ನವದೆಹಲಿ: ಕೇಂದ್ರ ಜಾರಿಗೆ ತಂದ ಮೂರು ಕೃಷಿ ಕಾನೂನುಗಳು 'ಕರಾಳ ಕಾಯ್ದೆ'ಗಳಾಗಿವೆ. ಅವುಗಳನ್ನು ಹಿಂಪಡೆಯುವ ಮೂಲಕ ಮೋದಿ ಸರ್ಕಾರ ರೈತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ. ಸತ್ಯಕ್ಕಾಗಿ ರೈತರು ನಡೆಸುತ್ತಿರುವ ಹೋರಾಟವನ್ನು ತಡೆಯಲು ಯಾವ ಸರ್ಕಾರದಿಂದಲೂ ಸಾಧ್ಯವಿಲ್ಲ ಎಂದು ಅವರು ಟ್ವೀಟ್ ಮಾಡಿದ್ದಾರೆ.
ರೈತರ ಹೋರಾಟ ಹತ್ತಿಕ್ಕಲು ಯಾವ ಸರ್ಕಾರದಿಂದಲೂ ಸಾಧ್ಯವಿಲ್ಲ: ರಾಹುಲ್ ಗಾಂಧಿ - Rahul Gandhi tweet about Farmers protest
ಸತ್ಯಕ್ಕಾಗಿ ರೈತರು ನಡೆಸುತ್ತಿರುವ ಹೋರಾಟವನ್ನು ತಡೆಯಲು ಯಾವ ಸರ್ಕಾರದಿಂದಲೂ ಸಾಧ್ಯವಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ
ಅಹಂಕಾರ ಮತ್ತು ಸತ್ಯದ ನಡುವೆ ಘರ್ಷಣೆಯಾದಾಗ ಯಾವಾಗಲೂ ಅಹಂಕಾರ ಸೋಲುತ್ತದೆ ಎಂಬುವುದನ್ನು ಪ್ರಧಾನಿ ನೆನಪಿನಲ್ಲಿಡಬೇಕು. ವಿಶ್ವದ ಯಾವುದೇ ಸರ್ಕಾರಕ್ಕೂ ರೈತರು ಸತ್ಯಕ್ಕಾಗಿ ಹೋರಾಡುವುದನ್ನು ತಡೆಯಲು ಸಾಧ್ಯವಿಲ್ಲ, ಇದು ಕೇವಲ ಪ್ರಾರಂಭ. ಮೋದಿ ಸರ್ಕಾರವು ರೈತರ ಬೇಡಿಕೆಗಳನ್ನು ಪರಿಗಣಿಸಿ, ಕರಾಳ ಕಾಯ್ದೆಗಳನ್ನು ಹಿಂತೆಗೆದುಕೊಳ್ಳಬೇಕು ಎಂದು ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.