ಕರ್ನಾಟಕ

karnataka

By

Published : Oct 10, 2021, 3:53 PM IST

ETV Bharat / bharat

ಮೋದಿ ಸರ್ಕಾರ ಈಗ ಮಸೂದೆಗಳನ್ನು ಸಂಸತ್ತಿನ ಸ್ಥಾಯಿ ಸಮಿತಿಗಳ ಪರಿಶೀಲನೆಗೆ ಉಲ್ಲೇಖಿಸಬೇಕು : ಜೈರಾಮ್ ರಮೇಶ್

ಸಂಸತ್ತಿನ ಸ್ಥಾಯಿ ಸಮಿತಿಗಳನ್ನು ಶನಿವಾರ ಹೊಸ ಅವಧಿಗೆ ಪುನರ್ ​ರಚಿಸಲಾಯಿತು. ಕಾಂಗ್ರೆಸ್ ಸದಸ್ಯರು ಗೃಹ, ಮಾಹಿತಿ ತಂತ್ರಜ್ಞಾನ ಮತ್ತು ಪರಿಸರ ಮತ್ತು ಅರಣ್ಯಗಳ ಇಲಾಖೆಗಳಲ್ಲಿ ಮುಂದುವರೆದಿದ್ದಾರೆ. ಕಾಂಗ್ರೆಸ್ ನಾಯಕ ಮತ್ತು ರಾಜ್ಯಸಭಾ ಸಂಸದ ಜೈರಾಮ್ ರಮೇಶ್ ಅವರು ಭಾನುವಾರ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ..

Jairam Ramesh
Jairam Ramesh

ಹೈದರಾಬಾದ್ :ಕಾಂಗ್ರೆಸ್ ನಾಯಕ ಮತ್ತು ರಾಜ್ಯಸಭಾ ಸಂಸದ ಜೈರಾಮ್ ರಮೇಶ್ ಅವರು ಭಾನುವಾರ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಟ್ವೀಟ್​ ಮಾಡಿರುವ ಅವರು, "ತಡವಾಗಿರುವುದಕ್ಕಿಂತ ಉತ್ತಮವಾಗಿದೆ. ಸಂಸತ್ತಿನ 24 ಸ್ಥಾಯಿ ಸಮಿತಿಗಳನ್ನು ಅಂತಿಮವಾಗಿ ಘೋಷಿಸಲಾಗಿದೆ. ಕೇವಲ ಒಂದು ಸಣ್ಣ ವಿಷಯ ಮಾತ್ರ ಉಳಿದಿದೆ. ಮೋದಿ ಸರ್ಕಾರವು ಈಗ ಈ ಸಮಿತಿಗಳಿಗೆ ಪರಿಶೀಲನೆಗಾಗಿ ಮಸೂದೆಗಳನ್ನು ಉಲ್ಲೇಖಿಸಬೇಕು. ನಾವು ಭರವಸೆಯಿಂದ ಬದುಕುತ್ತೇವೆ." ಎಂದು ಹೇಳಿದ್ದಾರೆ.

ಸಂಸತ್ತಿನ ಸ್ಥಾಯಿ ಸಮಿತಿಗಳನ್ನು ಶನಿವಾರ ಹೊಸ ಅವಧಿಗೆ ಪುನರ್ ​ರಚಿಸಲಾಯಿತು. ಕಾಂಗ್ರೆಸ್ ಸದಸ್ಯರು ಗೃಹ, ಮಾಹಿತಿ ತಂತ್ರಜ್ಞಾನ ಮತ್ತು ಪರಿಸರ ಮತ್ತು ಅರಣ್ಯಗಳ ಇಲಾಖೆಗಳಲ್ಲಿ ಮುಂದುವರೆದಿದ್ದಾರೆ.

ಪುನರ್​ ರಚಿಸಿದ 24 ಸಮಿತಿಗಳಲ್ಲಿ ಹೆಚ್ಚಿನವು ಹಿಂದಿನ ಚುಕ್ಕಾಣಿ ಹಿಡಿದ ಅಧ್ಯಕ್ಷರ ನೇತೃತ್ವದಲ್ಲಿಯೇ ಮುಂದುವರಿದಿವೆ. ರಾಜ್ಯಸಭಾ ಸೆಕ್ರೆಟರಿಯೇಟ್ ಹೊರಡಿಸಿದ ಬುಲೆಟಿನ್ ಪ್ರಕಾರ, ಜೈರಾಮ್ ರಮೇಶ್ ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಪರಿಸರ, ಮತ್ತು ಅರಣ್ಯ ಮತ್ತು ಹವಾಮಾನ ಬದಲಾವಣೆ ಕುರಿತು ಸಮಿತಿಯ ಅಧ್ಯಕ್ಷರಾಗಿಯೇ ಮುಂದುವರೆದಿದ್ದಾರೆ.

ಓದಿ:ದೇಶದಲ್ಲೇ ಪ್ರಥಮ: ಚಾಕೋಲೆಟ್​, ನೂಡಲ್ಸ್ ಸಾಗಾಟಕ್ಕೆ ಎಸಿ ಬೋಗಿ ಬಳಸಿದ ಭಾರತೀಯ ರೈಲ್ವೆ

ABOUT THE AUTHOR

...view details