ಗುವಾಹಟಿ (ಅಸ್ಸೋಂ): ದಾರಿ ಕೇಳುವ ನೆಪದಲ್ಲಿ ತಡೆದು ನಿಲ್ಲಿಸಿ ತನ್ನ ಮೇಲೆ ದಾಳಿ ಮಾಡಲು ಮುಂದಾದ ವ್ಯಕ್ತಿಯ ಸ್ಕೂಟರ್ ಅನ್ನು ಚರಂಡಿಗೆಸೆದ ಮಹಿಳೆ, ಆತ ತಪ್ಪಿಸಿಕೊಳ್ಳದಂತೆ ತಡೆದಿರುವ ಘಟನೆ ನಗರದ ಜನನಿಬಿಡ ಪ್ರದೇಶದಲ್ಲಿ ನಡೆದಿದೆ.
ಭಾವನ ಕಶ್ಯಪ್ ಎಂಬ ಮಹಿಳೆ ಈ ಬಗ್ಗೆ ಫೇಸ್ಬುಕ್ನಲ್ಲಿ ವಿಡಿಯೋ ಹಂಚಿಕೊಂಡಿದ್ದು, ಅದು ವೈರಲ್ ಆಗುತ್ತಿದ್ದಂತೆ ಸಾಕಷ್ಟು ಜನಪ್ರಿಯತೆ ಗಳಿಸಿದ್ದಾಳೆ.
ಆರೋಪಿ ನನ್ನ ಬಳಿ ಬಂದು ದಾರಿ ಕೇಳಿದ, ನಾನು ಗೊತ್ತಿಲ್ಲ ಎಂದೆ. ತಕ್ಷಣ ಆತ ನನ್ನ ಹತ್ತಿರ ಬಂದು ಖಾಸಗಿ ಭಾಗಗಳನ್ನು ಮುಟ್ಟಲು ಪ್ರಯತ್ನಿಸಿದ. ಅಲ್ಲದೇ, ನನ್ನ ದೇಹದ ಮೇಲೆ ಕೈ ಹಾಕಿ ಲೈಂಗಿಕವಾಗಿ ದಾಳಿ ಮಾಡಲು ಮುಂದಾಗಿದ್ದಾನೆ. ಇದರಿಂದ ಅರೆಕ್ಷಣ ನನಗೆ ಏನು ಮಾಡಬೇಕು ಎಂದು ತೋಚದೆ ವಿಚಲಿತಳಾದೆ ಎಂದು ಮಹಿಳೆ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾಳೆ.