರುವ ಸಾಮರ್ಥ್ಯಕ್ಕಿಂತಲೂ ಹೆಚ್ಚಾಗಿದೆ. ಆದರೂ ಸೇತುವೆಯ ನೈಜ ನಾಮರ್ಥ್ಯವನ್ನು ಪ್ರಯೋಗಾಲಯದ ವರದಿಗಳಿಂದ ದೃಢೀಕರಿಸಲಾಗುವುದು ಎಂದು ತಿಳಿಸಲಾಗಿತ್ತು.

ಇದನ್ನೂ ಓದಿ:ಮೋರ್ಬಿ ಸೇತುವೆಗೆ ಫಿಟ್ನೆಸ್‌ ಸರ್ಟಿಫಿಕೇಟ್‌ ನೀಡಿಲ್ಲ: ನಗರಸಭೆ ಮುಖ್ಯಾಧಿಕಾರಿ

12 ಸಂಬಂಧಿಕರನ್ನು ಕಳೆದುಕೊಂಡ ಬಿಜೆಪಿ ಸಂಸದ: ಮೊರ್ಬಿ ಕೇಬಲ್​ ಸೇತುವೆ ಕುಸಿದು ಬಿದ್ದ ದುರಂತದಲ್ಲಿ ಬಿಜೆಪಿ ಸಂಸದ ಮೋಹನ್‌ಭಾಯ್ ಕುಂದರಿಯಾ ತಮ್ಮ 12 ಜನ ಸಂಬಂಧಿಕರನ್ನು ಕಳೆದುಕೊಂಡಿದ್ದರು.

Last Updated : Feb 22, 2023, 2:43 PM IST

ABOUT THE AUTHOR

...view details