ರಾಂಪುರ(ಉತ್ತರಪ್ರದೇಶ): ಜಿಲ್ಲೆಯ ಶಹಾಬಾದ್ ತಹಸಿಲ್ ಆವರಣದಲ್ಲಿ ನಿಂತಿದ್ದ ವಕೀಲ ವಿನೋದ್ ಬಾಬು ಅವರ ಕೈಲಿದ್ದ ಒಂದು ಲಕ್ಷ ರೂಪಾಯಿ ನಗದು ಇದ್ದ ಬ್ಯಾಗ್ ಅನ್ನು ಮಂಗವೊಂದು ಕಸಿದುಕೊಂಡು ಮರವೇರಿ ಕುಳಿತಿದೆ.
1 ಲಕ್ಷ ರೂ ಎಗರಿಸಿ ಮರವೇರಿ ಕುಳಿತ ಕೋತಿ ಈ ವೇಳೆ ಬ್ಯಾಗ್ನಿಂದ 50 ಸಾವಿರ ರೂಪಾಯಿ ಬಂಡಲ್ ಎಸೆದ ವಾನರ ಪಡೆ, ಮತ್ತೊಂದು ಕಂತೆಯಿಂದ ಒಂದೊಂದೇ ನೋಟನ್ನು ಹಿರಿದು ಗಾಳಿಗೆ ತೂರಿವೆ. ಕಪಿಚೇಷ್ಟೆ ಕಣ್ತುಂಬಿಕೊಳ್ಳಲು ಸ್ಥಳದಲ್ಲಿ ಜನರು ಜಮಾವಣೆಗೊಂಡರು. ಆದರೂ, ಕೋತಿ 500 ರೂಪಾಯಿಯ 17 ನೋಟುಗಳನ್ನು ಗಾಳಿಗೆ ತೂರಿದವು. ಇದರಿಂದಾಗಿ ವಿನೋದ್ ಅವರಿಗೆ ಎಂಟೂವರೆ ಸಾವಿರ ರೂಪಾಯಿ ನಷ್ಟವಾಯಿತು.
ಈ ಬಗ್ಗೆ ಪ್ರತಿಕ್ರಿಯಿಸಿರುವ ವಕೀಲ ವಿನೋದ್ ಬಾಬು ಪುತ್ರ ಆಶಿಶ್, ಹಣ ಕಟ್ಟಲು ಬ್ಯಾಂಕ್ಗೆ ಹೋಗಿದ್ದೆವು. ಈ ವೇಳೆ, ಅಲ್ಲಿನ ಸ್ಥಳೀಯರು ಕೋತಿಗಳಿಗೆ ಆಹಾರ ನೀಡಿದ್ದಾರೆ. ಆಹಾರ ಪಡೆಯಲು ಬಂದ ಕೋತಿ, ನನ್ನ ತಂದೆ ಕೈಲಿದ್ದ ಬ್ಯಾಗ್ ಅನ್ನು ಕಸಿದು ಪರಾರಿಯಾಗಿವೆ. ಹೇಗೋ ಅಲ್ಲಿದ್ದ ಸ್ಥಳೀಯರ ನೆರವಿನಿಂದ ಹಣ ಪಡೆದೆವು. ಆದರೆ, ಎಂಟೂವರೆ ಸಾವಿರ ರೂಪಾಯಿ ನಷ್ಟವಾಗಿದೆ ಎಂದರು.
ಇದನ್ನೂ ಓದಿ: 2020ರಲ್ಲಿ ಕೋಮು ಗಲಭೆ ಪ್ರಕರಣಗಳು ದ್ವಿಗುಣ: NCRB ವರದಿ
ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದೆ. ಕೋತಿಗಳ ಹಾವಳಿ ತಡೆಗಟ್ಟಲು ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.