ಕರ್ನಾಟಕ

karnataka

ETV Bharat / bharat

ಮೋದಿ ಸರ್ಕಾರದಿಂದ ಹೀಗೊಂದು ಆಫರ್​: ಮನೆಯಲ್ಲೇ ಕುಳಿತು 15 ಲಕ್ಷ ರೂ. ಗೆಲ್ಲಿರಿ..

ಮನೆಯಲ್ಲಿದ್ದುಕೊಂಡೇ ಹಣ ಸಂಪಾದನೆ ಮಾಡುವವರಿಗೆ ಕೇಂದ್ರ ಸರ್ಕಾರ ಒಳ್ಳೆಯ ಆಫರ್​ ನೀಡಿದೆ. ಇದಕ್ಕಾಗಿ ಹೆಸರು ನೋಂದಣಿ ಮಾಡಿಕೊಳ್ಳಲು ಆಗಸ್ಟ್​ 15ರವರೆಗೆ ಅವಕಾಶವಿದೆ.

modi government
modi government

By

Published : Jul 30, 2021, 6:46 PM IST

ಹೈದರಾಬಾದ್​: ಕೇಂದ್ರ ಸರ್ಕಾರದಿಂದ ಮನೆಯಲ್ಲೇ ಕುಳಿತುಕೊಂಡು 15 ಲಕ್ಷ ರೂಪಾಯಿ ಗೆಲ್ಲುವ ಅವಕಾಶವೊಂದು ಒದಗಿ ಬಂದಿದೆ. ಈ ವಿಚಾರವಾಗಿ ಕೇಂದ್ರ ಹಣಕಾಸು ಇಲಾಖೆ My Gov India ಅಧಿಕೃತ ಟ್ವಿಟರ್​ನಲ್ಲಿ ಮಾಹಿತಿ ಹಂಚಿಕೊಂಡಿದೆ.

ಕೇಂದ್ರ ಸರ್ಕಾರದಿಂದ ಹೊಸದಾಗಿ ಆರಂಭಗೊಂಡಿರುವ ಅಭಿವೃದ್ಧಿ ಹಣಕಾಸು ಸಂಸ್ಥೆ (ಡಿಎಫ್‌ಐ) ಗಾಗಿ ಕೇಂದ್ರ ಸರ್ಕಾರ ವಿಭಿನ್ನ ಲೋಗೋ ಹಾಗೂ ಟ್ಯಾಗ್​ ಲೈನ್​ ಹುಡುಕುತ್ತಿದೆ. ಇದೀಗ ಜನಸಾಮಾನ್ಯರು ಮನೆಯಿಂದಲೇ ಕ್ರಿಯೆಟಿವ್​ ಆಗಿ ಹೆಸರು, ಲೋಗೋ ಮತ್ತು ಟ್ಯಾಗ್‌ಲೈನ್​ ನೀಡಿ 15 ಲಕ್ಷ ರೂ. ಬಹುಮಾನ ಗೆಲ್ಲಬಹುದಾಗಿದೆ. ಈ ಸ್ಪರ್ಧೆಯಲ್ಲಿ ಭಾಗಿಯಾಗಲು ಆಗಸ್ಟ್​ 15 ಕೊನೆಯ ದಿನವಾಗಿದ್ದು, ಅದರೊಳಗೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.

ಇದನ್ನೂ ಓದಿ: Exclusive: 'ಅಕ್ಕನ ಮದುವೆಗೆ ಹೋಗಲಿಲ್ಲ, ಫೋನ್‌ ಬಳಸಲೇ ಇಲ್ಲ, ಫಿಟ್ನೆಸ್‌ಗಾಗಿ ಇಷ್ಟದ ತಿನಿಸೂ ತಿನ್ನಲಿಲ್ಲ'- ಚಾನು ವಿಶೇಷ ಸಂದರ್ಶನ

ಡಿಎಫ್‌ಐಗಾಗಿ ವಿಶೇಷವಾದ ಹೆಸರು, ಟ್ಯಾಗ್​ಲೈನ್​ ಹಾಗೂ ಲೋಗೋ ನಿರ್ಮಾಣ ಮಾಡುವವರಿಗೆ ಈ ಸ್ಪರ್ಧೆ ಆಯೋಜನೆ ಮಾಡಲಾಗಿದೆ. ಇದರಲ್ಲಿ ಪ್ರಥಮ ಸ್ಥಾನ ಪಡೆದುಕೊಳ್ಳುವವರಿಗೆ 5 ಲಕ್ಷ ರೂ.ಎರಡನೇ ಸ್ಥಾನಕ್ಕೆ 3 ಲಕ್ಷ ಹಾಗೂ ಮೂರನೇ ಸ್ಥಾನಕ್ಕೆ 2 ಲಕ್ಷ ರೂ ನಿಗದಿ ಮಾಡಲಾಗಿದೆ.

ಅಭಿವೃದ್ಧಿ ಹಣಕಾಸು ಸಂಸ್ಥೆ ಗಮನದಲ್ಲಿಟ್ಟುಕೊಂಡು ಈ ಹೆಸರು, ಟ್ಯಾಗ್​ಲೈನ್​ ಹಾಗೂ ಲೋಗೋ ವಿನ್ಯಾಸಗೊಳ್ಳಬೇಕಾಗಿದ್ದು, ನೋಡಲು ಹಾಗೂ ಉಚ್ಚಾರ ಮಾಡಲು ಸುಲಭವಾಗಿರಬೇಕು ಎಂದು ಸಂಸ್ಥೆ ತಿಳಿಸಿದೆ. my gov.in ಪೋರ್ಟಲ್​ಗೆ ಹೋಗಿ ಲಾಗಿನ್​ ಟು ಪಾರ್ಟಿಸಿಪೇಟ್​ ಟ್ಯಾಬ್​​ ಮೇಲೆ ಕ್ಲಿಕ್​ ಮಾಡಿ, ನಿಮ್ಮ ವಿವರ ತುಂಬಬೇಕು.

ಹೆಸರು, ಟ್ಯಾಗ್​ಲೈನ್​ ಹಾಗೂ ಲೋಗೋ ಮೂರು ವಿಭಾಗಕ್ಕೂ ಬಹುಮಾನ ನಿಗದಿ ಮಾಡಲಾಗಿದ್ದು, ಪ್ರಥಮ, ದ್ವಿತೀಯ ಹಾಗೂ ಮೂರನೇ ಸ್ಥಾನ ಇರಲಿದೆ. ಹೆಚ್ಚಿನ ಮಾಹಿತಿಗಾಗಿ https://www.mygov.in/task/name-tagline-and-logo-contest-development-financial-institution ವೆಬ್​​ಸೈಟ್​ಗೆ ಭೇಟಿ ನೀಡಬಹುದಾಗಿದೆ. ವಿಶೇಷವೆಂದರೆ 2014ರಲ್ಲಿ ಪ್ರಧಾನ್​ ಮಂತ್ರಿ ಜನ್​ ಧನ್​ ಯೋಜನೆಗೋಸ್ಕರ ಹಣಕಾಸು ಇಲಾಖೆ ಇದೇ ರೀತಿಯ ಸ್ಪರ್ಧೆ ನಡೆಸಿತ್ತು ಎಂಬುದು ಗಮನಾರ್ಹ ಸಂಗತಿ.

ABOUT THE AUTHOR

...view details