ಕರ್ನಾಟಕ

karnataka

ETV Bharat / bharat

ವೀರೇಂದ್ರ ಹೆಗ್ಗಡೆ,ಇಳಯರಾಜ, ಪಿಟಿ ಉಷಾ ಸೇರಿ ನಾಲ್ವರು ದಿಗ್ಗಜರು ರಾಜ್ಯಸಭೆಗೆ ನಾಮನಿರ್ದೇಶನ.. ಮೋದಿ ಅಭಿನಂದನೆ - Veerendra Heggade

ಕರ್ನಾಟಕ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ, ಸಂಗೀತ ಮಾಂತ್ರಿಕ ಇಳಯರಾಜ, ಭಾರತ ಕಂಡಿರುವ ಶ್ರೇಷ್ಠ ಅಥ್ಲೀಟ್​ ಪಿಟಿ ಉಷಾ ಸೇರಿದಂತೆ ನಾಲ್ವರು ರಾಜ್ಯಸಭೆಗೆ ನಾಮನಿರ್ದೇಶನಗೊಂಡಿದ್ದಾರೆ. ಇವರಿಗೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡುವ ಮೂಲಕ ಅಭಿನಂದನೆ ಸಲ್ಲಿಕೆ ಮಾಡಿದ್ದಾರೆ.

Veerendra Heggade Rajya Sabha
Veerendra Heggade Rajya Sabha

By

Published : Jul 6, 2022, 8:41 PM IST

Updated : Jul 6, 2022, 10:55 PM IST

ನವದೆಹಲಿ:ಕರ್ನಾಟಕ ಧರ್ಮಸ್ಥಳದ ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ,ಸಂಗೀತ ಮಾಂತ್ರಿಕ ಇಳಯರಾಜ, ಭಾರತ ಕಂಡಿರುವ ಶ್ರೇಷ್ಠ ಅಥ್ಲೀಟ್​ ಪಿಟಿ ಉಷಾ ಸೇರಿದಂತೆ ನಾಲ್ವರು ರಾಜ್ಯಸಭೆಗೆ ನಾಮ ನಿರ್ದೇಶನಗೊಂಡಿದ್ದಾರೆ. ಇವರಿಗೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡುವ ಮೂಲಕ ಅಭಿನಂದನೆ ಸಲ್ಲಿಕೆ ಮಾಡಿದ್ದಾರೆ.

ರಾಜ್ಯಸಭೆಗೆ ಯಾರೆಲ್ಲ ನಾಮನಿರ್ದೇಶನ

  • ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ(ಕರ್ನಾಟಕ)
  • ಲೆಜೆಂಡರಿ ಅಥ್ಲೀಟ್ ಪಿಟಿ ಉಷಾ(ಕೇರಳ)
  • ಸಂಗೀತ ಮಾಂತ್ರಿಕ ಇಳಯರಾಜ(ತಮಿಳುನಾಡು)
  • ಖ್ಯಾತ ಚಿತ್ರಕಥೆಗಾರ ವಿ. ವಿಜಯೇಂದ್ರ ಪ್ರಸಾದ್​(ಆಂಧ್ರಪ್ರದೇಶ)

ವೀರೇಂದ್ರ ಹೆಗ್ಗಡೆಯವರು ಅತ್ಯುತ್ತಮ ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಧರ್ಮಸ್ಥಳದ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲು ಮತ್ತು ಆರೋಗ್ಯ, ಶಿಕ್ಷಣ ಮತ್ತು ಸಂಸ್ಕೃತಿಯಲ್ಲಿ ಅವರು ಮಾಡುತ್ತಿರುವ ಮಹತ್ತರವಾದ ಕಾರ್ಯವನ್ನು ವೀಕ್ಷಿಸಲು ನನಗೆ ಅವಕಾಶವಿದೆ. ಅವರು ಖಂಡಿತವಾಗಿಯೂ ಸಂಸತ್ತಿನ ಕಲಾಪಗಳನ್ನು ಪುಷ್ಟೀಕರಿಸುತ್ತಾರೆಂದು ಮೋದಿ ಟ್ವೀಟ್‌ ಮಾಡಿದ್ದಾರೆ.

ಉಳಿದಂತೆ ರಾಜ್ಯಸಭೆಗೆ ನಾಮನಿರ್ದೇಶನಗೊಂಡಿರುವ ಪಿಟಿ ಉಷಾ, ವಿಜಯೇಂದ್ರ ಪ್ರಸಾದ್​, ಇಳಯರಾಜ ಅವರನ್ನ ಪ್ರಧಾನಿ ನರೇಂದ್ರ ಮೋದಿ ವೈಯಕ್ತಿವಾಗಿ ಟ್ವೀಟ್ ಮಾಡುವ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಪಿಟಿ ಉಷಾ ಅವರು ಭಾರತದ ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಿದ್ದಾರೆಂದು ಬರೆದುಕೊಂಡಿದ್ದಾರೆ.

ವಿ. ವಿಜಯೇಂದ್ರ ಪ್ರಸಾದ್​ ಅವರು ಖ್ಯಾತ ನಿರ್ದೇಶಕ ರಾಜಮೌಳಿ ಅವರ ತಂದೆಯಾಗಿದ್ದು, ಇದೀಗ ರಾಜ್ಯಸಭೆಗೆ ನಾಮನಿರ್ದೇಶನಗೊಂಡಿದ್ದಾರೆ. ಇನ್ನೂ ಸಂಗೀತ ಮಾಂತ್ರಿಕ ಇಳಯರಾಜ ಕೂಡ ನಾಮನಿರ್ದೇಶನಗೊಂಡಿದ್ದು, ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.

Last Updated : Jul 6, 2022, 10:55 PM IST

ABOUT THE AUTHOR

...view details