ಪಾಟ್ನಾ(ಬಿಹಾರ):ಬಿಹಾರದಲ್ಲಿ ಕಬ್ಬಿಣದ ಸೇತುವೆ ಕಳ್ಳತನವಾದ ಬಳಿಕ ಇದೀಗ ಮೊಬೈಲ್ ಟವರ್ ಕಳ್ಳತನ ನಡೆದಿದ್ದು ಎಲ್ಲರನ್ನೂ ಬೆಚ್ಚಿ ಬೀಳಿಸಿದೆ.
ಪಾಟ್ನಾದ ಗಾರ್ಡ್ನಿಬಾಗ್ ಪೊಲೀಸ್ ಠಾಣಾ ವ್ಯಾಪ್ತಿಯ ಕಚ್ಚಿ ತಲಾಖ್ ಪ್ರದೇಶದಲ್ಲಿನ ಖಾಲಿ ಜಾಗದಲ್ಲಿ ಏರ್ಸೆಲ್ ಮೊಬೈಲ್ ಟವರ್ನ್ನು ಸ್ಥಾಪಿಸಲಾಗಿತ್ತು. ಹಲವು ತಿಂಗಳಿನಿಂದ ಮೊಬೈಲ್ ಕಂಪನಿಯು ಟವರ್ ಬಾಡಿಗೆಯನ್ನು ಜಮೀನು ಮಾಲೀಕರಿಗೆ ಪಾವತಿಸಿರಲಿಲ್ಲ. ಶನಿವಾರ 15 ರಿಂದ 20 ಮಂದಿ ಕಂಪನಿಯ ಅಧಿಕಾರಿಗಳಂತೆ ನಟಿಸಿ ಬಂದಿದ್ದು, ಟವರ್ ಬಾಡಿಗೆ ನೀಡಲು ಸಾಧ್ಯವಿಲ್ಲವೆಂದು ಹೇಳಿ ಟವರನ್ನೇ ಕೊಂಡೊಯ್ದಿದ್ದಾರೆ.