ಕರ್ನಾಟಕ

karnataka

ETV Bharat / bharat

ಶಿರೋಮಣಿ ಅಕಾಲಿ ದಳ ಸ್ಥಾಪನೆಯಾಗಿ 100 ವರ್ಷ: ಮೊಗಾದಲ್ಲಿ ಬೃಹತ್‌ ರ‍್ಯಾಲಿ - ಶಿರೋಮಣಿ ಅಕಾಲಿ ದಳ ಸಂಸ್ಥಾಪನಾ ದಿನ

ಪಂಜಾಬ್‌ನ ಮೊಗಾದಲ್ಲಿಂದು ಶಿರೋಮಣಿ ಅಕಾಲಿ ದಳ 100ನೇ ವರ್ಷದ ಸಂಸ್ಥಾಪನೆ ದಿನದ ನಿಮಿತ್ತ ನಡೆಸಿದ ಬೃಹತ್‌ ರ‍್ಯಾಲಿಯಲ್ಲಿ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದಾರೆ.

Moga: Shiromani Akali Dal holds rally to mark 100 years of party's foundation
ಶಿರೋಮಣಿ ಅಕಾಲಿ ದಳ ಸ್ಥಾಪನೆಯಾಗಿ 100 ವರ್ಷ ಪೂರೈಕೆ; ಮೊಗಾದಲ್ಲಿ ಬೃಹತ್‌ ರ‍್ಯಾಲಿ

By

Published : Dec 14, 2021, 4:41 PM IST

ಮೊಗಾ (ಪಂಜಾಬ್): ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಸ್ಥಾಪನೆಯಾಗಿ 100 ವರ್ಷ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಪಂಜಾಬ್‌ನ ಮೊಗಾದಲ್ಲಿಂದು ಬೃಹತ್‌ ರ‍್ಯಾಲಿ ನಡೆಸಿದ್ದು, ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದಾರೆ.

ಪಂಥ್, ಪಂಜಾಬ್, ಪಂಜಾಬಿಗಳು ಮತ್ತು ಪಂಜಾಬಿಯತ್‌ನ ಹೆಮ್ಮೆ ಹಾಗೂ ಗೌರವವನ್ನು ಕಾಪಾಡಲು 100 ವರ್ಷಗಳ ನಿಸ್ವಾರ್ಥ ಸೇವೆ, 'ಬಲಿದಾನ' ಹಾಗೂ ಸಂಘರ್ಷ ನಮ್ಮ ಮೂಲ ಮೌಲ್ಯಗಳಾಗಿವೆ. ಶಾಂತಿ, ಪ್ರಗತಿಗಾಗಿ ಅದೇ ಮಾರ್ಗ ಅನುಸರಿಸಲು ನಾವು ಬದ್ಧರಾಗಿದ್ದೇವೆ ಎಂದು ಎಸ್‌ಎಡಿ ತನ್ನ ಟ್ವಿಟರ್​​​ ಖಾತೆಯಲ್ಲಿ ಬರೆದುಕೊಂಡಿದೆ.

ಶಿರೋಮಣಿ ಅಕಾಲಿ ದಳದ ಮೈತ್ರಿ ಪಕ್ಷವಾಗಿರುವ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಮುಖ್ಯಸ್ಥೆ ಮಾಯಾವತಿ ಎಸ್‌ಎಡಿಗೆ ಶುಭಾಶಯ ತಿಳಿಸಿದ್ದು, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಂಜಾಬ್‌ನಲ್ಲಿ ತಾವು ಅಧಿಕಾರಕ್ಕೆ ಬರಲಿದ್ದೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸುಖಬೀರ್ ಸಿಂಗ್ ಬಾದಲ್ ಅವರ ನೇತೃತ್ವದಲ್ಲಿ ಶಿರೋಮಣಿ ಅಕಾಲಿದಳ ಮತ್ತು ಬಿಎಸ್‌ಪಿ ಮೈತ್ರಿ ಪೂರ್ಣ ಬಹುಮತದೊಂದಿಗೆ ಪಂಜಾಬ್‌ನಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ನಾನು ಭಾವಿಸುತ್ತೇನೆ ಎಂದು ಮಾಯಾವತಿ ಹೇಳಿದ್ದಾರೆ.

ಇದನ್ನೂ ಓದಿ:ಲಖೀಂಪುರ್‌ ಖೇರಿ ಹಿಂಸಾಚಾರ ಪೂರ್ವಯೋಜಿತ: ಆರೋಪಿಗಳ ವಿರುದ್ಧ ಹೊಸ ಸೆಕ್ಷನ್‌ ಸೇರಿಸಲು ಎಸ್‌ಐಟಿ ಅರ್ಜಿ

ABOUT THE AUTHOR

...view details